ಉಡುಪಿ: ಹತ್ತು ಜನರ ಕಲ್ಯಾಣದ ಉದ್ದೇಶದಿಂದ ನಾವು ಪರ್ಯಾಯ ಸ್ವೀಕರಿಸುತ್ತಿದ್ದು, ಪ್ರಾರಂಭದಲ್ಲೇ ಹತ್ತು ಜನರಿಗೆ ಉಪದ್ರವವಾಗುವ ಕಾರ್ಯಕ್ರಮವಾಗಬಾರದು, ಎಲ್ಲಾ ಕಾರ್ಯಕ್ರಮಗಳು ಲೋಕೋಪಯೋಗಿಯಾಗಿರಬೇಕು ಎಂದು ಭಾವೀ ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಸೋಮವಾರ ಅನುಗ್ರಹ ಸಂದೇಶ ನೀಡಿದ್ದಾರೆ.
ಕೋವಿಡ್ ಕಾಲಘಟ್ಟದಲ್ಲಿ ಬಂದಿರತಕ್ಕಂತಕ ಪರ್ಯಾಯ ಸರಳವಾಗಿ ನಡೆಯಲಿದೆ. ಜನರೆಲ್ಲರೂ ಸರಕಾರದ ಮಾರ್ಗದರ್ಶನ ಪಾಲಿಸಬೇಕು ಎಂಬುದು ನಮ್ಮ ಅನಿಸಿಕೆ. ನಿಮ್ಮೆಲ್ಲರಿಂದ ವಿಶೇಷವಾದ ಸ್ಪಂದನೆ ನೀರಿಕ್ಷಿಸುತ್ತಿದ್ದೇನೆ. ಮಧ್ವಾಚಾರ್ಯರು, ವಾದಿರಾಜರು ಹಾಕಿಕೊಟ್ಟ ಮಾರ್ಗದರ್ಶನ ಅನುಸರಿಸಿ ಹರಿ,ಗುರುಗಳ ಆಶೀರ್ವಾದಕ್ಕೆ ಭಾಜನರಾಗಬೇಕು ಎಂದರು.
ಪರ್ಯಾಯ ಎಂದರೆ ದೇವರ ಪೂಜೆ ವಹಿಸುವ ಉತ್ಸವ, ವ್ಯಕ್ತಿಗಾಗಿ ಉತ್ಸವ ಅಲ್ಲ. ಭಗವಂತ ಸಕಲರಿಗೂ ಶ್ರೇಯಸ್ಸು ಮಾಡಬೇಕು , ಜಗತ್ತಿನಲ್ಲೆಲ್ಲ ಕಲ್ಯಾಣವಾಗಬೇಕು. ಈ ಉತ್ಸವದಿಂದ ಲೋಕಕ್ಕೆ ಕಲ್ಯಾಣವಾಗುತ್ತದೆ ಎಂದರು.
ಇದನ್ನೂ ಓದಿ : ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು
ಸರಕಾರದ ನಿಯಮ ಪಾಲಿಸಿ ಜನರೆಲ್ಲರೂ ಆರೋಗ್ಯದ ಅನುಸೂಚನೆಗಳನ್ನು ಪಾಲಿಸಿ ಉತ್ಸವದಲ್ಲಿ ಭಾಗಿಯಾಗಬೇಕು. ಸರಕಾರದ ಮಾರ್ಗದರ್ಶನ ಅನುಸರಿಸಿ ಜನರು ಲೋಕಕ್ಕೆ ಉಪಕಾರ ಮಾಡಬೇಕೆಂದು ಸಲಹೆ ನೀಡಿದರು.