Advertisement
ಕಸ ವಿಲೇವಾರಿಗೆ 600 ಕೋಟಿ ರೂ.ಮೀಸಲಿಡಲಾಗಿದ್ದು ಪ್ರತಿ ಮನೆಗಳಲ್ಲಿ ಕಸ ಬೇರ್ಪಡಿಸಲು ಎರಡು ಕಸದ ಬುಟ್ಟಿ ಮತ್ತು ಒಂದು ಚೀಲವನ್ನು ಪಾಲಿಕೆ ವತಿಯಿಂದಲೇ ಉಚಿತವಾಗಿ ನೀಡಲು 5 ಕೋಟಿ ರೂ. ಅನುದಾನ ನೀಡಲಾಗಿದೆ. ಮನೆಗಳಲ್ಲಿ ಉತ್ತತ್ತಿಯಾಗುವ ಹಸಿ ತ್ಯಾಜ್ಯ ವನ್ನು ಕಾಂಪೋಸ್ಟ್ ಆಗಿ ಪರಿವರ್ತಿಸುವ ಕುರಿತು ಅರಿವು ಮೂಡಿಸಲಾಗುವುದು.
Related Articles
ನಗರದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವವರು, ಕಸ ವಿಂಗಡಿಸದೆ ನೀಡುವವರ ಮೇಲೆ ನಿಗಾ ವಹಿಸಲು ಪ್ರತಿವಾರ್ಡ್‌ಗೆ ಒಬ್ಬ ಮಾರ್ಷಲ್‌ರಂತೆ 198 ಮಾರ್ಷಲ್‌ಗಳನ್ನು ನಿಯೋಜಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಮೂಲದಲ್ಲೇ ಕಸ ವಿಂಗಡನೆ ಕಡ್ಡಾಯಗೊಳಿಸಿದ್ದರೂ ಕಸ ವಿಂಗಡಿಸಿ ನೀಡದವರು,
Advertisement
ಹಸಿ/ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸದ ಪೌರ ಕಾರ್ಮಿಕರು, ನಿವೇಶನ, ಫುಟ್‌ಪಾತ್‌ನಲ್ಲಿ ಕಸ ಸುರಿಯುವವರನ್ನು ಮಾರ್ಷಲ್‌ಗಳು ಪತ್ತೆ ಹಚ್ಚಿ 500 ರೂ. ದಂಡ ವಿಧಿಸಲಿದ್ದಾರೆ. ನೈರ್ಮಲ್ಯ ಕಾಪಾಡಲು ಈ ವ್ಯವಸ್ಥೆ ಜಾರಿಗೆ ಸಜ್ಜಾಗಿರುವ ಪಾಲಿಕೆ, ನಿವೃತ್ತ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ನಿಯೋಜಿಸಲಿದೆ.