ಹೊಸದಿಲ್ಲಿ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಂಗಳವಾರ, ದೇಶದ ಎಲೆಕ್ಟ್ರಿಕ್ ವಾಹನ ಸಂಸ್ಥೆಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ತಾಪಮಾನ ಹೆಚ್ಚಿರುತ್ತದೆ.
ಹಾಗಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುತ್ತಿರಬಹುದು. ಆದರೆ ವಿದ್ಯುತ್‌ಚಾಲಿತ ವಾಹನಗಳ ಕಂಪೆನಿಗಳು ತಮ್ಮ ವಾಹನದ ಬಗ್ಗೆ ಮೊದಲೇ ಎಚ್ಚರಿಕೆ ವಹಿಸಿಕೊಂಡು, ದೋಷಪೂರಿತ ವಾಹನಗಳನ್ನು ಕೂಡಲೇ ವಾಪಸ್ ಪಡೆಯುವ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.
ವಿದ್ಯುತ್‌ಚಾಲಿತ ಸ್ಕೂಟರ್, ಬೈಕ್‌ಗಳು ಏಕಾಏಕಿ ಸ್ಫೋಟಗೊಳ್ಳುತ್ತಿರುವ ಪ್ರಕರಣ ಗಳು ವರದಿಯಾಗುತ್ತಿ ರುವ ಹಿನ್ನೆಲೆಯಲ್ಲಿ ಗಡ್ಕರಿ ಮಾತುಗಳು ಮಹತ್ವ ಪಡೆದಿವೆ. “ಎಲೆಕ್ಟ್ರಿಕ್ ವಾಹನ ಸಂಸ್ಥೆಗಳು ಈಗಷ್ಟೇ ಭಾರತದಲ್ಲಿ ತಲೆ ಎತ್ತುತ್ತಿವೆ. ಮನುಷ್ಯನ ಜೀವ ಎಲ್ಲ ಕ್ಕಿಂತ ಮುಖ್ಯ ವಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ಟೆಸ್ಲಾ ಸಂಸ್ಥೆಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಸುವ ಬಗ್ಗೆ ಮಾತನಾಡಿ ರುವ ಅವರು, “ಟೆಸ್ಲಾ ಕಂಪೆನಿ ಭಾರತದಲ್ಲಿ ಇ-ವಾಹನ ತಯಾರಿಸಲು ಆಕ್ಷೇಪವಿಲ್ಲ. ಆದರೆ ಚೀನದಲ್ಲಿ ತಯಾರಿಸಿ ನಮಗೆ ಮಾರಬಾರದು’ ಎಂದಿದ್ದಾರೆ.