Advertisement
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿ ಗಣ್ಯರ ಕೊಠಡಿಯಲ್ಲಿ ಅರಣ್ಯಾಧಿಕಾರಿಗಳೊಂದಿಗೆ ಮಾತನಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿ, ಈಗಾಗಲೇ ಮೂವರು ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ಕೂಡಲೇ ಒಂದು ಲಕ್ಷ ರೂ. ಪರಿಹಾರವನ್ನು ವಿತರಿಸಬೇಕೆಂದು ಸೂಚನೆ ನೀಡಿದರು.
Related Articles
Advertisement
ಗ್ರಾಮಸ್ಥರು ಆತಂಕಕ್ಕೆ ಒಳಗಾಗಬೇಡಿ: ತಾಲೂಕಿನ ಸಿಂಗಾನಲ್ಲೂರು, ಮತ್ತೀಪುರ, ಗುಂಡಾಪುರ ಗ್ರಾಮಗಳಲ್ಲಿ ಆನೆಗಳು ಗ್ರಾಮಕ್ಕೆ ನುಗ್ಗಿ ಬೆಳೆ ನಾಶ ಮಾಡಿ ಗ್ರಾಮಸ್ಥರು ಆತಂಕಕ್ಕೆ ಒಳಗಾಗುವಂತೆ ಮಾಡಿದ್ದು, ಕೂಡಲೇ ಗ್ರಾಮಸ್ಥರು ಆತಂಕಕ್ಕೆ ಒಳಗಾಗಬಾರದೆಂದು ಮನವಿ ಮಾಡಿದ ಶಾಸಕರು, ಗ್ರಾಮದ ಬಳಿ ಆನೆ ಮತ್ತು ಕಾಡು ಪ್ರಾಣಿಗಳು ಸುಳಿಯದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುವರು ಎಂದು ಹೇಳಿದರು.
ತಂತಿ ಬೇಲಿ ನಿರ್ಮಿಸಿ: ಕಾಡಿನಿಂದ ನಾಡಿಗೆ ಬರದಂತೆ ಹಳ್ಳ ಕೊರೆಯಬೇಕು ಮತ್ತು ತಂತಿ ಬೇಲಿಗಳನ್ನು ಅಳವಡಿಸಿ ಯಾವುದೇ ಪ್ರಾಣಿಗಳು ತಂತಿಯನ್ನು ಸ್ಪರ್ಶ ಮಾಡಿದ ಕೂಡಲೇ ಬೆಲ್ ಹೊಡೆಯುವ ನೂತನ ತಂತ್ರಜ್ಞಾನದ ಯಂತ್ರಗಳನ್ನು ಅಳವಡಿಸಿ ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಕಟ್ಟೆಚ್ಚರ ವಹಿಸಬೇಕು ಎಂದರು.
ಕಾವಲು ಕಡ್ಡಾಯ: ಕಾಡಂಚಿನ ಗ್ರಾಮಗಳಲ್ಲಿ ಸದಾ ಅರಣ್ಯ ಸಿಬ್ಬಂದಿ ಕಡ್ಡಾಯವಾಗಿ ಕಾವಲು ಕಾಯಬೇಕು. ನೂತನ ತಂತ್ರಜ್ಞಾನದ ಬೆಲ್ ಶಬ್ದವಾದ ಕೂಡಲೇ ಕಾವಲಿರುವ ನೌಕರರು ಎಚ್ಚರವಹಿಸಬೇಕು. ಇಂತಹ ನೂತನ ಯಂತ್ರೋಪಕರಣಗಳನ್ನು ಅಳವಡಿಸಿದ ಬಳಿಕ ಇದೇ ರೀತಿ ಗ್ರಾಮಸ್ಥರ ಮೇಲೆ ಪ್ರಾಣಿಗಳ ದಾಳಿ ಸಂಭವಿಸಿದರೇ ಗಸ್ತುವಿನಲ್ಲಿರುವ ಸಿಬ್ಬಂದಿ ಹೊಣೆಗಾರರನ್ನಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬಹುಮತ ಸಾಬೀತು ಪಕ್ಕ: ರಾಜ್ಯ ಸಮ್ಮಿಶ್ರ ಸರ್ಕಾರದ ಬಹುಮತ ಸಾಬೀತುಪಡಿಸಲು ಜು.22ರಂದು ನಿಗದಿಯಾಗಿದ್ದು, ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಪರಿಶ್ರಮದಿಂದ ಬಹುಮತ ಸಾಬೀತು ಮಾಡುವರು ಎಂದು ನರೇಂದ್ರ ಭವಿಷ್ಯ ನುಡಿದರು.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಸಮ್ಮಿಶ್ರ ಸರ್ಕಾರ ಸಾಕಷ್ಟು ಅವಕಾಶವನ್ನು ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮ್ಯಾಜಿಕ್ ಸಂಖ್ಯೆಯನ್ನು ಮುಖ್ಯಮಂತ್ರಿಗಳು ಮಂಡಿಸಲಿದ್ದಾರೆ ಎಂದು ಹೇಳಿದರು.