Advertisement

ಬಿಇ ಕನ್ನಡ ಮಾಧ್ಯಮಕ್ಕೆ ಶೂನ್ಯ ಪ್ರವೇಶ : 90 ಸೀಟುಗಳಲ್ಲಿ ಒಂದು ಸೀಟೂ ಭರ್ತಿಯಾಗಿಲ್ಲ

02:32 AM Dec 28, 2021 | Team Udayavani |

ಬೆಂಗಳೂರು: ಮಾತೃಭಾಷೆ ಕನ್ನಡ ದಲ್ಲಿಯೇ ಎಂಜಿನಿಯರಿಂಗ್‌ ಶಿಕ್ಷಣ ನೀಡಬೇಕು ಎಂಬ ಸದುದ್ದೇಶದಿಂದ ರಾಜ್ಯ ಸರಕಾರ ಮೊದಲ ಬಾರಿಗೆ ಆರಂಭಿಸಿದ ಕೋರ್ಸ್‌ ಗಳಿಗೆ ಆರಂಭಿಕ ಹಿನ್ನಡೆ ಉಂಟಾ ಗಿದೆ. ಪ್ರಥಮ ವರ್ಷ ಕನ್ನಡದಲ್ಲಿ ಸಿವಿಲ್‌ ಮತ್ತು ಮೆಕ್ಯಾನಿಕಲ್‌ ಎಂಜಿನಿಯ ರಿಂಗ್‌ ಕೋರ್ಸ್‌ ಗಾಗಿ 90 ಸೀಟುಗಳನ್ನು ಮೀಸ ಲಿಟ್ಟರೂ, ಯಾವೊಬ್ಬ ವಿದ್ಯಾರ್ಥಿಯೂ ಇದನ್ನು ಆಯ್ಕೆ ಮಾಡಿ ಕೊಂಡಿಲ್ಲ.

Advertisement

ಕನ್ನಡದಲ್ಲಿ ಎಂಜಿನಿಯರಿಂಗ್‌ ಮಾಡಿದರೆ ಕರ್ನಾಟಕದಲ್ಲಿಯೇ ಉಳಿದು ಬಿಡುತ್ತೇವೆ ಅಥವಾ ಬೇರೆ ರಾಜ್ಯಗಳಲ್ಲಿ ಹಾಗೂ ಖಾಸಗಿ ಕಂಪೆನಿಗಳಲ್ಲಿ ಉದ್ಯೋಗ ಸಿಗದಿದ್ದರೆ ಏನು ಮಾಡುವುದು ಎಂಬ ಆತಂಕ ಇದಕ್ಕೆ ಕಾರಣ. ಹೀಗಾಗಿ, ಕನ್ನಡ ಮಾಧ್ಯಮದಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ ಆಯ್ಕೆ ಮಾಡಿಕೊಂಡು ಕೊನೆಗೆ ಇಂಗ್ಲಿಷ್‌ ಮಾಧ್ಯಮಕ್ಕೆ ಬದಲಾಯಿಸಿಕೊಳ್ಳುತ್ತಿದ್ದಾರೆ. ತಮಿಳು ನಾಡು ಸಹಿತ ಹಲವು ರಾಜ್ಯಗಳಲ್ಲಿ ಆಯಾ ರಾಜ್ಯಭಾಷೆಗಳಲ್ಲಿ ಎಂಜಿನಿಯರಿಂಗ್‌ ಶಿಕ್ಷಣ ನೀಡಲಾಗುತ್ತಿದೆ. ನಮ್ಮಲ್ಲೂ ಅದೇ ವ್ಯವಸ್ಥೆ ಬೇಕು ಎಂದು ಕನ್ನಡ ಮಾಧ್ಯಮದ ಕೋರ್ಸ್‌ ಆರಂಭಿಸಲಾಗಿತ್ತು.

ಕನ್ನಡ ಮಾಧ್ಯಮಕ್ಕೆ ಸಿದ್ಧತೆ
ರಾಜ್ಯ ಸರಕಾರದ ನಿರ್ದೇಶನದಂತೆ ವಿಟಿಯು ಮತ್ತು ಎಐಸಿಟಿಇ ಸಹಯೋಗದಲ್ಲಿ ಪಠ್ಯಕ್ರಮ ರಚಿಸಲಾಗಿದೆ. ಕನ್ನಡ ಮಾಧ್ಯಮದಲ್ಲಿ ಬೋಧಿಸಲು ಪ್ರಾಧ್ಯಾಪಕರಿಗೂ ತರಬೇತಿ ನೀಡಲಾಗಿದೆ. ಹೆಚ್ಚುವರಿ ಅಧ್ಯಯನಕ್ಕಾಗಿ ಪುಸ್ತಕಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸುವ ಕೆಲಸಗಳೂ ನಡೆಯುತ್ತಿವೆ. ಶಾಲೆ ಮತ್ತು ಕಾಲೇಜು ಹಂತದಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಪ್ರಾಥಮಿಕ ಹಂತದಿಂದಲೇ ವಿಜ್ಞಾನ ಮತ್ತು ಗಣಿತವನ್ನು ಕನ್ನಡದಲ್ಲಿಯೇ ಬೋಧಿಸಬೇಕು ಎಂದಿದ್ದಾರೆ ಮೈಸೂರು ಮಹಾರಾಜ ತಾಂತ್ರಿಕ ವಿಶ್ವವಿದ್ಯಾಲಯದ ಅಧ್ಯಕ್ಷ ಡಾ| ಮುರಳಿ.

ಯಾವ ಕಾಲೇಜುಗಳಲ್ಲಿ?
2021-22ನೇ ಸಾಲಿನಲ್ಲಿ ಉನ್ನತ ಶಿಕ್ಷಣ ಇಲಾಖೆಯು ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ (ಸಿವಿಲ…), ಚಿಕ್ಕಬಳ್ಳಾಪುರದ ಎಸ್‌.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯ (ಸಿವಿಲ್), ಮೈಸೂರಿನ ಮಹಾರಾಜ ತಾಂತ್ರಿಕ ಮಹಾವಿದ್ಯಾನಿಲಯ (ಮೆಕ್ಯಾನಿಕಲ್‌) ದಲ್ಲಿ ತಲಾ 30 ಸೀಟುಗಳಂತೆ 90 ಸೀಟುಗಳನ್ನು ಕನ್ನಡ ಮಾಧ್ಯಮದಲ್ಲಿ ಪ್ರಕಟಿಸಿದೆ. ಸಿಇಟಿ ಮೊದಲ ಸುತ್ತಿನಲ್ಲಿ ಒಬ್ಬ ಮೆಕ್ಯಾನಿಕಲ್‌ ಹಾಗೂ ಎರಡನೇ ಸುತ್ತಿನಲ್ಲಿ ಇಬ್ಬರು ಸಿವಿಲ್‌ ಸೀಟುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಕೊನೆಗೆ ಮೂವರೂ ತಮ್ಮ ಸೀಟುಗಳನ್ನು ರದ್ದು ಮಾಡಿಸಿಕೊಂಡಿದ್ದಾರೆ.

ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಸಹಿತ ವಿದ್ಯಾರ್ಥಿ ಗಳಿಗಿರುವ ಅವಕಾಶಗಳನ್ನು ಸರಕಾರ ಘೋಷಿಸಿದರೆ, ವಿದ್ಯಾರ್ಥಿಗಳು ಕನ್ನಡ ಮಾಧ್ಯಮ ದಲ್ಲಿ ವ್ಯಾಸಂಗ ಮಾಡಲು ಮುಂದಾಗುತ್ತಾರೆ. –

Advertisement

 – ಡಿ.ಟಿ. ರಾಜು, ಪ್ರಾಂಶುಪಾಲರು, ಎಸ್‌ಜೆಸಿಐಟಿ, ಚಿಕ್ಕಬಳ್ಳಾಪುರ

- ಎನ್‌.ಎಲ್‌. ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next