Advertisement

ಸ್ಮಶಾನ ಹೋರಾಟದ ದಿನದಿಂದ ನಾಪತ್ತೆಯಾಗಿದ್ದ ಸದಸ್ಯನಿಂದ ಇಲ್ಲಸಲ್ಲದ ಆರೋಪ : ಖಂಡನೆ

08:38 PM Mar 09, 2022 | Team Udayavani |

ಬೇತಮಂಗಲ : ಎಎಸ್‍ಎಸ್‍ಕೆ ಸಂಘಟನೆ ಮೂಲಕ ಕಣ್ಣೂರು ಗ್ರಾಮದಲ್ಲಿ ದಲಿತರ ಸ್ಮಶಾನಕ್ಕಾಗಿ ಸತತವಾಗಿ 5 ದಿನಗಳಿಂದ ಹೋರಾಟ ಮಾಡುತ್ತಿದ್ದು, ಚೆನೈನಲ್ಲಿದ್ದ ಗ್ರಾಪಂ ಸದಸ್ಯ ಮೂರ್ತಿ ದಿಢೀರ್ ಪ್ರತ್ಯಕ್ಷವಾಗಿ ಮಾಧ್ಯಮಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಸಂಸ್ಥಾಪಕ ಸಂದೇಶ್ ಹೇಳಿದರು.

Advertisement

ಪಟ್ಟಣದ ಬಳಿಯ ಕಂಗಾಡ್ಲಹಳ್ಳಿ ಗ್ರಾಪಂಯ ಕಣ್ಣೂರು ಗ್ರಾಮದಲ್ಲಿ ಸತತವಾಗಿ 5 ದಿನಗಳಿಂದ ಅನಿರ್ಧಿಷ್ಠಾವಧಿ ಧರಣಿಯಲ್ಲಿ ಮಾತನಾಡುತ್ತಿದ್ದರು. ನಾನು ಹುಟ್ಟುನಿಂದಲೂ ಧೂಮಪಾನ, ಮಧ್ಯಪಾನಗಳನ್ನು ಬಳಸಲಿಲ್ಲ ಆದರೆ ಸಂಸಾರಸ್ಥ ಮಹಿಳೆಯರೊಂದಿಗೆ ದಲಿತ ಸ್ಮಶಾನ ಹೋರಾಟವನ್ನು ಮೋಜು ಮಸ್ತು ನಲ್ಲಿ ನಡೆಸಲಾಗುತ್ತಿದೆ ಎಂದು ಬಿಂಭಿಸುವುದು ಬೇಸರ ತಂದಿದೆ ಎಂದರು.

ಇದೇ ಗ್ರಾಪಂ ಸದಸ್ಯ ಕುಡಿದು ನಾಯ್ಡು ಕುಟುಂಭಗಳ ಮುಖಂಡರಿಂದ ಹಣ ಪಡೆದು ಮಾತನಾಡಿದ್ದಾರೆ ಎಂದು ಖಂಡಿಸಿದರು. ಮೊದಲು ಇದೇ ಗ್ರಾಪಂ ಸದಸ್ಯ ಮೂರ್ತಿ ಈ ಬಗ್ಗೆ ಹೋರಾಟ ಮಾಡಲು ಹೆಜ್ಜೆ ಇಟ್ಟಿದ್ದರು ಎಂದರು. ಮತ್ತು ನಿಮ್ಮ ಹೋರಾಟಗಳ ಹಿಂದೆ ಇರುತ್ತೇನೆ ನಾನು ಗ್ರಾಪಂ ಸದಸ್ಯನಾಗಿದ್ದು, ಗ್ರಾಪಂ ಕಂಗಾಡ್ಲಹಳ್ಳಿಗೆ ಹೋಗಲು ಸಮಸ್ಯೆಯಾಗುತ್ತದೆ ಸಂದೇಶ್ ಜತೆಗೆ ನೀವು ಹೋರಾಟ ಮಾಡಿ ನಿಮ್ಮ ಬೆನ್ನ ಹಿಂದೆ ನಾನು ಇರುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ : ಗ್ಯಾಂಗ್ರೀನ್ ಕಾಯಿಲೆಗೆ ತುತ್ತಾಗಿ ಆಸ್ಪತ್ರೆಯ ಆವರಣದಲ್ಲೇ ಕೊನೆಯುಸಿರೆಳೆದ ಸರಕಾರಿ ನೌಕರ

ಕೆಲವು ನಾಯ್ಡು ಸಮುದಾಯದಿಂದಲೇ ನಮಗೆ ತೊಂದರೆ ನೀಡುತ್ತಿದ್ದಾರೆ. ನಮ್ಮ ಪರಿಶಿಷ್ಟ ಜಾತಿ ಕಂಡರೆ ಅವರಿಗೆ ಸಹಿಸಿಕೊಳ್ಳಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ನಮಗೆ ಹೀಗೆ ತೊಂದರೆ ನೀಡುವುದು ಬಿಟ್ಟು ನ್ಯಾಯಯುತವಾಗಿ ಹೋರಾಟ ಮಾಡಲಿ ಎಂದು ದೂರಿದರು.

Advertisement

ನಾವು ಮೋಜು ಮಸ್ತಿ ಮಾಡುತ್ತಿರುವುದನ್ನು ಸಾಭೀತು ಪಡಿಸಿದರೆ ಸಂಘಟನೆಯನ್ನು ವಜಾ ಮಾಡಿ ನಿವೃತ್ತಿಯಾಗುತ್ತೇವೆಂದು ಹೇಳಿದರು. ಪ್ರತಿಭಟನಾ ಸ್ಥಳದಕ್ಕೆ ಕುಡಿದು ಬಂದಿದ್ದ ವ್ಯಕ್ತಿಯನ್ನು ಸೇರಿಸಲಿಲ್ಲ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ.

ನಮಗೆ ಸ್ಮಶಾನಗಳಲ್ಲಿ ಮಳುಗುವುದು ಮತ್ತು ಊಟ ಮಾಡುವಂತ ದುಸ್ಥಿತಿ ನಮಗೆ ಬಂದಿಲ್ಲ ಏಕೆಂದರೆ ಇತರೆ ಜನಾಂಗಕ್ಕೆ ಸ್ವಂತ ಜಮೀನುಗಳಿದ್ದು, ಶವ ಸಂಸ್ಕಾರಕ್ಕೆ ಅವಕಾಶವಿದೆ ಆದರೆ ದಲಿತರಿಗೆ ಸ್ವಂತ ಜಮೀನು ಸಹ ಇಲ್ಲದ ಕಾರಣ ಸ್ಮಶಾನಕ್ಕಾಗಿ ಹೋರಾಟ ಮುಂದುವರಿಸಿದ್ದೇವೆಂದರು.
ಹೋರಾಟದಲ್ಲಿ ಇರುವ ಮಹಿಳೆಯರಿಗೆ ಅನಾರೋಗ್ಯ ಸಮಸ್ಯೆ ಇದೆ. ಕಣ್ಣೀರು ಹಾಕಿಕೊಂಡು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇಂತವರ ಬಗ್ಗೆ ಕೀಳಾಗಿ ಮಾತನಾಡುವುದು ಕಂಡರೆ ಬೆನ್ನಿಗೆ ಚೂರಿ ಹಾಕುವಂತ ಕೆಲಸವಾಗುತ್ತಿದೆ. ಸ್ಥಳದಲ್ಲಿ ಪೊಲೀಸ್ ಇಲಾಖೆಯವರು ಕಾವಲಿದ್ದಾರೆ. ಇಂತಹ ಮೋಜು ಮಸ್ತಿ ನಡೆಸಿದ್ದರೆ ಮಾಹಿತಿ ಪಡೆದುಕೊಳ್ಳಲು ಸಲಹೆ ನೀಡಿದರು.

ಸ್ಥಳಕ್ಕೆ ಉಪ ವಿಭಾಗಾಧಿಕಾರಿಗಳು ಬೇಟಿ ನೀಡಿ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು ಈ ಸ್ಥಳವು ಕೋರ್ಟ್ ವಿಚಾರಣೆಯಲ್ಲಿದ್ದು, ಶೀಘ್ರದಲ್ಲೇ ಇತ್ಯಾಥ್ಯವಾಗಲಿದ್ದು, ಸ್ಮಶಾನಕ್ಕೆ ಮಂಜೂರು ಮಾಡುವ ಭರವಸೆ ಕೊಟ್ಟರು.

ಈ ಸಂದರ್ಭದಲ್ಲಿ ಕಣ್ಣೂರು ಗ್ರಾಮದ ದಲಿತ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next