Advertisement

ಸಮಸ್ಯೆ ತಾತ್ಕಾಲಿಕ; ಚಿಂತಿಸದಿರಿ

07:48 PM Jun 03, 2021 | Team Udayavani |

ನಮ್ಮ ಮನಸ್ಸಿಗೊಂದು ಅಭ್ಯಾಸ ಇದೆ – ಅದಕ್ಕೆ ನಾವು ಹೊರಗಿನಿಂದ ಏನಾದರೂ ಕೆಲಸ ಕೊಡದೆ ಇದ್ದರೆ ಅದು ತನ್ನಷ್ಟಕ್ಕೆ ಏನಾದರೂ ಒಂದು ಕೆಲಸವನ್ನು ಹುಡುಕಿ ಕೊಳ್ಳುತ್ತದೆ. ಅಂತೂ ಸುಮ್ಮನೆ ಇರಲು ಅದಕ್ಕಾಗದು. ಕುಂಬಳಕಾಯಿ ಗೊತ್ತಲ್ಲ; ಕೆಲವೊಮ್ಮೆ ಅದು ಕೊಳೆಯುತ್ತದೆ. ಹಾಗೆ ಕೊಳೆಯುವುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಯಾಕೆಂದರೆ ಅದು ಹಾಳಾಗುವುದು ಒಳಗಿಂದೊಳಗೆ.

Advertisement

ಮನಸ್ಸಿನ ಸ್ವಭಾವವೂ ಹೀಗೆ. ನಾವು ಅದಕ್ಕೆ ಕೆಲಸ ಕೊಡದೆ ಹೋದಾಗ ಅದು ಒಳಗಿಂದೊಳಗೆ ಕೊರೆಯುವ, ಕೊಳೆಯುವ ಕೆಲಸ ಮಾಡುತ್ತ ಹೋಗುತ್ತದೆ.

ನಾವು ಎಲ್ಲರೊಂದಿಗೆ ಇರುವಾಗ ಮಾತುಕತೆ, ಜತೆಗೂಡಿ ಮಾಡುವ ಕೆಲಸ ಗಳು, ಆಟ, ಜಗಳ – ಹೀಗೆ ಚಟುವಟಿಕೆಗಳು ಇರುತ್ತವೆ. ಅದಕ್ಕಾಗಿ ಆಲೋಚನೆ ಮಾಡಬೇಕಾಗುತ್ತದೆ. ಮನಸ್ಸು ಈ ಪ್ರಕ್ರಿಯೆಯಲ್ಲಿ ನಿರತವಾಗಿರುತ್ತದೆ.

ಈಗ ಪ್ರತ್ಯೇಕವಾಗಿರಬೇಕಾದ ಹೊತ್ತಿನಲ್ಲಿ ಮನಸ್ಸು ತನ್ನನ್ನು ತಾನು ತಿನ್ನುವ ಪ್ರಕ್ರಿಯೆಯಲ್ಲಿ ತೊಡಗದಂತೆ ನಾವು ಪ್ರಜ್ಞಾಪೂರ್ವಕವಾಗಿ ಕೆಲವು ಕೆಲಸಗಳನ್ನು ಕೊಡಬೇಕು ಅಥವಾ ಅದು ತನ್ನಷ್ಟಕ್ಕೆ ತಾನು ಮಾಡುವ ಕೆಲಸದ ರೀತಿಯನ್ನು ಬದಲಾಯಿಸಬೇಕು.

  1. ಪ್ರತ್ಯೇಕವಾಗಿರುವುದು, ದುಡ್ಡಿನ ಚಿಂತೆ, ಉದ್ಯೋಗದ ಕಳವಳ, ಆರೋಗ್ಯದ ತಲೆಬಿಸಿ ಖನ್ನತೆಯನ್ನು ಉಂಟು ಮಾಡಿದರೆ ನಮ್ಮ ಆಲೋಚನಾ ಕ್ರಮವೂ ಅದಕ್ಕೆ ಕೊಡುಗೆ ನೀಡಬಹುದು. ಋಣಾತ್ಮಕ ಆಲೋಚನೆಗಳು ಬರಬಹುದು. ಆದರೆ ನಮ್ಮ ನಮ್ಮ ಸನ್ನಿವೇಶವನ್ನು ಹೆಚ್ಚು ಆಶಾದಾಯಕವಾದ, ವಾಸ್ತವವಾದ ರೀತಿಯಲ್ಲಿ ಗಮನಿಸು ವುದಕ್ಕೆ ಸಾಧ್ಯವಿದೆ.
  2. “ಬಾಡಿಗೆ ಕಟ್ಟಲು ಹಣವಿಲ್ಲ’, “ಕೆಲಸ ಹೋಗಬಹುದು’ ಎಂದೆಲ್ಲ ಆಲೋಚನೆಗಳು ಮೂಡುವಾಗ ಪ್ರಜ್ಞಾಪೂರ್ವಕವಾಗಿ ಗಮನಿಸಿ.
  3. ಋಣಾತ್ಮಕ ಆಲೋಚನೆಗಳನ್ನು ಪ್ರಜ್ಞಾಪೂರ್ವಕವಾಗಿ ವಿಮರ್ಶಿಸಿ. ನೆನಪಿಡಿ; ಆ ಆಲೋ ಚನೆಗಳನ್ನು ಬಹಿಷ್ಕರಿಸುವುದಲ್ಲ ಅಥವಾ ನಿರಾಕರಿಸುವುದಲ್ಲ; ವಾಸ್ತವವನ್ನು ನೆನಪಿಸಿ ಕೊಂಡು ಸರಿಯೇ – ತಪ್ಪೇ, ಸಾಧ್ಯವೇ – ಅಸಾಧ್ಯವೇ ಎಂದು ನಿರ್ಧರಿಸುವುದು, ವಿಮರ್ಶಿಸುವುದು.
  4. ಇದಾದ ಬಳಿಕ ಆ ಆಲೋಚನೆ ಗಳನ್ನು ಭರವಸೆದಾಯಕ, ಕಾರ್ಯ ಸಾಧ್ಯ, ಅನುಕೂಲಕರವಾಗಿ ಬದಲಾಯಿಸಿ ಕೊಳ್ಳಲು ಪ್ರಯತ್ನಿಸಿ. ಉದಾಹರಣೆಗೆ, “ಸಾಲದ ಕಂತು ಕಟ್ಟಲು ಇನ್ನೊಂದೆರಡು ತಿಂಗಳು ಸಮಯ ಕೊಡುವಂತೆ ಬ್ಯಾಂಕ್‌ ಮ್ಯಾನೇಜರ್‌ ಜತೆಗೆ ಮಾತ ನಾಡುತ್ತೇನೆ’, “ಈ ಉದ್ಯೋಗ ಹೋದರೆ ಇನ್ನೊಂದು ಉದ್ಯೋಗ ಹುಡುಕಿಕೊಳ್ಳುತ್ತೇನೆ’… ಇತ್ಯಾದಿ.
  5. ಆಲೋಚನೆಗಳನ್ನು ಬದಲಾಯಿಸುವುದು, ಋಣಾತ್ಮಕ ಆಲೋಚನೆಗಳನ್ನು ಧನಾತ್ಮಕವಾಗಿ ಪರಿವರ್ತಿಸುವುದು – ಇದು “ಆಗುವ- ಹೋಗುವಂಥದ್ದಲ್ಲ’ ಅನ್ನಿಸಬಹುದು. ಆದರೆ ನಮ್ಮ ಮನಸ್ಸನ್ನು ದುಡಿಸಿಕೊಳ್ಳುವುದು ನಮಗೆ ಗೊತ್ತಿರಬೇಕು. ಒಂದೇಟಿಗೆ ಇದು ಸಾಧ್ಯವಾಗದೆ ಇರಬಹುದು; ಪ್ರಯತ್ನವನ್ನು ಮಾತ್ರ ಬಿಡುವುದು ಬೇಡ. ನಿಧಾನವಾಗಿ ಮನಸ್ಸು ನಾವು ಹೇಳಿದಂತೆ ಕೇಳಲಾರಂಭಿಸುತ್ತದೆ.

ಈಗ ಸಮಸ್ಯೆಗಳ ಬಗ್ಗೆ ಚಿಂತೆ ಮಾಡುವ ಬದಲು ಅದನ್ನು ಹೇಗೆ ಉತ್ತಮ ರೀತಿಯಲ್ಲಿ ಪರಿಹರಿಸಿಕೊಳ್ಳಬಹುದು ಅನ್ನುವು ದರತ್ತ ಗಮನವಿರಲಿ. ವಾಸ್ತವ ಹೇಗಿದೆಯೋ ಹಾಗೇ ಸ್ವೀಕರಿಸು ವುದು ಉತ್ತಮ. ಇದು ಎಲ್ಲರಿಗೂ ಕಷ್ಟವಾದರೂ ಅನಿವಾರ್ಯ ಅನ್ನುವುದನ್ನು ಒಪ್ಪಿಕೊಳ್ಳಲೇ ಬೇಕು. ಸಮಸ್ಯೆಗಳು ತಾತ್ಕಲಿಕವಷ್ಟೇ. ಚಿಂತೆ, ಸಮಸ್ಯೆ, ಆತಂಕವನ್ನು ಬೇರೆಯವ ರೊಂದಿಗೆ ಹಂಚಿಕೊಳ್ಳಿ.

Advertisement

 

– ಡಾ| ಮಹಿಮಾ ಆಚಾರ್ಯ, ಮನೋವೈದ್ಯರು, ಕೋಟೇಶ್ವರ

Advertisement

Udayavani is now on Telegram. Click here to join our channel and stay updated with the latest news.

Next