ಬಾಗಲಕೋಟೆ: ಕಾಲಕ್ಕೆ ಅನುಗುಣವಾಗಿ ನಮ್ಮ ಕೌಶಲ್ಯವನ್ನು ಉನ್ನತೀಕರಿಸಿಕೊಂಡರೆ ನಮ್ಮ ವೃತ್ತಿ ಜೀವನದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ|ಎಸ್.ಎಸ್. ಇಂಜನಗೇರಿ ಹೇಳಿದರು.
ವಿದ್ಯಾಗಿರಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ, ಕರಕುಶಲ ತರಬೇತಿ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅವರನೆಸ್ ಪ್ರೊಗ್ರಾಂ ಆನ್ ಕಾರ್ಪೇಂಟರಿ ಟೂಲ್ಸ್ ಆ್ಯಂಡ್ ಸ್ಕೀಲ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೆಕ್ಯಾನಿಕಲ್ ಎಂಜನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ|ಎಸ್.ಎಸ್. ಬಳ್ಳಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣದ ಹೊಸ ನೀತಿಯಲ್ಲಿ ಮುಖ ಜ್ಞಾನದೊಂದಿಗೆ ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು. ಕಾರ್ಯಾಗಾರದ ಸಂಯೋಜಕ ಪ್ರೊ| ಎಚ್.ಆರ್. ಪಾಟೀಲ, ಬಾಷ್ ಕರಕುಶಲ ತರಬೇತಿ ಕೇಂದ್ರ ಮ್ಯಾನೇಜರ್ ನಾಗೇಶ ಆನ್‌ಲೈನ್ ಮೂಲಕ ಕುಶಲತೆಯ ಮಹತ್ವವನ್ನು ತಿಳಿಸಿದರು. ಸುಮಾರು 20 ಜನ ಶಿಕ್ಷಕೇತರ ಹಾಗೂ ಬೋಧಕ ಸಿಬ್ಬಂದಿಯವರು ಭಾಗವಹಿಸಿ ವಿವಿಧ ಕರಕುಶಲ ಆಧಾರಿತ ವಸ್ತುಗಳನ್ನು ತಯಾರಿಸಿ ತರಬೇತಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು.
ಡಾ|ಎಂ.ಎಸ್. ಹೆಬ್ಟಾಳ, ಪ್ರೊ| ಎಂ.ಜಿ. ಮಠ, ಪ್ರೊ| ವಿ.ಪಿ. ಗಿರಿಸಾಗರ, ಪ್ರೊ| ಎಸ್.ಎಸ್. ಡಾವಣಗೇರಿ, ಮೌನೇಶ ಬಡಿಗೇರ, ವಿ.ಎಸ್. ಸಿದ್ದಲಿಂಗಪ್ಪನವರ, ಮುತ್ತು ಬಡಿಗೇರ ಮುಂತಾದವರು ಉಪಸ್ಥಿತರಿದ್ದರು. ಜಗದೀಶ ಹೊನ್ನಿಹಾಳ ಮತ್ತು ಎಸ್.ಎಸ್. ಎಡ್ರಾಮಿಮಠ ನಿರೂಪಿಸಿದರು. ಸಹ ಸಂಯೋಜಕ ಆನಂದ ಮಸಳಿ ವಂದಿಸಿದರು.
ಬಾಷ್ಚ್ ತರಬೇತಿ ಕೇಂದ್ರ ಆರಂಭ: ಕರಕುಶಲ ತರಬೇತಿಯನ್ನು ಪ್ರತಿಷ್ಠಿತ ಜರ್ಮನಿ ತಂತ್ರಜ್ಞಾನದ ಬಾಷ್ಚ್ ಅಧಿಕೃತ ತರಬೇತಿ ಕೇಂದ್ರವನ್ನು ವಿದ್ಯಾಗಿರಿಯ ಬಿವಿವಿ ಸಂಘದ ಬಸವೇಶ್ವರ ಎಂಜನಿಯರಿಂಗ್ ಕಾಲೇಜಿನಲ್ಲಿ ಪ್ರಾರಂಭಿಸಲಾಗುತ್ತಿದೆ. ಅದರಿಂದ ಉದ್ಯೋಗ ಬಯಸುವ ಯುವಕರಿಗೆ ಸುವರ್ಣ ಅವಕಾಶ, ಪ್ರಮಾಣ ಪತ್ರ ಆಧಾರಿ ಕುಶಲ ತರಬೇತಿ ನೀಡಲಾಗುವುದು. ಆಸಕ್ತ ಯುವಕರು ಪ್ರೊ|ಎಚ್.ಆರ್. ಪಾಟೀಲ ಮೊ: 9448908119 ಸಂಪರ್ಕಿಸಬಹುದು.