Advertisement
ಪರೀಕ್ಷೆಯಲ್ಲಿ ಬ್ಯುಸಿಯಿರುವ ವಿದ್ಯಾರ್ಥಿಗಳಿಗೆ ಇನ್ನೇನು ಕೆಲ ದಿನಗಳಲ್ಲಿ ರಜೆ ಪ್ರಾರಂಭವಾಗುತ್ತದೆ. ರಜೆ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ. ರಜಾದ ಮಜಾವನ್ನು ಯಾವ ರೀತಿ ಕಳೆಯಬೇಕು ಎಂಬ ಯೋಜನೆ ಈಗಾಗಲೇ ಎಲ್ಲ ವಿದ್ಯಾರ್ಥಿಗಳ ಮನದಲ್ಲಿ ಸಿದ್ಧವಾಗಿರುತ್ತದೆ.
ನ್ಪೋಕನ್ ಇಂಗ್ಲಿಷ್ ತರಗತಿಗೆ ಹೋದರೆ ಜ್ಞಾನ ಮತ್ತಷ್ಟು ವೃದ್ಧಿಯಾಗುತ್ತದೆ.
ಅಲ್ಲದೆ, ಕಠಿನ ಶಬ್ದಗಳಲ್ಲಿಯೂ ಪರಿಪೂರ್ಣತೆ ಬೆಳೆಯುತ್ತದೆ. ಹಲವು ಕಂಪ್ಯೂಟರ್ ತರಬೇತಿ ಕೇಂದ್ರಗಳು ಈ ಅವಧಿಯಲ್ಲಿ ವಿಶೇಷ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಅಲ್ಪಾವಧಿಯ ವಿವಿಧ ಕೋರ್ಸ್‌ಗಳೊಂದಿಗೆ ಬೇಸಿಕ್ ಕಂಪ್ಯೂಟರ್, ಟ್ಯಾಲಿ ಸಹಿತ ಮತ್ತಿತರ ವಿಷಯಗಳಲ್ಲಿ ತರಬೇತಿ ಕೊಟ್ಟು ಪ್ರಮಾಣ ಪತ್ರಗಳನ್ನು ನೀಡುತ್ತವೆ. ಇತ್ತೀಚೆಗೆ ಎಲ್ಲ ಶಾಲಾ- ಕಾಲೇಜುಗಳಲ್ಲಿಯೂ ಕಂಪ್ಯೂಟರ್ ಶಿಕ್ಷಣವಿರುವುದರಿಂದ ರಜಾ ಅವಧಿಯಲ್ಲಿ ಇದರ ಬಗ್ಗೆ ಹೆಚ್ಚಿನ ಕಲಿಕೆಯು ಭವಿಷ್ಯಕ್ಕೆ ಸಹಕಾರಿಯಾಗುವುದು.
Related Articles
Advertisement
ಪಾಠದ ಜತೆ ಆಟವೂ ಇರಲಿರಜೆಯನ್ನು ಕೇವಲ ಪಠ್ಯೇತರ ಚಟುವಟಿಕೆಗಳಿಗೆ ಮಾತ್ರ ಸೀಮಿತ ಮಾಡುವುದು ಬೇಡ. ಕೆಲವೊಂದು ಸಮಯ ಸಂಬಂಧಿಕರ, ಸ್ನೇಹಿತರ ಜತೆ ಕಳೆಯಬಹುದು. ಅಲ್ಲದೇ, ಆಟ, ಮೋಜು ಮಸ್ತಿಯಲ್ಲಿಯೂ ದಿನ ಕಳೆಯಬಹುದು. ಮನೆಯವರ ಜತೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಬೀಚ್, ದೇವಸ್ಥಾನ, ಮಸೀದಿ, ಚರ್ಚ್ ಸಹಿತ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ರಜಾ ಸಮಯವನ್ನು ಕಳೆಯಬಹುದು. ರಜಾದಲ್ಲಿ ಟ್ಯೂಶನ್
ಬೇಸಗೆ ರಜೆಯಲ್ಲಿ ಟ್ಯೂಶನ್ ತರಬೇತಿಗಳು ಪ್ರಾರಂಭವಾಗುತ್ತವೆ. ಅದರಲ್ಲಿಯೂ ಮುಂದಿನ ತರಗತಿಗಳಿಗೆ ಪೂರಕವಾಗುವ ದೃಷ್ಟಿಯಿಂದ ತರಬೇತಿ ಆರಂಭವಾಗಲಿದೆ. ವಿದ್ಯಾರ್ಥಿಗಳು ಪಠ್ಯದಲ್ಲಿ ಮತ್ತಷ್ಟು ಜ್ಞಾನ ಸಂಪಾದಿಸಿಕೊಳ್ಳಲು ಇಂಥ ತರಬೇತಿಗೆ ಸೇರಿಕೊಳ್ಳಲು ಅವಕಾಶವಿದೆ. ತರಬೇತಿ ಪಡೆದರೆ ತರಗತಿಯಲ್ಲಿ ಮುಂದಿನ ಕಲಿಕೆಗೆ ಇದು ಸಹಕಾರಿಯಾಗುತ್ತದೆ. ಗಿಡ ನೆಡಲು ಅಭ್ಯಾಸ
ವಿದ್ಯಾರ್ಥಿಗಳು ರಜೆಯಲ್ಲಿ ಪರಿಸರಕ್ಕೆ ಕಿಂಚಿತ್ತು ಉಪಯೋಗವಾಗುವಂತಹ ಕೆಲಸ ಮಾಡಿದರೆ ರಜೆಯನ್ನು ಪರಿಪೂರ್ಣವಾಗಿ ಕಳೆದ ಧನ್ಯತೆ ನಮ್ಮಲ್ಲಿರುತ್ತದೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಕುಂಡದಲ್ಲಿ ಒಂದೋ, ಎರಡೋ ಗಿಡಗಳನ್ನು ನೆಟ್ಟು ಅದರ ನಿರ್ವಹಣೆಯನ್ನು ಹೆತ್ತವರು, ಶಿಕ್ಷಕರು ವಿದ್ಯಾರ್ಥಿಗಳಿಗೆ ಬಿಡಬೇಕು. ಇದರಿಂದಾಗಿ ಅವರಲ್ಲಿ ಸಣ್ಣ ಮಟ್ಟಿನ ಜವಾಬ್ದಾರಿ ಬಂದಂತಾಗುತ್ತದೆ. ನವೀನ್ ಭಟ್ ಇಳಂತಿಲ