Advertisement

ಅಂಬೇಡ್ಕರ್‌ರಂತಾಗುವ ಮನೋಭಾವ ಹೊಂದಿ

08:06 PM Aug 28, 2020 | Team Udayavani |

ಹೊಸಪೇಟೆ: ಅಂಬೇಡ್ಕರ್‌ರಂತೆ ಆಗುವ ಮನೋಭಾವವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ಡಾ| ವೆಂಕಟಗಿರಿ ದಳವಾಯಿ ಹೇಳಿದರು.

Advertisement

ತಾಲೂಕಿನ ಕಮಲಾಪುರ ಬುದ್ಧ ಬಸವ ಅಂಬೇಡ್ಕರ್‌ ಕ್ಷೇಮಾಭಿವೃದ್ಧಿ ಟ್ರಸ್ಟ್‌ ವತಿಯಿಂದ ಮಂಗಳವಾರ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್‌ ಅವರು ವಿದ್ಯಾರ್ಥಿಯಾಗಿದ್ದಾಗ ಪ್ರತಿಭಾ ಪುರಸ್ಕಾರದ ಪುಸ್ತಕದಿಂದ ಸ್ಫೂರ್ತಿ ಹೊಂದಿದ್ದರು. ಹಾಗೇನೆ ಎಂದಿಗೂ ಅವರು ಬಡತನವನ್ನು ತೋರಿಸಿಕೊಳ್ಳಲಿಲ್ಲ. ನಿತ್ಯವೂ ಸೂಟ್‌ ಧರಿಸಿಕೊಂಡಿರುತ್ತಿದ್ದರು. ಟ್ರಸ್ಟ್‌ ವಿದ್ಯಾರ್ಥಿಗಳಿಗೆ ಪುರಸ್ಕಾರ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಕನ್ನಡ ವಿವಿಯ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಡಾ| ಗೋವಿಂದ ಮಾತನಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವನ್ನು ಟ್ರಸ್ಟ್‌ ಕೈಗೊಂಡಿರುವುದು ಸ್ತುತ್ಯಾರ್ಹ ಸಂಗಾತಿಯೇ ಸರಿ. ಪಿಯುಸಿ ಪಾಸಾದ ವಿದ್ಯಾರ್ಥಿಗಳು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿರುವ ಹಿಂದುಸ್ತಾನಿ ಸಂಗೀತದ ಕೋರ್ಸ್ ನ ಸದುಪಯೋಗಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. ಡಿಸಿಸಿ ಬ್ಯಾಂಕಿನ ಅಧಿಕಾರಿ ಉಮಾಪತಿ ಮಾತನಾಡಿ, ಮುಂದಿನ ವರ್ಷ ಹತ್ತನೆಯ ತರಗತಿ  ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗೆ 10 ಸಾವಿರ ನಗದು ಪುರಸ್ಕಾರ ನೀಡುವುದಾಗಿ ಭರವಸೆ ನೀಡಿದರು. ಬುದ್ಧ ಬಸವ ಅಂಬೇಡ್ಕರ್‌ ಕ್ಷೇಮಾಭಿವೃದ್ಧಿ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ  -ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪುರಸ್ಕರಿಸಲಾಯಿತು. ಮಾಳಮ್ಮನಿಗೆ ಗೌರವ  ಪೂರ್ವಕವಾಗಿ ಸನ್ಮಾನಿಸಲಾಯಿತು. ತಿಪ್ಪೇಸ್ವಾಮಿ ನಿರೂಪಿಸಿದರು. ಶಿಕ್ಷಕ ಅಂಬಣ್ಣ ವಂದಿಸಿದರು.

ಕನ್ನಡ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ| ಎ.ವೆಂಕಟೇಶ್‌, ಜಿ. ಶಿವುಕುಮಾರ, ಗ್ಯಾನಪ್ಪ ಬಡಿಗೇರ, ವಕೀಲ ಸೋಮಶೇಖರ್‌ ಹಾಗೂ ಶಿಕ್ಷಕ ಮಂಜುನಾಥ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next