ಭೋಪಾಲ್: ಕರಡಿಯೊಂದು ಗ್ರಾಮಕ್ಕೆ ನುಗ್ಗಿ ಗ್ರಾಮಸ್ಥರ ಮೇಲೆ ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದ ಬೇತುಲ್‌ನಲ್ಲಿ ನಡೆದಿದೆ. ದಾಳಿಯಿಂದಾಗಿ ನಾಲ್ವರು ಗಾಯಗೊಂಡಿದ್ದು, ಎಲ್ಲರೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆತುಲ್ ನ ದಕ್ಷಿಣ ಅರಣ್ಯ ವಿಭಾಗದ ವ್ಯಾಪ್ತಿಯ ಸಿಯೋನಿ ಮತ್ತು ಸಿಹಾರ್ ಗ್ರಾಮಗಳಲ್ಲಿ ಈ ಘಟನೆ ವರದಿಯಾಗಿದೆ. ಭಾನುವಾರ ಬೆಳಗ್ಗೆ ಕರಡಿಯೊಂದು ಗ್ರಾಮಗಳಿಗೆ ನುಗ್ಗಿ ಜನರನ್ನು ಭಯಭೀತಗೊಳಿಸಿತ್ತು.
ತೆರೆದ ಮೈದಾನದಲ್ಲಿ ಮಲವಿಸರ್ಜನೆ ಮಾಡುತ್ತಿದ್ದ ಸಿಯೋನಿ ಗ್ರಾಮಸ್ಥರ ಮೇಲೆ ಕಾಡು ಪ್ರಾಣಿ ದಾಳಿ ಮಾಡಿದೆ. ಅಜಯ್ ಅಡಚಿ, ಜಂಗಲ್ ಅಡಚಿ, ಮುನ್ನಿ ಅಡಚಿ ಮತ್ತು ತನ್ಬಾಜಿ ಬರಸ್ಕರ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಅವರನ್ನು ಮೊದಲು ಭೈನ್ಸ್‌ದೇಹಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಅವರ ಗಾಯಗಳ ತೀವ್ರತೆಯ ಕಾರಣ ಅವರನ್ನು ಬೆತುಲ್‌ನಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ:ಪ್ರಾಣವನ್ನು ಕೊಟ್ಟೇವು, ಶರಣಾಗೆವು : ರಷ್ಯಾದ ಶರಣಾಗತಿಯ ಆಫರ್ ನಿರಾಕರಿಸಿದ ಉಕ್ರೇನ್
ಘಟನೆಯ ನಂತರ ಅರಣ್ಯ ಇಲಾಖೆಯು ಎಚ್ಚೆತ್ತುಕೊಂಡಿದ್ದು, ಕರಡಿಯನ್ನು ಹಿಡಿದು ಕಾಡಿಗೆ ಮರಳಿಸಲು ತಂಡವನ್ನು ಕಳುಹಿಸಲಾಗಿದೆ. ಕರಡಿ ಹಿಡಿಯಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ
ಭೈನಸ್ದೇಹಿ ವ್ಯಾಪ್ತಿಯ ಉಪ ರೇಂಜರ್ ನಾಥು ಲಾಲ್ ಯಾದವ್ ಮಾತನಾಡಿ, ಬಿರು ಬೇಸಿಗೆಯಲ್ಲಿ ಕಾಡು ಪ್ರಾಣಿಗಳು ನೀರು ಅರಸಿ ಮನುಷ್ಯರು ವಾಸಿಸುವ ಪ್ರದೇಶಗಳಿಗೆ ಅಲೆಯುವುದು ಸಾಮಾನ್ಯವಾಗಿದೆ ಎಂದಿದ್ದಾರೆ.