ನಿನ್ನನ್ನು ಮರೆಯಬೇಕು ಅಂತ ನಾನಾ ಕಸರತ್ತುಗಳನ್ನು ಮಾಡಿದೆ. ಪ್ರಯೋಜನವಾಗಲಿಲ್ಲ. ಏನೇ ತಿಪ್ಪರಲಾಗ ಹಾಕಿದರೂ ನಿನ್ನನ್ನು ಮರೆಯಲು ಆಗುತ್ತಿಲ್ಲ, ಏನ್ಮಾಡ್ಲಿ? ಈ ಮನಸ್ಸು ಅನ್ನೋದಿದೆಯಲ್ಲ, ಬಡ್ಡಿಮಗಂದು, ಅದು ನನ್ನ ಹಿಡಿತಕ್ಕೇ ಸಿಗುತ್ತಿಲ್ಲ. ಅದ್ಹೇಗೋ ನಿನ್ನ ನೆನಪುಗಳು ನುಸುಳಿ ಬಿಡುತ್ತವೆ.
ಹಾಯ್ ಸ್ವೀಟಿ,
ಕ್ಷಮೆ ಇರಲಿ, ಈ ನಿನ್ನ ಮಾಜಿ ಪ್ರೇಮಿಗೆ ಊಹೂ, ಒಬ್ಬ ಅನಾಮಿಕನಿಗೆ. ಅಂದು ನೀ ಹೇಳಿದ್ದೆ, “ಇನ್ನೊಮ್ಮೆ ನನ್ನನ್ನು ಆ ಹೆಸರಿನಿಂದ ಕರೀಬೇಡ. ಒಂಥರಾ ಹಿಂಸೆ ಆಗುತ್ತೆ’ ಅಂತ. ನೀನು ಹಾಗಂದಿದ್ದು ಚೆನ್ನಾಗಿ ನೆನಪಿದೆ. ಆದ್ರೆ, ಏನ್ಮಾಡಲಿ, ಈ ನನ್ನ ನಲು°ಡಿ ಹೊಮ್ಮುತ್ತಿರುವುದು ನಿನ್ನನ್ನು ಹುಚ್ಚನಂತೆ ಪ್ರೀತಿಸಿದ, ಅನುಕ್ಷಣವೂ ನಿನ್ನ ಸಾಮೀಪ್ಯವನ್ನೇ ಬಯಸುತ್ತಾ, ಸದಾ ನಿನ್ನ ಹೆಸರನ್ನೇ ಜಪಿಸುತ್ತಿದ್ದ ನನ್ನ ಎದೆ ಎಂಬ ಎರಡಕ್ಷರದ ಪುಟ್ಟ ಗೂಡಿನಿಂದ. ಇರಲಿ, ಈ ತಪ್ಪು ಮರುಕಳಿಸದಂತೆ ಬದುಕಲು ಯತ್ನಿಸುವೆ. ಮೊನ್ನೆ ನಿನ್ನನ್ನು ಬಸ್‌ಸ್ಟಾಪಿನಲ್ಲಿ ನೋಡಿದೆ. ಜೊತೆಗಿದ್ದವನು, ನಿನ್ನ ಕೈಯಿಂದ ಉಂಗುರದ ಶಾಸ್ತ್ರ ಮಾಡಿಸಿಕೊಂಡವನು ಅಂತ ಅಂದುಕೊಂಡಿದ್ದೇನೆ. ಅವನೊಂದಿಗಾದರೂ ಚೆನ್ನಾಗಿರು.
ನಿನ್ನನ್ನು ಮರೆಯಬೇಕು ಅಂತ ನಾನಾ ಕಸರತ್ತುಗಳನ್ನು ಮಾಡಿದೆ. ಪ್ರಯೋಜನವಾಗಲಿಲ್ಲ. ಏನೇ ತಿಪ್ಪರಲಾಗ ಹಾಕಿದರೂ ನಿನ್ನನ್ನು ಮರೆಯಲು ಆಗುತ್ತಿಲ್ಲ, ಏನ್ಮಾಡ್ಲಿ? ಈ ಮನಸ್ಸು ಅನ್ನೋದಿದೆಯಲ್ಲ, ಬಡ್ಡಿಮಗಂದು, ಅದು ನನ್ನ ಹಿಡಿತಕ್ಕೇ ಸಿಗುತ್ತಿಲ್ಲ. ಅದ್ಹೇಗೋ ನಿನ್ನ ನೆನಪುಗಳು ನುಸುಳಿ ಬಿಡುತ್ತವೆ. ಅಂದಿನ ನಮ್ಮ ಮೊದಲ ಭೇಟಿ¿å ಸಂದರ್ಭ, ಇದೀಗ ನೇರ ಪ್ರಸಾರವಾಗುತ್ತಿದೆಯೇನೋ ಎಂಬಷ್ಟು ಸ್ಪಷ್ಟವಾಗಿ ನೆನಪಿದೆ. ಅವತ್ತು ನಾನು ನಿನ್ನಲ್ಲಿ ಪ್ರೇಮ ಭಿಕ್ಷೆ ಬೇಡಿದ ರೀತಿ, ಅದಕ್ಕೆ ನೀನು ಸ್ಪಂದಿಸಿದ ರೀತಿ ಎಲ್ಲವೂ ನನ್ನೆದೆಯಲ್ಲಿ ಮಲೆನಾಡ ಸಿರಿಯಂತೆ ಕಂಗೊಳಿಸುತ್ತಿವೆ.
ನಾನು-ನೀನು ಭವಿಷ್ಯದ ಬಗ್ಗೆ ಅದೆಷ್ಟು ಕನಸು ಕಂಡಿದ್ವಿ. ಆ ದಿನಗಳನ್ನು ನೆನೆದರೆ ಮನಸ್ಸು ತುಂಬಿ ಬರುತ್ತದೆ. ನಿನ್ನೊಂದಿಗೆ ಕಳೆದ ಆ ಮಧುರ ಕ್ಷಣಗಳಿಗೆ ಲೆಕ್ಕ ಇಟ್ಟವರ್ಯಾರು? ಒಂದು ದಿನ ನಿನ್ನನ್ನು ಭೇಟಿ ಮಾಡದಿದ್ದರೂ, ನಾನು ಅದೆಷ್ಟು ಚಡಪಡಿಸುತ್ತಿದ್ದೆ. ಆಗ ನೀನು, “ಒಂದು ವೇಳೆ ನಾನು ಶಾಶ್ವತವಾಗಿ ಬಿಟ್ಟು ಹೋದರೆ ಏನ್ಮಾಡ್ತೀಯಾ?’ ಎಂದು ರೇಗಿಸುತ್ತಿದ್ದೆ. ಆಗ ನಾನದನ್ನು ತಮಾಷೆ ಅಂದುಕೊಂಡಿದ್ದೆ. ಆದರೆ, ಇದೇ ಭವಿಷ್ಯದ ಘೋರ ಸತ್ಯವೆಂಬುದು ನನ್ನ ಅರಿವಿಗೆ ಬಾರದೆ ಹೋಯಿತು. ಒಂದು ಸಾರಿ ಅತ್ತು ಹಗುರಾಗೋಣವೆಂದರೆ ಆಗುತ್ತಿಲ್ಲ. ಏನ್ಮಾಡಲಿ? ಇರಲಿ, ನೀನಾದರೂ ಸುಖವಾಗಿರು.
ಮತ್ತೆ ನಿನ್ನನ್ನು ಭೇಟಿಯಾಗಲಿಚ್ಛಿಸದ
ನಾಗರಾಜ್ ಬಿ., ಚಿಂಚರಕಿ