Advertisement

ಬೆಚ್ಚಗಿನ ಮನೆಯಿರಲಿ

06:00 AM Dec 10, 2018 | |

ಚಳಿಗಾಲದಲ್ಲಿ ಎಲ್ಲರೂ ಬೆಚ್ಚಗಿರಲು ಬಯಸುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.  ಅತಿ ಕಡಿಮೆ ತಾಪಮಾನ ನಾನಾ ತೊಂದರೆಗಳಿಗೆ ಈಡು ಮಾಡುತ್ತದೆ. ದಿನದ ಹೊತ್ತು ಬಿಸಿಲಿನಲ್ಲಿ ಓಡಾಡಿದಾಗ ಆಗದ ಚಳಿಯ ಅನುಭವ ರಾತ್ರಿ ತೀವ್ರವಾಗಿ ಆಗುತ್ತದೆ.  ಚಳಿಗಾಲದಲ್ಲಿ ದಿನದ ಹೊತ್ತು ಪ್ರತಿ ಚದರ ಅಡಿಗಳಲ್ಲಿ  ಬೀಳುವ ಸೂರ್ಯನ ಶಾಖವನ್ನು ನಾವು ಶೇಖರಿಸಿಟ್ಟುಕೊಂಡಷ್ಟೂ ನಮಗೆ ರಾತ್ರಿಯ ಹೊತ್ತು ಗಡಗಡ ನಡುಗುವ ಚಳಿಯಿಂದ ಮುಕ್ತಿ ದೊರೆಯುತ್ತದೆ. 

Advertisement

ಕೂಡಿಟ್ಟ ಹಣದ ಠೇವಣಿ ಹಾಗೂ ಅದರ ಬಡ್ಡಿಯ ಬಗ್ಗೆ ಎಲ್ಲರಿಗೂ ತಿಳಿದಿದೆ.ಆದರೆ ಶಾಖದ ಠೇವಣಿ? ಇಂಗ್ಲೀಷಿನಲ್ಲಿ ಹೀಟ್‌ ಡೆಪಾಸಿಟ್‌ ಅಥವಾ ಸಿಂಕ್‌ ಬಗ್ಗೆ ಗೊತ್ತೆ?  ದಿನದ ಶಾಖವನ್ನು ನಾನಾ ರೀತಿಯಲ್ಲಿ ಸಂಗ್ರಹಿಸಿ, ಅದು ವೃದ್ಧಿಯಾಗುವ ರೀತಿಯಲ್ಲಿ ಅತಿ ಹೆಚ್ಚು ಲಾಭದಾಯಕವಾಗಿ ಬಳಸುವುದಕ್ಕೆ ಹೀಟ್‌ ಡೆಪಾಸಿಟ್‌ ಎನ್ನುತ್ತಾರೆ. ಈ ಹಿಂದೆ ಬೆಂಗಳೂರು ಚಳಿಗೆ ಹೆಚ್ಚು ಖ್ಯಾತಿ ಹೊಂದಿದ್ದರೂ, ಇತ್ತೀಚೆಗೆ ಬಿಸಿಲಿನ ಬೇಗೆಯಿಂದ ತತ್ತರಿಸುವ ಸ್ಥಳಗಳಾದ ಬೀದರ್‌, ಕಲಬುರ್ಗಿಯಲ್ಲೂ ತಾಪಮಾನ ಚಳಿಗಾಲದಲ್ಲಿ ಅತಿ ಕೆಳಗೆ ಇಳಿಯುತ್ತಿದೆ. ನಮ್ಮ ದೇಹದ ತಾಪಮಾನ 37 ಡಿಗ್ರಿ ಸೆಲಿÒಯಸ್‌ ಇದ್ದು, ಸಾಮಾನ್ಯವಾಗಿ ಇಪ್ಪತ್ತಮೂರು ಡಿಗ್ರಿ ಹವಾಮಾನ ಆರಾಮದಾಯಕವಾಗಿರುತ್ತದೆ.   ನಮ್ಮ ದೇಹದ ತಾಪಮಾನಕ್ಕಿಂತ ಅಂದರೆ ಹದಿನೈದು ಹದಿನಾರು ಡಿಗ್ರಿಗಿಂತ ತಾಪಮಾನ ಕೆಳಗಿಳಿದರೆ, ಚಳಿಯ ಅನುಭವ ಆಗುತ್ತದೆ. ಇಪ್ಪತ್ತು ಡಿಗ್ರಿ ಕೆಳಗಿಳಿದರೆ ಗಡಗಡ ನಡುಗುವಂತೆ ಆಗುತ್ತದೆ. 

ಚಳಿಗಾಲದಲ್ಲಿ ಎಲ್ಲರೂ ಬೆಚ್ಚಗಿ
ರಲು ಬಯಸುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.  ಅತಿ ಕಡಿಮೆ ತಾಪಮಾನ ನಾನಾ ತೊಂದರೆಗಳಿಗೆ ಈಡು ಮಾಡುತ್ತದೆ. ದಿನದ ಹೊತ್ತು ಬಿಸಿಲಿನಲ್ಲಿ ಓಡಾಡಿದಾಗ ಆಗದ ಚಳಿಯ ಅನುಭವ ರಾತ್ರಿ ತೀವ್ರವಾಗಿ ಆಗುತ್ತದೆ.  ದಿನದ ಹೊತ್ತು ಹೆಚ್ಚು ಚಳಿ ಇರದೆ ರಾತ್ರಿಮಾತ್ರ ಅತಿಯಾದ ಚಳಿ ಅನುಭಸುವುದು ಕಿರಿಕಿರಿ ಉಂಟು ಮಾಡುವುದರ ಜೊತೆಗೆ ಈ ಮಾದರಿಯ ಹವಾಮಾನ ವೈಪರೀತ್ಯಕ್ಕೆ ಮೈ ಒಡ್ಡುವುದೂ ಕೂಡ ಒಳ್ಳೆಯದಲ್ಲ. ಹಾಗಾಗಿ, ಚಳಿಗಾಲದಲ್ಲೂ ದಿನದ ಹೊತ್ತು ಆರಾಮದಾಯಕವಾಗಿದೆಯಲ್ಲ: ಅದೇ ರೀತಿಯಲ್ಲಿ ರಾತ್ರಿಯ ಹೊತ್ತೂ ಆದಷ್ಟೂ ಬೆಚ್ಚಗೆ ಇರುವಂತೆ ಮಾಡುವುದೇ ಈ ಶಾಖ ಠೇವಣಿಯ ಮುಖ್ಯ ಉದ್ಧೇಶ. ಬೆಳಗಿನ ತಾಪಮಾನವನ್ನು ಪೋಲು ಮಾಡದೆ, ಕೂಡಿಟ್ಟು ಅದರ ಸದ್ಬಳಕೆಯನ್ನು ರಾತ್ರಿಯ ಹೊತ್ತು ಮಾಡಿ, ನಮಗೆ ದಕ್ಕಿದ ಸೂರ್ಯಕಿರಣಗಳ ಶಕ್ತಿಯನ್ನು ಒಂದಷ್ಟು ಪಾಲು ಬಡ್ಡಿಯ ರೂಪದಲ್ಲಿ ವೃದ್ಧಿಸಿಕೊಂಡು ಬೆಚ್ಚಗಿರುವಂತೆ ಮಾಡುತ್ತದೆ.  ಈ ಠೇವಣಿ.

ಎಲ್ಲೆಲ್ಲಿ ಶಾಖ ಠೇವಣಿ?
ಚಳಿಗಾಲದಲ್ಲಿ ದಿನದ ಹೊತ್ತು ಪ್ರತಿ ಚದರ ಅಡಿಗಳಲ್ಲಿ  ಬೀಳುವ ಸೂರ್ಯನ ಶಾಖವನ್ನು ನಾವು ಶೇಖರಿಸಿಟ್ಟುಕೊಂಡಷ್ಟೂ ನಮಗೆ ರಾತ್ರಿಯ ಹೊತ್ತು ಗಡಗಡ ನಡುಗುವ ಚಳಿಯಿಂದ ಮುಕ್ತಿ ದೊರೆಯುತ್ತದೆ. ಇಕ್ಕಟ್ಟಾದ ಪ್ರದೇಶ ಆದರೆ, ಸೂರಿನಲ್ಲಿ ಅತಿ ಹೆಚ್ಚು ಸೂರ್ಯ ಕಿರಣಗಳು ಬೀಳುತ್ತವೆ. ಇತರೆಡೆ ಚಳಿಗಾಲದಲ್ಲಿ ಕರ್ನಾಟಕ ಭೂಪ್ರದೇಶದಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಗೋಡೆಗಳ ಮೇಲೆ ಬೆಳಗಿನಿಂದ ಸಂಜೆಯ ವರೆಗೂ ಕೆಳಕೋನದಲ್ಲಿ ಸೂರ್ಯ ಕಿರಣಗಳು ಬೀಳುತ್ತವೆ. ಹೀಗಾಗಲು ಮುಖ್ಯ ಕಾರಣ – ಚಳಿಗಾಲದಲ್ಲಿ ಸೂರ್ಯ ದಕ್ಷಿಣದಲ್ಲಿದ್ದು, ಉತ್ತರಕ್ಕೆ ಸಂಚರಿಸಿದಂತೆ ಭಾಸವಾದಾಗ ನಮಗೆ ಬೇಸಿಗೆ ಶುರುವಾಗುತ್ತದೆ. ಪೂರ್ವ ಹಾಗೂ ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಉದಯಿಸಿ ಅಸ್ತಮಿಸಿದರೂ ಈ ದಿಕ್ಕುಗಳಲ್ಲಿ ಆತ ಕೇವಲ ಕೆಲವೇ ಗಂಟೆಗಳ ಕಾಲ ಉಳಿಯುತ್ತಾನೆ. ಹಾಗಾಗಿ, ದಿನದ ಅತಿ ಹೆಚ್ಚು ಹೊತ್ತು ಸೂರ್ಯನ ಕಿರಣಗಳನ್ನು ಪಡೆಯುವ ಭಾಗ್ಯ ಹೊಂದಿರುವ ದಿಕ್ಕು ದಕ್ಷಿಣವೇ ಆಗಿರುತ್ತದೆ. ಈ ಕಾರಣದಿಂದಾಗಿಯೇ ಮನೆಗೆ ಅಳವಡಿಸುವ ಸೋಲಾರ್‌ ವಾಟರ್‌ ಹೀಟರ್‌ಗಳನ್ನು ದಕ್ಷಿಣದಿಕ್ಕಿನೆಡೆಗೆ ವಾಲಿದಂತೆ ಇಡುವುದು. ಉತ್ತರ ದಿಕ್ಕಿನಲ್ಲಿ ಚಳಿಗಾಲದ ಅವಧಿಯಲ್ಲಿ ಸೂರ್ಯನ ಕಿರಣಗಳು ಬೀಳದ ಕಾರಣ, ನಾವು ಇಲ್ಲೇನೂ ಉಳಿತಾಯ ಮಾಡಲು ಆಗುವುದಿಲ್ಲ!

ಶೇಖರಣೆ ವಿಧಾನ
ಕಲ್ಲು ಇಟ್ಟಿಗೆ ಗೋಡೆಗಳು ಹೆಚ್ಚು ಶಾಖವನ್ನು ಹಿಡಿದಿಟ್ಟುಕೊಳ್ಳಬಲ್ಲವು. ಆದರೆ ಇವಕ್ಕೆ ನಾವು ಪ್ಲಾಸ್ಟರ್‌ ಮಾಡಿ ಬಣ್ಣ ಬಳಿಯ ಬಾರದು! ತಮ್ಮ ಸಹಜ ಸ್ಥಿತಿಯಲ್ಲಿ ಈ ವಸ್ತುಗಳು ಅತಿ ಹೆಚ್ಚು ಶಾಖವನ್ನು ಹಿಡಿದಿಟ್ಟುಕೊಳ್ಳಬಲ್ಲವು. ಒಮ್ಮೆ ತೆಳು ಬಣ್ಣ, ಅದರಲ್ಲೂ ಫ‌ಳಫ‌ಳಿಸುವ ಬಣ್ಣ ಬಳಿದರೆ, ಸೂರ್ಯನ ಕಿರಣಗಳು ಪ್ರತಿಫ‌ಲನಗೊಂಡು ಗೋಡೆ ಕಾವೇರುವುದೇ ಇಲ್ಲ.  ನಿಮಗೆ ಚಳಿಗಾಲದಲ್ಲಿ ಶಾಖವನ್ನು ಶೇಖರಿಸಿ ಇಟ್ಟುಕೊಳ್ಳಬೇಕೆಂದರೆ- ಇಟ್ಟಿಗೆ ಇಲ್ಲವೆ ಕಲ್ಲಿನ ಗೋಡೆಗಳನ್ನು ದಕ್ಷಿಣದ ಕಡೆ ಕಟ್ಟಿ. ಗೋಡೆಯ ಬಣ್ಣ ಗಾಢ ಆದಷ್ಟೂ ಹೆಚ್ಚು ಶಾಖವನ್ನು ಮೀರಬಲ್ಲದು. ಆದುದರಿಂದ ಕಲ್ಲು ಇಲ್ಲವೇ ಇಟ್ಟಿಗೆಯ ಆಯ್ಕೆ ಮಾಡುವಾಗ, ಗಾಢ ಅಂದರೆ ಕಂದು ಇಲ್ಲವೇ ಕರಿ ಬಣ್ಣದ ಕಲ್ಲುಗಳನ್ನು ಹಾಗೂ ಚೆನ್ನಾಗಿ ಸುಟ್ಟಂತಿರುವ ಕೆಂಪು ಇಟ್ಟಿಗೆಗಳನ್ನು ಬಳಸಿ. ಗೋಡೆಗಳು ಹೆಚ್ಚು ಶಾಖ ಹೀರಲು ಅನುಕೂಲ ಆಗುವ ರೀತಿಯಲ್ಲಿ ಒಂದರ್ಧ ಇಂಚು ಒಳಗಿರುವಂತೆ ಪಾಯಿಂಟಿಂಗ್‌ ಮಾಡಬೇಕು. ಹೀಗೆ ಮಾಡುವುದರಿಂದ ಗೋಡೆಯ ಅಂದ ಹೆಚ್ಚುವುದರ ಜೊತೆಗೆ ಬೇಗನೆ ಬಿಸಿ ಏರುತ್ತದೆ. 

Advertisement

ಶಾಖ ವೃದ್ಧಿಸುವ ವಿಧಾನ
ಮನೆಯೊಳಗೆ ದಿನದ ಹೊತ್ತು ಅಷ್ಟೇನೂ ಚಳಿ ಇರುವುದಿಲ್ಲ. ಚಳಿ ಶುರುವಾಗುವುದೇ ಸೂರ್ಯಾಸ್ತ ಆದಮೇಲೆ. ಕಲ್ಲು ಹಾಗೂ ಇಟ್ಟಿಗೆ ನಿಧಾನವಾಗಿ ಬಿಸಿಯೇರಿದಂತೆಯೇ,  ಹೀರಿಕೊಂಡಿರುವ ಸೂರ್ಯನ ಶಾಖವನ್ನು ಸಂಜೆಯ ನಂತರ ಮನೆಯೊಳಗೆ ಹರಿಸಲು ತೊಡಗುತ್ತವೆ. ಇದಕ್ಕೆ ಥರ್ಮಲ್‌ ಟ್ರಾನ್ಸಫ‌ರ್‌ ಅಥವಾ ಶಾಖ ರವಾನೆ ಎನ್ನಲಾಗುತ್ತದೆ. ಈ ರೀತಿಯಾಗಿ ನಿಧಾನವಾಗಿ ಮನೆಯೊಳಗೆ ಪ್ರವೇಶಿಸುವ ಶಾಖವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿದರೆ, ಚಳಿಗಾಲದಲ್ಲೂ ನಮ್ಮ ಮನೆ ಬೆಚ್ಚಗಿರುತ್ತದೆ. ಮನೆಗಳನ್ನು ವಿನ್ಯಾಸ ಮಾಡುವಾಗಲೇ ಸೂಕ್ತ ಕ್ರಮಗಳನ್ನು ಅಳವಡಿಸಿಕೊಂಡರೆ ಹೆಚ್ಚುವರಿ ಖರ್ಚು ಇಲ್ಲದೆ ಪರಿಸರ ಸ್ನೇಹಿಯಾಗಿಯೂ ನಮ್ಮ ಕಟ್ಟಡಗಳನ್ನು ಮಾಡಬಹುದು. ಗೋಡೆಗಳು ಸಾಕಷ್ಟು ಬೆಚ್ಚಗಿದ್ದಾಗ ಸಹಜವಾಗಿಯೇ ಮನೆಯ ಒಳಾಂಗಣ ಆರಾಮದಾಯಕವಾಗಿರುತ್ತದೆ. ಜೊತೆಗೆ ಬೆಚ್ಚಗಾದ ಮೇಲೆ ಸೂರಿನ ಕಡೆ ಹೋಗುವ ಸ್ವಭಾವವನ್ನು  ಗಾಳಿ ಹೊಂದಿರುತ್ತದೆ. ನಾವು ನಮ್ಮ ಸೂರನ್ನು ಸಹ ಸಾಕಷ್ಟು ಬೆಚ್ಚಗಿರುವಂತೆ ನೋಡಿಕೊಂಡರೆ, ಬೆಚ್ಚನೆಯ ಗಾಳಿ ವೃದ್ಧಿಗೊಂಡು, ರಾತ್ರಿಯ ಹೊತ್ತು, ಒಂದಷ್ಟು ತಣ್ಣನೆಯ ಗಾಳಿ ಮನೆಯೊಳಗೆ ಪ್ರವೇಶಿದರೂ ಅದು ಸಾಕಷ್ಟು ಠೇವಣಿ ಇರುವ ಒಳಾಂಗಣ ಶಾಖದೊಂದಿಗೆ ಬೆರೆಯುವುದರಿಂದ ಮನೆಯೆಲ್ಲ ಥಂಡಿಹೊಡೆಯುವುದಿಲ್ಲ.  ಹಾಗಾಗಿ, ಮನೆಯೊಳಗೆ ಪ್ರವೇಶಿಸುವ ಹೊರಾಂಗಣದ ಗಾಳಿಯೂ ಬೆಚ್ಚಗಾಗಿ ಕೆಳಮಟ್ಟದಲ್ಲಿಯೇ ಉಳಿದು, ನಮ್ಮನ್ನು ಚಳಿುಂದ ರಕ್ಷಿ$ಸುವುದರ ಜೊತೆಗೆ ತಾಜಾತನವನ್ನೂ ಪ್ರಸರಿಸುತ್ತದೆ. 

ಅಲಂಕಾರಿಕವಾಗಿ ಶಾಖ ಠೇವಣಿಗಳು
ನಮ್ಮಲ್ಲಿ ಹೊರಾಂಗಣದ, ಅದರಲ್ಲೂ ಫ್ರಂಟ್‌ ಎಲಿವೇಷನ್‌ – ಮುಮ್ಮುಖಕ್ಕೆಂದು ವಿಶೇಷ ವಿನ್ಯಾಸಗಳನ್ನು ಮಾಡಿ, ಮನೆಯ ಸೌಂದರ್ಯವನ್ನು ವೃದ್ಧಿಸಲು ಪ್ರಯತ್ನಿಸಲಾಗುತ್ತದೆ. ಈ ಮಾದರಿಯ ಬಹುತೇಕ ಡಿಸೈನ್‌ಗಳು ಕೇವಲ ಅಲಂಕಾರಿಕವಾಗಿದ್ದು, ಯಾವುದೇ ರೀತಿಯಲ್ಲಿ ಕಾರ್ಯ ನಿರ್ವಸುವುದಿಲ್ಲ! ಇದಕ್ಕೆ ಬದಲಾಗಿ ನಮಗೆ ದಿನದಹೊತ್ತು ಶಾಖವನ್ನು ಶೇಖರಿಸಿಟ್ಟುಕೊಂಡು, ಸಂಜೆಯ ನಂತರ ಎಲ್ಲವನ್ನೂ ಹೊರಹಾಕದೆ, ಒಂದಷ್ಟನ್ನು ಒಳಾಂಗಣಕ್ಕೆ ಪ್ರಸಾರಮಾಡಿ, ರಾತ್ರಿ ಇಡೀ ಬೆಚ್ಚನೆಯ ಅನುಭವ ನಿಡುವಂತೆಯೂ ಈ ಎಲಿವೇಷನ್‌ ಭಾಗಗಳನ್ನು ಬಳಸಬಹುದು.

– ಆರ್ಕಿಟೆಕ್ಟ್ ಕೆ. ಜಯರಾಮ್‌
ಮಾಹಿತಿಗೆ -98441 32826 

Advertisement

Udayavani is now on Telegram. Click here to join our channel and stay updated with the latest news.

Next