Advertisement
ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿ ಕೊಳ್ಳಲಾಗಿದ್ದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನವನ್ನು ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆ ಆಲ್ಬೆಂಡಾಜೋಲ್ ನೀಡು ವ ಮೂಲಕ ಉದ್ಘಾಟಿಸಿ ಮಾತನಾಡಿದರು.
Related Articles
Advertisement
ಮಾರ್ಗದರ್ಶನ ನೀಡಿ: ಇದೇ ವೇಳೆ ವಿದ್ಯಾರ್ಥಿಗಳ ಶೈಕ್ಷಣಿಕ ಕಲಿಕೆ ಬಗ್ಗೆ ಸಲಹೆ ಮಾಡಿದ ಜಿಲ್ಲಾಧಿಕಾರಿಯವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಶ್ರಮಪಟ್ಟು ಅಧ್ಯಯನ ಮಾಡಬೇಕು. ಧೈರ್ಯವಾಗಿ ಪರೀಕ್ಷೆ ಎದುರಿಸಬೇಕು. ಕಾಲಹರಣ ಮಾಡದೆ ವ್ಯಾಸಂಗದತ್ತ ಗಮನ ನೀಡಬೇಕು. ಶಿಕ್ಷಕರು ಮಕ್ಕಳ ಫಲಿತಾಂಶ, ಕಲಿಕೆ ಬಗ್ಗೆ ಮಾರ್ಗ ದರ್ಶನ ಮಾಡಬೇಕು ಎಂದು ತಿಳಿಸಿದರು.
ಯಾವುದೇ ತೊಂದರೆ ಇಲ್ಲ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಚ್.ಪ್ರಸಾದ್ ಮಾತನಾಡಿ, ಜಿಲ್ಲೆಯಲ್ಲಿ 236121 ಮಕ್ಕಳಿಗೆ ಜಂತುಹುಳು ಸೋಂಕು ನಿಯಂತ್ರಣಕ್ಕಾಗಿ ಆಲ್ಫೆಂಡಾ ಝೋನ್ ಮಾತ್ರೆಯನ್ನು ನೀಡಲಾಗುತ್ತದೆ. 973 ಸರ್ಕಾರಿ ಶಾಲೆಗಳು, 212 ಖಾಸಗಿ ಶಾಲೆಗಳು, 63 ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರೆ ನೀಡುವ ಗುರಿ ಹೊಂದಲಾಗಿದೆ. ಮಾತ್ರೆ ತೆಗೆದುಕೊಳ್ಳುವುದ ರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ರಂಗದೇಗುಲ ಕಲಾತಂಡದ ಮುಖ್ಯಸ್ಥ ಶಾಂತರಾಜು ನೇತೃತ್ವದಲ್ಲಿ ಕಲಾವಿದರು ಜಂತುಹುಳು ಸೋಂಕಿನ ಪರಿಣಾಮಗಳು ಹಾಗೂ ಜಂತುಹುಳು ನಿವಾರಣೆಗೆ ತೆಗೆದುಕೊಳ್ಳಬೇಕಾದ ಆರೋಗ್ಯ ಪೂರಕ ಕ್ರಮಗಳ ಕುರಿತು ಪ್ರಸ್ತುತಪಡಿಸಿದ ಜಾಗೃತಿ ನಾಟಕ ಪ್ರದರ್ಶನ ಗಮನ ಸೆಳೆಯಿತು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಾರಾಯಣಸ್ವಾಮಿ, ಪ್ರಭಾರ ಮುಖ್ಯೋಪಾಧ್ಯಾಯ ರೇಣುಕಾ ಪಾಲ್ ಇತರರು ಇದ್ದರು.