ತುಮಕೂರು: ನಗರದ ಸರ್ವಾಂಗೀಣ ಅಭಿವೃದ್ಧಿಯ ಕನಸು ಹೊಂದಿದ್ದೇವೆ. ಬಡವರು ಬಡವರಾಗಿಯೇ ಇರಲು ಸ್ಮಾರ್ಟ್ ಸಿಟಿ ಯೋಜನೆ ರೂಪಿಸಿಲ್ಲ, ಎಲ್ಲ ಅಧಿಕಾರಿಗಳ ಸಹಕಾರದಿಂದ ನಗರದಲ್ಲಿ ಹೊಸತನ ಕಾಣಬೇಕು. ಜಿಲ್ಲಾಧಿಕಾರಿ, ಸಂಸದ ಮತ್ತು ಶಾಸಕರಿಗಿರುವ ಕಾಳಜಿ ಇತರೆ ಅಧಿಕಾರಿಗಳಿಗೇಕೆ ಇಲ್ಲ ಎಂದು ಸಂಸದ ಜಿ.ಎಸ್.ಬಸವರಾಜ್ ಪ್ರಶ್ನಿಸಿದರು.
ನಗರದ ಟೌನ್‌ಹಾಲ್‌ನಲ್ಲಿರುವ ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಚೇರಿಯಲ್ಲಿ ದಿಶಾ ಸಮಿತಿ ರಚಿಸಿ ರುವ ತುಮಕೂರು ಜಿಐಎಸ್ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, 80 ವರ್ಷವಾಗಿರುವ ನಾನು ಡಿಜಿಟಲ್ ದಾಖಲೆ ಮಾಡುವ ಮೂಲಕ ಪ್ರಧಾನಿ ನರೇಂದ್ರಮೋದಿ ಕನಸಿನ ಡಿಜಿಟಲ್ ಇಂಡಿಯಾ ಮೂಲಕ ಜಿಲ್ಲೆಯ, ನಗರದ ಬಡ ಜನತೆಗೆ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದೇನೆ. ಕಾಟಾಚಾರದ ಡೇಟಾ ನಮಗೆ ಬೇಕಿಲ್ಲ ಎಂದು ಕಿಡಿಕಾರಿದರು.
ಸರ್ಕಾರಕ್ಕೆ ಮನವಿ: ನಗರದಲ್ಲಿ ವಸತಿ ಇಲ್ಲದವರ ಬಡಾವಾಣೆವಾರು ಜಿಐಎಸ್ ಲೇಯರ್ ನೀಡಿ ಎಂದರೆ ಕ್ಲಿಕ್ ಮಾಡಿದ ತಕ್ಷಣ ಮಾಹಿತಿ ದೊರೆಯ ಬೇಕು. ವ್ಯಕ್ತಿವಾರು ಮಾಹಿತಿಯೂ ಲಭ್ಯವಾಗ ಬೇಕು., ಇವರಿಗೆ ನಗರದ ಯಾವ ಭಾಗದಲ್ಲಿ ಸರ್ಕಾರಿ ಜಮೀನು ಅಥವಾ ಭೂ ಸ್ವಾಧೀನ ಮಾಡುವ ಮೂಲಕ ನಿವೇಶನ ನೀಡಲು ಗುರುತಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂಬ ಡಿಜಿಟಲ್ ಮಾಹಿ ತಿಯೂ ಬರಬೇಕು ಎಂದು ಎಚ್ಚರಿಸಿದರು.
ಜಿಐಎಸ್ ಲೇಯರ್ ಬಗ್ಗೆ ಪಾಠ: ಬಡವರ ಜೀವನ ಶೈಲಿ ಬದಾಲಾಯಿಸುವುದು ಸ್ಮಾರ್ಟ್ ಸಿಟಿ ಕನಸು. ಇದು ಜಿಐಎಸ್ ಲೇಯರ್ ಮಾಡುವ ಗುರಿ ಎಂದು ಜಿಐಎಸ್ ಲೇಯರ್ ಬಗ್ಗೆ ಪಾಠ ಮಾಡಿದರು. ಜಿಐಎಸ್ ಮಾಸ್ಟರ್ ಪ್ಲಾನ್ ಕಟ್ ಅಂಡ್ ಪೇಸ್ಟ್ ಆಗಿರಬಾರದು: ಪ್ರತಿ ಸಭೆಯಲ್ಲೂ ಹಿಂದಿನ ಸಭೆ ಯಲ್ಲಿ ಚರ್ಚೆಯಾದ ಲೇಯರ್ಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಲಾಗುವುದು.
ನಡವಳಿಕೆ ಯಲ್ಲಿ ಪ್ರತಿಯೊಬ್ಬ ಸದಸ್ಯರ ಸಲಹೆ ದಾಖಲೆ ಮಾಡಿಕೊಂಡು ಮುಂದಿನ ಸಭೆಯಲ್ಲಿ ಉತ್ತರಿಸಬೇಕು. ಪ್ರತಿ ಸಭೆ ಯಲ್ಲೂ ಈ ಇಲಾಖೆಯ ಲೇಯರ್ ಪೂರ್ಣ ಗೊಂಡಿದೆ ಸಲಹೆಗಳಿದ್ದಲ್ಲಿ ಸಾರ್ವಜನಿಕರು ಸಲಹೆ ನೀಡಬಹುದು ಎಂಬ ಮನವಿಯೊಂದಿಗೆ ಸಾರ್ವ ಜನಿಕರ ವೀಕ್ಷಣೆಗೂ ಅವಕಾಶ ಕಲ್ಪಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು. ಸದಸ್ಯರಾದ ಕುಂದರನಹಳ್ಳಿ ರಮೇಶ್, ಸುಜ್ಞಾನ ಹೀರೇಮಠ ಚಂದ್ರಶೇಖರ್, ನರಸಿಂಹಮೂರ್ತಿ ಮತ್ತಿತರರು ಇದ್ದರು.
ತಕ್ಷಣ ಮಾಹಿತಿ ಸಿಗಬೇಕು: ನಗರದ ಒಂದು ಅಂಗವಾಡಿಯಿಂದ ಆರಂಭಿಸಿ ಇಸ್ರೋ ವರೆಗಿನ ಪ್ರತಿಯೊಂದು ಇಲಾಖೆಯೂ ನಗರದಲ್ಲಿ ಯಾವ ಆಸ್ತಿ ಹೊಂದಿದೆ, ಖಾಸಗಿ ಆಸ್ತಿ ಎಷ್ಟಿದೆ, ಸರ್ಕಾರಿ ಆಸ್ತಿ ಎಷ್ಟಿದೆ ಎಂದರೆ ಕ್ಲಿಕ್ ಮಾಡಿದ ತಕ್ಷಣ ಮಾಹಿತಿ ಇರಬೇಕು. ಒಂದೊಂದು ಇಂಚಿನ ಭೂಮಿಯ ಡಿಜಿಟಲ್ ದಾಖಲೆ ಇರ ಬೇಕು, ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್ ಎಂದರೆ ಕಟ್ ಅಂಡ್ ಪೇಸ್ಟ್ ಆಗಬಾರದು, ಎಲ್ಲಾ ಮಾಹಿತಿ ಕರಾರುವಕ್ಕಾಗಿ ಇರಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಸೂಚಿಸಿದರು.