Advertisement

Harapanahalli ಯುವಕನ ಮೇಲೆ ಕರಡಿ ದಾಳಿ; ಗಂಭೀರ ಗಾಯ

06:21 PM Oct 14, 2023 | Team Udayavani |

ಹರಪನಹಳ್ಳಿ: ಜಮೀನಿಗೆ ಹೋಗಿ ವಾಪಸ್ಸು ಮನೆಗೆ ಬರುತ್ತಿದ್ದ ವೇಳೆ ದಾರಿ ಮಧ್ಯೆ ಯುವಕನ ಮೇಲೆ ಕರಡಿಗಳು ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತಾಲೂಕಿನ ಕೆ.ಕಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ಶನಿವಾರ ನಡೆದಿದೆ.

Advertisement

ರಂಗಾಪುರ ಗ್ರಾಮದ ಕೆ.ಆನಂದ (28) ಗಾಯಗೊಂಡವರು.

ಕೆ.ಕಲ್ಲಹಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದು, ಶನಿವಾರ ಬೆಳ್ಳಗ್ಗೆ ಗ್ರಾಮದ ಹೊರವಲಯದಲ್ಲಿರುವ ಜಮೀನಿಗೆ ನೀರು ಹಾಯಿಸಲು ಹೋಗಿ, ವಾಪಾಸ್ಸು ಮನೆಗೆ ಬರುವ ವೇಳೆ ದಾರಿ ಮಧ್ಯೆ ಹಳ್ಳದಲ್ಲಿ ಅವಿತು ಕುಳಿತ್ತಿದ್ದ ಎರಡು ಕರಡಿಗಳು ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿ ಮುಖ ಹಾಗೂ ತಲೆಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ.

ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಯುವಕ ಚೀರಾಡಿದ್ದಾನೆ, ಇದನ್ನು ಗಮನಿಸಿದ ಅಕ್ಕ ಪಕ್ಕದ ರೈತರು ಸ್ಥಳಕ್ಕೆ ಧಾವಿಸಿ ಕರಡಿಗಳನ್ನು ಓಡಿಸಿದ್ದಾರೆ.

ಕರಡಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಯುವಕನನ್ನು ರೈತರು ಹಾಗೂ ಗ್ರಾಮಸ್ಥರು ಹರಪನಹಳ್ಳಿ ಸಾರ್ವಜನಿಕರ ಆಸ್ಪತ್ರೆಗೆ ಕರೆದ್ಯೊಯ್ದಿದ್ದಾರೆ ಯುವಕನಿಗೆ ತೀವ್ರ ಗಾಯಗೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳುಹಿಸಲಾಗಿದೆ.

Advertisement

ಗ್ರಾಮಸ್ಥರಲ್ಲಿ ಆತಂಕ
ಯುವಕನ ಮೇಲೆ ನಡೆದಿರುವ ಈ ಕರಡಿ ದಾಳಿಯಿಂದ ನಮಗೆ ಆತಂಕ ಶುರುವಾಗಿದೆ ಕೆ.ಕಲ್ಲಹಳ್ಳಿ ಗ್ರಾಮವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ, ಅರಣ್ಯ ಸಮೀಪದಲ್ಲಿಯೇ ರೈತರ ಜಮೀನುಗಳು ಹೆಚ್ಚಿದ್ದು, ಜಮೀನಿನ ಕೆಲಸಗಳಿಗೆ ಹೋಗಿ ಬರಲು ಭಯಪಡುವಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಗಳನ್ನು ಹಿಡಿದು ಅರಣ್ಯಪ್ರದೇಶಕ್ಕೆ ಬೀಡಬೇಕು ಹಾಗೂ ರೈತರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆ ಭಾಗದ ರೈತರು ಆಗ್ರಹಿಸಿದ್ದಾರೆ.

ಕೆ.ಕಲ್ಲಹಳ್ಳಿಯಲ್ಲಿ ಯುವಕನ ಮೇಲೆ ಕರಡಿಗಳು ದಾಳಿ ಮಾಡಿರುವುದರ ಬಗ್ಗೆ ಮಾಹಿತಿ ಪಡೆಯಲಾಗಿದೆ, ಕೂಡಲೇ ಕರಡಿಗಳನ್ನು ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಓಡಿಸಲು 12 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ, ಗ್ರಾಮದ ಜನತೆಗೆ ತೊಂದರೆಯಾಗದಂತೆ ರಕ್ಷಣೆ ನೀಡಲು ಕ್ರಮವಹಿಸಲಾಗುವುದು, ಯುವಕನ ಮೇಲೆ ನಡೆದಿರುವ ಕರಡಿ ದಾಳಿಗೆ ಕೂಡಲೇ ಅವರಿಂದ ಚಿಕಿತ್ಸೆ ಕುರಿತು ವರದಿ ತರಿಸಿಕೊಂಡು ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇವೆ.
-ಕೆ.ಮಲ್ಲಪ್ಪ ತಾಲೂಕು ವಲಯ ಅರಣ್ಯಾಧಿಕಾರಿ ಹರಪನಹಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next