ಮಂಗಳೂರಿನ ವಿವಿಧ ಭಾಗಗಳಲ್ಲಿ ವಾರದಲ್ಲೊಂದು ಬಾರಿಯಾದರೂ ಸ್ವಚ್ಚತಾ ಕಾರ್ಯಗಳು ನಡೆಯುತ್ತಿರುತ್ತವೆ. ಆದರೆ ಅವೈಜ್ಞಾನಿಕ ಚರಂಡಿಗಳಿಂದಾಗಿ ಎಷ್ಟೇ ಸ್ವಚ್ಚತಾ ಕೆಲಸಗಳೂ ನಡೆದರೂ ಅಪೂರ್ಣ ಎಂಬಂತಾಗಿದೆ.
ನಗರದ ಬಹುತೇಕ ಭಾಗಗಳಲ್ಲಿ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದಾಗಿ ನೀರು ಸರಿಯಾಗಿ ಹರಿದು ಹೋಗದೆ ಸುತ್ತಮುತ್ತಲಿನ ಮನೆಯವರು ನಿತ್ಯವೂ ಸಂಕಟ ಪಡುವಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಕಾವೂರು, ಗಾಂಧಿನಗರದಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿದ್ದು ಅವೈಜ್ಞಾನಿಕವಾಗಿದೆ. ತಗ್ಗು ಪ್ರದೇಶದಿಂದ ಎತ್ತರಕ್ಕೆ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಮಳೆ ಬಂದಾಗ, ಕೆಲವೊಮ್ಮೆ ಚರಂಡಿಯಲ್ಲಿ ಕೊಳಚೆ ನೀರು ತುಂಬಿದಾಗ ನೀರೆಲ್ಲ ತಗ್ಗು ಪ್ರದೇಶಗಳಿಗೆ ನುಗ್ಗುತ್ತಿದೆ. ಇದರಿಂದ ಸ್ಥಳೀಯರು ಪರದಾಡ ಬೇಕಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮಾಹಿತಿ ನೀಡಿದರೂ ಈವ ರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನಾದರೂ ಮಂಗ ಳೂರು ಮಹಾನಗರ ಪಾಲಿಕೆ ಈ ನಿಟ್ಟಿ ನಲ್ಲಿ ಕ್ರಮಕೈಗೊಂಡು ಈ ಬಾರಿಯ ಮಳೆಗಾಲಕ್ಕೆ ಯಾವುದೇ ತೊಂದರೆ ಆಗದಂತೆ ತುರ್ತು ಕ್ರಮಕೈಗೊಳ್ಳಬೇಕಿದೆ.
ಸ್ಥಳೀಯರು,
ಗಾಂಧಿ ನಗರ,/ಆವೂರು