Advertisement

ಯುಪಿಐ ಬಳಸಿ ಬ್ಯಾಂಕ್‌ ಖಾತೆಗೆ ಕನ್ನ, ಆ್ಯಪ್‌ ಡೌನ್‌ಲೋಡ್‌ ಮಾಡುವಾಗ ಎಚ್ಚರವಿರಲಿ

09:53 AM Nov 05, 2019 | sudhir |

ಯುಪಿಐ, ಗೂಗಲ್‌ ಪೇ, ಬೀಮ್‌, ಫೋನ್‌ ಪೇ ಮುಂತಾದ ಆ್ಯಪ್‌ಗ್ಳು ಬಂದ ಮೇಲಂತೂ ಹಣಕಾಸಿನ ವ್ಯವಹಾರ ಮತ್ತಷ್ಟು ಸುಲಭವಾಗಿದ್ದು, ಕ್ರೆಡಿಟ್‌/ಡೆಬಿಟ್‌ ಕಾರ್ಡ್‌ ಬಳಸುತ್ತಿದ್ದವರು ಕೂಡ ಇದೀಗ ಆನ್‌ಲೈನ್‌ ಪೇಮೆಂಟ್‌ ಮಾಡುತ್ತಿದ್ದಾರೆ . ಆದರೆ ಸ್ಮಾರ್ಟ್‌ಫೋನ್‌ಗಳ ಮೂಲಕ ಹಣ ರವಾನೆ ಮತ್ತು ಸ್ವೀಕೃತಿ ಪ್ರಕ್ರಿಯೆ ಸುಲಭಗೊಳಿಸಲು ಅಭಿವೃದ್ಧಿಪಡಿಸಿದ “ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌ (ಯುಪಿಐ) ವ್ಯವಸ್ಥೆ ಬಳಸಿಕೊಂಡು ಗ್ರಾಹಕರ ಬ್ಯಾಂಕ್‌ ಖಾತೆಗಳಿಗೆ ಆನ್‌ಲೈನ್‌ ಖದೀಮರು ಕನ್ನ ಹಾಕುತ್ತಿದ್ದು, ಎಚ್‌ಡಿಎಫ್ಸಿ ಬ್ಯಾಂಕ್‌ನ ಗ್ರಾಹಕರು ಹೆಚ್ಚಾಗಿ ಮೋಸಹೊಗುತ್ತಿದ್ದಾರೆ.

Advertisement

ಹಾಗಾದರೆ ಜನರನ್ನು ವಂಚಿಸುವುದಕ್ಕೆ ಖದೀಮರು ಬಳಸುವ ಮಾರ್ಗ ಯಾವುದು ? ಜನರು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳೇನು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಮೋಡಸ್‌ ಒಪೆರಾಂಡಿ
ಇದೊಂದು ನೂತನ ಆ್ಯಪ್‌, ಇದರ ಮೂಲಕ ನಿಮ್ಮ ಸಂಪೂರ್ಣ ಮಾಹಿತಿಯನ್ನು ಕಲೆಹಾಕಬಹುದಾಗಿದ್ದು, ಗ್ರಾಹಕರ ಬ್ಯಾಂಕ್‌ ಖಾತೆಗಳನ್ನು ನಿಯಂತ್ರಿಸ ಬಹುದು.

ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ
ಈ ಕೃತ್ಯವೆಸಗುತ್ತಿರುವ ಖದೀಮರು ತಮ್ಮನ್ನು ಬ್ಯಾಂಕ್‌ ಅಥವಾ ಖಾಸಗಿ ಆರ್ಥಿಕ ಸಂಸ್ಥೆಯ ಸಿಬ್ಬಂದಿ ಎಂದು ಹೇಳಿಕೊಂಡು ಗ್ರಾಹಕರಿಗೆ ಕರೆ ಮಾಡುತ್ತಿದ್ದು, ಹಣಕಾಸಿನ ಪಾವತಿ ಪ್ರಕ್ರಿಯೆಗಾಗಿ ಇನ್ನು ಮುಂದೆ ಒಪೆರಾಂಡಿ ಆ್ಯಪ್‌ ಕಡ್ಡಾಯ ಎಂದು ಹೇಳುವ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಸೂಚನೆ ನೀಡುತ್ತಾರೆ.

ಒಟಿಪಿ ಕಳುಹಿಸುವಂತೆ ಪ್ರಚೋದನೆ
ನಿಮ್ಮ ಖಾತೆಗೆ ಹಣ ಹಾಕಿದ್ದು, ಒಪೆರಾಂಡಿ ಆ್ಯಪ್‌ ಮೂಲಕ ಒಟಿಪಿಯನ್ನು ಹಂಚಿಕೊಳ್ಳುವಂತೆ ಕೇಳಿಕೊಳ್ಳುತ್ತಾರೆ. ಇದರಿಂದ ಗ್ರಾಹಕರ ಖಾತೆಯನ್ನು ಸಂಪೂರ್ಣವಾಗಿ ಖದೀಮರು ನಿಯಂತ್ರಿಸಬಹುದಾಗಿದೆ. ಜತೆಗೆ ಗ್ರಾಹಕರ ಖಾತೆಯಿಂದ ಅವರ ಖಾತೆಗೆ ಹಣವನ್ನು ವರ್ಗಾಹಿಸಿ ಕೊಳ್ಳಬಹುದಾಗಿದೆ.

Advertisement

ಎಚ್‌ಡಿಎಫ್ಸಿ ಖಾತೆದಾರರಿಗೆ ಎಚ್ಚರಿಗೆ ಘಂಟೆ
ಕೆಲದಿನಗಳ ಹಿಂದೆ ಒಪೆರಾಂಡಿ ಆ್ಯಪ್‌ ಎಚ್‌ಡಿಎಫ್ಸಿ ಬ್ಯಾಂಕಿನ ಖಾತೆದಾರರೊಬ್ಬರನ್ನು ಆನ್‌ಲೈನ್‌ ಖದೀಮರು ವಂಚಿಸಿದ್ದಾರೆ. ಈ ಹಿನ್ನಲೆ ಎಚ್‌ಡಿಎಫ್ಸಿ ಬ್ಯಾಂಕ್‌ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದ್ದು, ಬ್ಯಾಂಕ್‌ ಸಿಬ್ಬಂದಿ ಎಂದು ಬರುವ ಕರೆಗಳಿಗೆ ಖಾಸಗಿ ಮಾಹಿತಿಯನ್ನು ನೀಡಬೇಡಿ ಎಂದು ಹೇಳಿದೆ.

ಸುರಕ್ಷತೆಗಾಗಿ ಕೆಲವು ಟಿಪ್ಸ್‌
– ಸಂಬಂಧ ಪಟ್ಟ ಬ್ಯಾಂಕಿನ ಆ್ಯಪ್‌ನ್ನು ಮೊದಲ ಬಾರಿ ಇನ್ಸ್‌ಟಾಲ್‌ ಮಾಡಿಕೊಳ್ಳುವಾಗ ಸಂದೇಹವಿದ್ದರೆ ಬ್ಯಾಂಕಿಗೆ ಹೋಗಿ ಅಲ್ಲಿನ ಸಿಬ್ಬಂದಿಯ ಸಲಹೆ ಪಡೆದ ಬಳಿಕವೇ ಡೌನ್‌ಲೋಡ್‌ ಮಾಡಿಕೊಳ್ಳುವುದು ಸೂಕ್ತ.

– ಅಪರಿಚಿತರೊಂದಿಗೆ ಬ್ಯಾಂಕ್‌ ಖಾತೆ ಸಂಖ್ಯೆ, ಎಟಿಎಂ ಪಿನ್‌ ನಂಬರ್‌, ಪಾಸ್ವರ್ಡ್‌ ಅಥವಾ ಒಟಿಪಿ (ಒನ್‌ ಟೈಮ್‌ ಪಾಸ್ವರ್ಡ) ಹಂಚಿಕೊಳ್ಳಲು ಹೋಗಬೇಡಿ.

– ಖಾತೆಯನ್ನು ಆಗಾಗ್ಗೆ ಪರಿಶೀಲಿಸುತ್ತಿರಿ.

-ಪಾಸ್‌ವರ್ಡ್‌ನ್ನು ಪದೇ ಪದೇ ಬದಲಾಯಿಸುವುದು ಸುರಕ್ಷತೆಯ ದೃಷ್ಟಿಯಿಂದ ಸೂಕ್ತ.

– ಬ್ಯಾಂಕಿನ ಲಿಂಕ್‌ ಹೆಸರಲ್ಲಿ ಬರುವ ಯಾವುದೇ ಲಿಂಕ್‌ಗಳನ್ನು ಅನವಶ್ಯಕವಾಗಿ ಕ್ಲಿಕ್‌ ಮಾಡುವ ಗೋಜಿಗೆ ಹೋಗಬೇಡಿ. ನೀವಾಗಿಯೇ ಬ್ಯಾಂಕ್‌ ಯುಆರ್‌ಎಲ್‌ ಟೈಪ್‌ ಮಾಡಿ ಹುಡುಕಿರಿ.

– ಸಾರ್ವಜನಿಕ ಕಂಪ್ಯೂಟರುಗಳಲ್ಲಿ (ಉದಾ. ಸೈಬರ್‌ ಕೆಫೆಗಳಲ್ಲಿ) ಆನ್ಲ„ನ್‌ ಬ್ಯಾಂಕಿಂಗ್‌ ವಹಿವಾಟು ನಡೆಸಬೇಡಿ.

Advertisement

Udayavani is now on Telegram. Click here to join our channel and stay updated with the latest news.

Next