Advertisement

ಕೋವಿಡ್ ತಡೆಗೆ ಮುನ್ನೆಚ್ಚರಿಕೆ ವಹಿಸಿ

04:06 PM Sep 28, 2020 | Suhan S |

ಮುಳಬಾಗಿಲು: ಕೋವಿಡ್ ಸೋಂಕು ಮಹಾಮಾರಿಯಾದರೂ ಅದು ನಮಗೊಂದು ಸವಾಲು, ನಾವು ಹೇಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬುದನ್ನು ನಮಗೆ ಕಲಿಸಿದೆ. ಕೋವಿಡ್ ಹರಡುವಿಕೆ ತಡೆಗೆ ಸ್ವತ್ಛತೆ  ಕಾಪಾಡಿಕೊಳ್ಳುವುದರ ಜೊತೆಗೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಬಿಇಒ ಗಿರಿಜೇಶ್ವರಿ ದೇವಿ ತಿಳಿಸಿದರು.

Advertisement

ತಾಲೂಕಿನ ಮಲ್ಲನಾಯ ಕನಹಳ್ಳಿಯ ವಾರಿಧಿ ಪಬ್ಲಿಕ್‌ ಸ್ಕೂಲ್‌ ನಲ್ಲಿ ಏರ್ಪಡಿಸಲಾಗಿದ್ದ ವಾರಿಧಿ ವಾತ್ಸಲ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹುತೇಕ ಖಾಸಗಿ ಶಾಲೆಗಳು ಇಂಗ್ಲೀಷ್‌ ವ್ಯಾಮೋಹ ಮತ್ತು ಮಾಡ್ರನ್‌ ಸಂಸ್ಕೃತಿಯನ್ನು ಅಳವಡಿಸಿಕೊಂಡು ನಡೆಯುತ್ತಿವೆ. ಆದರೆ ವಾರಿಧಿ ಪಬ್ಲಿಕ್‌ ಸ್ಕೂಲ್‌ ಪುರಾತನ ಜಾನಪದ ಶೈಲಿಯಲ್ಲಿ ಅರಳಿಕಟ್ಟೆ ಸಂಸ್ಕೃತಿ, ನವಧಾನ್ಯಗಳ ಬಳಕೆ ಸೇರಿದಂತೆ ಹತ್ತು ಹಲವು ಸಂಸ್ಕೃತಿಯನ್ನು ಉಳಿಸಲು ಪ್ರಯತ್ನಿಸುತ್ತಿರುವ ಸನ್ನಿವೇಶ ಗಮನಿಸಿದರೆ, ಮುಂಬರುವ ಪೀಳಿಗೆಗೆ ನಮ್ಮ ಪುರಾತನವಾದ ಸಂಸ್ಕೃತಿಯ ಪಾಠ ಮಾಡುವ  ಮೂಲಕ ಕಲೆ ಸಾಹಿತ್ಯ ಉಳಿಸಿ ಬೆಳೆಸುವ ಎಲ್ಲಾ ಲಕ್ಷಣಗಳನ್ನು ಕಾಣಬಹುದಾಗಿದೆ ಎಂದರು.

ವಾರಿಧಿ ಪಬ್ಲಿಕ್‌ ಸ್ಕೂಲ್‌ನ ಆಡಳಿತಾಧಿಕಾರಿ ಮಂಜುನಾಥ್‌ ರೆಡ್ಡಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ನಮ್ಮ ಶಾಲೆಯ ಶಿಕ್ಷಕ ಸಿಬ್ಬಂದಿ ಸದಾ ನಿರತರಾಗಿದ್ದಾರೆ. ನಮ್ಮ ಸಿಬ್ಬಂದಿ ನಿಮ್ಮ ಮನೆಯ ಹತ್ತಿರ ಬಂದಾಗ ಸಹಕರಿಸಿ ಎಂದು ಹೇಳಿದರು.

ಮುಖಂಡರಾದ ಸುಬ್ಟಾರೆಡ್ಡಿ, ಕೇಶವರೆಡ್ಡಿ, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸಗೌಡ, ಜಯರಾಂರೆಡ್ಡಿ, ತಾಲೂಕು ಆರೋಗ್ಯಾಧಿಕಾರಿ ಡಾ.ವರ್ಣಶ್ರೀ, ಮಲ್ಲನಾಯಕನಹಳ್ಳಿ ಗ್ರಾಪಂ ಪಿಡಿಒ ರಮೇಶ್‌, ಮುಖ್ಯಶಿಕ್ಷಕವಿ.ದಿವಾಕರ್‌,ಶಿಕ್ಷಕರಾದ ದೊಮ್ಮಸಂದ್ರ ನರಸಿಂಹ, ಕುಸುಮ, ಸೌಮ್ಯಾ ಸೇರಿದಂತೆ ಹಲವರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next