Advertisement
ವಿಶೇಷವೆಂದರೆ ಇಲ್ಲಿ ನೀರುಪಾಲಾಗುತ್ತಿರುವವರಲ್ಲಿ ಅನ್ಯ ರಾಜ್ಯ, ಅನ್ಯ ಜಿಲ್ಲೆಯವರೇ ಹೆಚ್ಚು. ದೂರದ ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಹಾಸನ, ಕೇರಳ ಮೊದಲಾದ ಕಡೆಗಳಿಂದ ಪ್ರವಾಸಕ್ಕೆ ಬರುವವರು ಇಲ್ಲಿನ ಬೀಚ್‌ಗಳ ತೆರೆಗಳನ್ನು ಕಂಡು ಈಜಲು ಇಳಿಯುತ್ತಾರೆ. ಸ್ಥಳೀಯರು ಬೇಡವೆಂದರೂ ಕೇಳದ ಮಂದಿ ನೀರಿಗಿಳಿದೇ ಬಿಡುತ್ತಾರೆ. ಬೇರೆ ಜಿಲ್ಲೆಗಳ ನದಿ, ಕೆರೆಗಳಲ್ಲಿ ಹೆಚ್ಚಿನ ಸೆಳೆತ ಇರುವುದಿಲ್ಲ. ಆದರೆ ಕರಾವಳಿ ಕರ್ನಾಟಕದ ಇಲ್ಲಿನ ಬೀಚ್‌ಗಳಲ್ಲಿ ನೀರಿನ ಸೆಳೆತ ಹೆಚ್ಚಿರುತ್ತದೆ. ಮಳೆಗಾಲದಲ್ಲಂತೂ ಮತ್ತೂ ಹೆಚ್ಚಿನ ಪ್ರಕ್ಷುಬ್ದತೆ, ಸೆಳೆತವಿರುತ್ತದೆ. ಇದು ಹೊರಜಿಲ್ಲೆಯ ಯುವಕ-ಯುವತಿಯರ ಅರಿವಿಗೆ ಬರುವುದಿಲ್ಲ. ಸುಳಿ ಪ್ರದೇಶ, ಹೊಗೆ ಕರಗಿ ಆಳವಾದ ಕಂದಕ ಇವುಗಳನ್ನು ಗುರುತಿಸಲೂ ಸಾಧ್ಯವಾಗದು. ಇಲ್ಲಿನ ಸ್ಥಳೀಯರು, ಭದ್ರತ ಸಿಬಂದಿಗಳು ಎಷ್ಟು ಹೇಳಿದರೂ ಅವರು ಕೇಳುವ ಸ್ಥಿತಿಯಲ್ಲಿ ಇರೋದಿಲ್ಲ. ಹಾಗಾಗಿ ಅವರು ನೀರುಪಾಲಾಗಿ ಜೀವವನ್ನೇ ಕಳೆದುಕೊಂಡಿರುತ್ತಾರೆ. ಅದೆಷ್ಟೋ ಮಂದಿಯನ್ನು ಲೈಫ್ಗಾರ್ಡ್‌ಗಳು, ಪೊಲೀಸರು, ಸ್ಥಳೀಯರು ರಕ್ಷಣೆ ಮಾಡಿ ಜೀವ ಉಳಿಸಿದ್ದಾರೆ.
– ವಾಸು, ಬೈಕಂಪಾಡಿ ಬೀಚ್ ಬಳಿ ನಿವಾಸಿ