Advertisement
ಸ್ಥಳದ ಆಯ್ಕೆಬಾತ್ರೂಮ್ ನಿರ್ಮಿಸುವ ಮೊದಲು ಸರಿಯಾದ ಸ್ಥಳವನ್ನು ಆಯ್ಕೆ
ಮಾಡಿ. ನೀರು ಇಂಗುವ ಪ್ರದೇಶವಾದರೆ ಇನ್ನು ಉತ್ತಮ. ಏಕೆಂದರೆ ಪ್ರತಿದಿನ ಸ್ನಾನ ಮಾಡಿದ ಮತ್ತು ಇನ್ನಿತರ ನೀರು ಹೋಗುವುದರಿಂದ ಕುಸಿಯುವ ಸಾಧ್ಯತೆಗಳಿರುತ್ತವೆ. ಬಾತ್‌ರೂಮ್‌ಗಳನ್ನು ಕಟ್ಟುವಾಗ ಗೋಡೆಯ ಮೇಲ್ಭಾಗದಲ್ಲಿ ಸಣ್ಣ ರಂಧ್ರದ ಕಿಟಕಿಗಿಳನ್ನು ಇರಿಸುವುದು ಉತ್ತಮ.
ಟೈಲ್ಸ್ಗಳನ್ನು ಆಯ್ಕೆ ಮಾಡುವಾಗ ಸ್ವಲ್ಪ ಗಮನ ಹರಿಸಬೇಕು. ಜಾರುವ ಮೇಲ್ಮೈಗಿಂತ ಗಡುಸಾದ ಮೇಲ್ಮೈ ಇರುವ ಟೈಲ್ಸ್ಗಳನ್ನು ಹಾಕುವುದರಿಂದ ನೆಲ ಜಾರುವುದಿಲ್ಲ ಇಲ್ಲವಾದಲ್ಲಿ ನೆಲ ಜಾರುವ ಸಂಭವವಿರುತ್ತದೆ. ಇದರಿಂದ ಮನೆಯಲ್ಲಿ ವಯಸ್ಸಾದವರಿದ್ದರೆ ಅವರಿಗೆ ಕಷ್ಟವಾಗುತ್ತದೆ.ಅಲ್ಲದೆ ಕುಟುಂಬದ ರಕ್ಷಣೆಗೂ ಇದು ತುಂಬಾ ಮುಖ್ಯವಾಗಿದೆ. ಗೋಡೆಗಳಲ್ಲಿ ಅಲ್ಲಲ್ಲಿ ಹಿಡಿಕೆಗಳನ್ನು ಇಡುವುದು ಕೂಡ ಉತ್ತಮ. ಇದು ಬಟ್ಟೆಗಳನ್ನು ಇಡಲು ಸಹಾಯವಾಗುವುದಲ್ಲದೆ ಇದನ್ನು ಹಿಡಿದು ಕೂಡ ನಡೆಯಬಹುದು. ಸಾಬೂನ್ ಮತ್ತು ಇನ್ನಿತರ ಸಾಮಗ್ರಿಗಳನ್ನು ಇಡಲು ವ್ಯವಸ್ಥೆ ಮಾಡಿಕೊಳ್ಳಿ ಸಾಬೂನ್ ಅಥವಾ ಇನ್ನಿತರ ಡಿಟರ್ಜೆಂಟ್ಗಳ ನೀರು ಬಿದ್ದಲ್ಲಿ ಅದನ್ನು ಆಗಲೇ ತೊಳೆದು ಬೀಡಿ. ಬಾತ್ ಟಬ್‌ಗಳನ್ನು ನಿರ್ಮಿಸುವುದಾದರೆ ಅದನ್ನು ಬೀಸಿ ನೀರಿನಿಂದ ತೊಳೆಯುವ ವ್ಯವಸ್ಥೆ ರೂಢಿಸಿಕೊಳ್ಳಿ.
Related Articles
ಟೈಲ್ಸ್ಗಳ ಮಧ್ಯೆ ಪಾಚಿ ಕಟ್ಟುವುದನ್ನು ಸ್ವಚ್ಛ ಮಾಡುತ್ತಲೇ ಇರಿ. ಇಲ್ಲವಾದಲ್ಲಿ ಅದು ಅಲ್ಲಲ್ಲಿಯೇ ಕಲೆ ಕಟ್ಟುತ್ತದೆ. ಶವರ್ ಮತ್ತು ನಲ್ಲಿಗಳನ್ನು ಅಳವಡಿಸುವ ಸಂದರ್ಭಗಳಲ್ಲಿ ಲೀಕೆಜ್ ಬರದಂತೆ ಗಮನ ಹರಿಸಿ. ಬಿಸಿ ನೀರಿನ ವ್ಯವಸ್ಥೆ ಯಾವ ರೀತಿಯಲ್ಲಿ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಗೀಸರ್ ಅಥವಾ ಬೊಯ್ಲರ್‌ಗಳನ್ನು ಇರಿಸಿಕೊಳ್ಳಿ, ಗೀಸರ್‌ನ ವ್ಯವಸ್ಥೆ ಮಾಡಿಕೊಂಡರೆ ಗ್ಯಾಸ್ ಇಡಲು ಕೂಡ ಸರಿಯಾದ ಜಾಗ ಮಾಡಿಕೊಳ್ಳಿ. ಅನೇಕ ಮಂದಿ ಬಾತ್‌ರೂಮ್‌ಗಳಲ್ಲಿ ವಾಷಿಂಗ್ ಮಿಶನ್ ಇಡುತ್ತಾರೆ.ಅದರಿಂದ ಬರುವ ನೀರು ಬಾತ್‌ರೂಮ್‌ನ ಸ್ವಚ್ಛತೆ ಹಾಳಾಗದಂತೆ, ನೇರವಾಗಿ ಹೊರಗೆ ಹೋಗಲು ವ್ಯವಸ್ಥೆ ಮಾಡಿಕೊಳ್ಳಿ. ಇದೆಲ್ಲದಕ್ಕಿಂತ ಮುಖ್ಯವಾಗಿ ವಿದ್ಯುತ್ ಸಂಪರ್ಕ ನೀಡುವಾಗ ತುಂಬಾ ಎಚ್ಚರವಹಿಸಿಕೊಳ್ಳಬೇಕು. ಬಾತ್‌ರೂಮ್‌ನಲ್ಲಿ ಬೆಳಗ್ಗಿನ ಸಮಯ ಪ್ರಕಾಶ ಮಾನವಾದ ಬೆಳಕು ಬರುವ ರೀತಿಯಲ್ಲಿದ್ದರೆ ಉತ್ತಮ.
Advertisement
ಬಾತ್‌ಟಬ್, ಶವರ್ ಹೀಗೆ ಸ್ನಾನಗೃಹಕ್ಕೆ ಬೇಕಾಗುವುದನ್ನು ಎಲ್ಲೆಲ್ಲಿ ನಿರ್ಮಿಸಬೇಕು ಎಂದು ಮೊದಲೇ ನಿರ್ಧರಿಸಿಕೊಳ್ಳಿ ಇದರಿಂದ ನಿಮ್ಮ ಸ್ನಾನಗೃಹವನ್ನು ನೀವು ಇನ್ನಷ್ಟು ಸುಂದರವಾಗಿಸಿಬಹುದಲ್ಲದೆ ಸುರಕ್ಷಿತವಾಗಿಯೂ ಇಟ್ಟುಕೊಳ್ಳಬಹುದು.
•ಪ್ರೀತಿ ಭಟ್ ಗುಣವಂತೆ