Advertisement
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳತಕ್ಕೆ ಮನವಿ ಸಲ್ಲಿಸಿ, ಮಂಗಳಗುಡ್ಡ ಜಾತ್ರೆಯಲ್ಲಿ ಆಡು ಕುರಿ, ಕೋಳಿ, ಕೋಣ ಮುಂತಾದ ಯಾವುದೇ ಪ್ರಾಣಿಗಳ ಬಲಿಯಾಗದಂತೆ ಮುಂಜಾಗ್ರತ ಕ್ರಮವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
Related Articles
Advertisement
ಪ್ರಾಣಿ ಬಲಿಗೆ ತಡೆ: ಗ್ರಾಮದಲ್ಲಿ ವಾಸ್ತವ್ಯ
ಮಂಗಳಗುಡ್ಡ ಗ್ರಾಮದಲ್ಲಿ ಮಂಗಳಾದೇವಿ ಜಾತ್ರೆ ನಡೆಯಲಿದ್ದು, ಸದರಿ ಜಾತ್ರೆಯಲ್ಲಿ ಪ್ರಾಣಿ ಬಲಿ ಮಾಡಬಾರದೆಂದು ಜಿಲ್ಲಾ ಧಿಕಾರಿಗಳು ಸಹ ನಿಷೇಧ ಹೇರಿದ್ದು, ಆ ನಿಟ್ಟಿನಲ್ಲಿ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈೂಂಡಿದೆ. ಅಲ್ಲದೇ ಮಂಗಳವಾರದಿಂದಲೇ ಪೊಲೀಸ್ ಇಲಾಖೆಯೊಂದಿಗೆ ಅಲ್ಲಿಯೇ ವಾಸ್ತವ್ಯ ಹೂಡುತ್ತೇವೆ ಎಂದು ತಹಶೀಲ್ದಾರ್ ಎಸ್.ಎಫ್.ಬೊಮ್ಮಣ್ಣವರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಧಿಕಾರಿಗಳು ಪ್ರಾಣಿ ಬಲಿ ನಿಷೇಧ ಮಾಡಿದ್ದು, ನಾವು ಹಾಗೂ ಪೊಲೀಸ್ ಇಲಾಖೆ ಕೂಡಾ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ್ದೇವೆ. ಪ್ರಾಣಿ ಬಲಿಯಾಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಪಿಎಸ್‌ಐ ಐ.ಎಂ.ದುಂಡಸಿ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಸಭೆ ನಡೆಸಿದ್ದು, ಗ್ರಾಮಸ್ಥರಿಗೂ ಪ್ರಾಣಿ ಬಲಿಮಾಡಬಾರದೆಂದು ತಿಳಿ ಹೇಳಿದ್ದೇವೆ. ಚಿಮ್ಮಲಗಿ ಹಾಗೂ ಕಾಟಾಪುರ ಹತ್ತಿರ ಚೆಕ್‌ಪೋಸ್ಟ್ ಹಾಕಲಾಗುವುದು ಎಂದರು. ಕಂದಾಯ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.