Advertisement

ಕಂಟೈನ್‌ಮೆಂಟ್‌ ವಲಯದಲ್ಲಿ ಮುನ್ನೆಚ್ಚರಿಕೆ ಇರಲಿ

07:00 AM Jun 12, 2020 | Lakshmi GovindaRaj |

ರಾಮನಗರ: ಕಂಟೈನ್‌ಮೆಂಟ್‌ ವಲಯಗಳಲ್ಲಿ ಕೋವಿಡ್‌-19 ಸೋಂಕು ಹರಡುವ ಸಾಧ್ಯತೆ ಹೆಚ್ಚಿದ್ದು, ಮುಂಜಾಗ್ರತೆ ಕ್ರಮ ಅನುಸರಿಸುವಂತೆ ಇನ್ಸಿಡೆಂಟ್‌ ಕಾಮಾಡೆಂಟ್‌ಗಳು ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ  ಕಾರ್ಯದರ್ಶಿ ಜಗದೀಶ್‌ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಕಂಟೈನ್‌ಮೆಂಟ್‌ ವಲಯಗಳಲ್ಲಿವಾಸಿಸುವ ಸಾರ್ವಜನಿಕರಿಗೆ  ಬೇಕಿರುವ ಅ ಗತ್ಯ ವಸ್ತುಗಳನ್ನು ಸರಿಯಾದ ಸಮಯಕ್ಕೆ ಮಾಹಿತಿ ಪಡೆದು ಅವರಿಗೆ ಒದಗಿಸಿ ಕಂಟೈನ್‌ಮೆಂಟ್‌ ಜೋನ್‌ನಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಪಿಪಿಇ  ಕಿಟ್‌, ಮಾಸ್ಕ್, ಸ್ಯಾನಿಟೈಸರ್‌ ಹಾಗೂಇನ್ನಿತರ ಅಗತ್ಯ ಸುರಕ್ಷತೆ  ಸಾಮಗ್ರಿ ಕೊಡು ವಂತೆ ಸೂಚಿಸಿದರು.

ಕಂಟೈನ್‌ಮೆಂಟ್‌ ವಲಯಗಳಲ್ಲಿ ಜನರನ್ನು ಓಡಾಡಲು ಬಿಡಬಾರದು ಸೀಲ್‌ಡೌನ್‌ನ್ನು ಪರಿಣಾಮಕಾರಿಯಾಗಿ ಮಾಡಿ 24 *7 ಸಿಬ್ಬಂದಿ ನಿಯೋಜಿಸಬೇಕು. ಜಿಲ್ಲೆಯಲ್ಲಿ ಗುರುತಿಸಲಾಗಿರುವ  ಕಂಟೈನ್‌ಮೆಂಟ್‌ ವಲಯಗಳಲ್ಲಿ ಇನ್ಸಿಡೆಂಟ್‌ ಕಮ್ಯಾಂಡರ್‌ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅವಶ್ಯಕವಿರುವ ಕಡೆ ಹೆಚ್ಚಿನ ಬ್ಯಾರಿಕೇಡ್‌ ಮಾಡುವಂತೆ ಸಲಹೆ ನೀಡಿದರು.

ಎಸ್‌ಎಆರ್‌ಐ, ಐಎಲ್‌ಐ ಪ್ರಕರಣ: ಜಿಲ್ಲೆಯಲ್ಲಿ ಎಸ್‌ಎಆರ್‌ಐ ಮತ್ತು ಐಎಲ್‌ ಐ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸೂಚಿ ಸಿದ ಅವರು ಎಸ್‌ ಎಆರ್‌ಐ ಮತ್ತು ಐಎಲ್‌ಐ ಲಕ್ಷಣವುಳ್ಳವರು ಕ್ವಾರಂಟೈನ್‌ ಭಯದಿಂದ  ಮಾಹಿತಿ ನೀಡದೇ ಇರಬಹುದು. ಆಶಾ ಕಾರ್ಯ ಕರ್ತೆ ಯರು ಮನೆ ಪರಿಶೀಲನೆ ಸಂದರ್ಭದಲ್ಲಿ ಈ ಲಕ್ಷಣವುಳ್ಳ ವರು ಕಂಡುಬಂದರೆ ಪರೀಕ್ಷೆಗೆ ಒಳಪಡಿಸಬೇಕು.

ಜಿಲ್ಲೆಯ ಲ್ಲಿರುವ ಔಷಧ ಅಂಗಡಿಗಳಿಂದ ಜ್ವರ, ನೆಗಡಿಗೆ ಔಷಧ ಖರೀದಿ  ಮಾಹಿತಿ ಹಾಗೂ ಖಾಸಗಿ ವೈದ್ಯಕೀಯ ಕ್ಲಿನಿಕ್‌ ಗಳಲ್ಲಿ ಎಸ್‌ಆರ್‌ಐ ಹಾಗೂ ಐಎಲ್‌ಐ ಪ್ರಕರಣಗಳು ಕಂಡು ಬಂದಲ್ಲಿ ವರದಿ ಪಡೆದುಕೊಂಡು ಪರೀಕ್ಷೆಗೆ ಒಳಪಡಿಸಿ, ರೇಷ್ಮೆ ಹಾಗೂ ಮಾನ ಮಾರುಕಟ್ಟೆಗೆ ಹೊರ ರಾಜ್ಯದಿಂದ ಜನರು  ಬರಬಹುದು ಇಲ್ಲಿ ರ್‍ಯಾಂಡಮ್‌ ಪರೀಕ್ಷೆ ಕೈಗೊಳ್ಳಿ ಎಂದು ಸಲಹೆ ನೀಡಿದರು.

Advertisement

ಎಸ್‌ಎಸ್‌ಎಲ್‌ಸಿ ಪರೀಕ್ಷೆಸಿದ್ಧತೆಗೆ ಸೂಚನೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಿದ್ಧತೆ  ಮಾಡಿಕೊಳ್ಳಬೇಕು. ಪರೀಕ್ಷಾರ್ಥಿಗೂ ತೊಂದರೆಯಾಗಬಾರದು. ಬಿಇಒಗಳು ತಮ್ಮ ವ್ಯಾಪ್ತಿಯಲ್ಲಿ ಎಲ್ಲ  ಮಕ್ಕಳಿಗೆ ಕರೆ ಮಾಡಿ, ಸಾರಿಗೆ ವ್ಯವಸ್ಥೆ ಬೇಕಿರುವ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಂಡು ಆ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆಯಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಎಸ್‌.ಅರ್ಚನಾ, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ  ಅನೂಪ್‌ ಶೆಟ್ಟಿ, ಉಪಭಾಗಾಧಿಕಾರಿ ದ್ರಾಕ್ಷಾಯಿಣಿ, ಜಿಲ್ಲಾ ಆರೋಗ್ಯಾಧಿಕಾರಿ  ಡಾ.ನಿರಂಜನ್‌ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next