Advertisement
ನಿರಖು ಠೇವಣಿ ಹಣ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಮತ್ತು ಅಂಚೆ ಇಲಾಖೆಯ ಠೇವಣಿ ಯೋಜನೆಗಳಲ್ಲಿ ಹೆಚ್ಚು ಸುಭದ್ರವಾಗಿ ರು ತ್ತದೆ. ಹೆಚ್ಚಿನ ಬಡ್ಡಿಯ ಆಮಿಷಕ್ಕೆ ಒಳಗಾಗಿ ಅಸಲನ್ನೂ ಕಳೆದುಕೊಳ್ಳುವ ರಿಸ್ಕ್ ಖಂಡಿತ ಬೇಡ ಎನ್ನುವವರು ಸದಾ ಕಾಲ ಮುಂಚೂಣಿಯ ಸರಕಾರಿ ಬ್ಯಾಂಕ್‌ಗಳು ಮತ್ತು ಅಂಚೆ ಇಲಾಖೆಯ ಟರ್ಮ್ ಡೆಪಾಸಿಟ್ ಯೋಜನೆಗಳನ್ನು ನೆನಪಿನಲ್ಲಿ ಇರಿಸಿ ಕೊಳ್ಳುವುದು ಕ್ಷೇಮ. ಹೂಡಿಕೆಯಲ್ಲಿ ಯಾವತ್ತೂ ನಾವು ರಿಸ್ಕ್ ಫ್ಯಾಕ್ಟರ್ ಮರೆಯಬಾರದು. ಸಾಮಾನ್ಯವಾಗಿ ವಹಿವಾಟುದಾರರನ್ನು ಹೂಡಿಕೆದಾರರೆಂದು ಪರಿಣತರು ಪರಿಗಣಿಸುವುದಿಲ್ಲ. ವಹಿವಾಟುದಾರರಿಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಅತ್ಯಂತ ಗರಿಷ್ಠ ಲಾಭ ಗಳಿಸುವುದೇ ಹೂಡಿಕೆಯ ಮೂಲ ಉದ್ದೇಶವಾಗಿರುತ್ತದೆ. ಹೂಡಿಕೆದಾರರಿಗೆ ಆರರಿಂದ ಹನ್ನೆರಡು ತಿಂಗಳ ಅವಧಿಯೆಂದರೆ ಒಂದು ಯುಗ. ಈ ಅವಧಿಯೊಳಗೆ ತಮ್ಮ ಹೂಡಿಕೆ ಮೊತ್ತವು ನಷ್ಟದ ಹಾದಿ ಹಿಡಿದರೆ ಅದನ್ನು ನಿರ್ದಯೆಯಿಂದ ಅವರು ಕೊನೆಗೊಳಿಸಿ ಕೈಗೆ ಬಂದಷ್ಟು ದುಡ್ಡನ್ನು ಬೇರೆ ಆಕರ್ಷಕ ಮಾಧ್ಯಮಗಳಲ್ಲಿ ತೊಡಗಿಸುತ್ತಾರೆ. ಈ ಯತ್ನದಲ್ಲಿ ತಾವು ಅಸಲಿನ ಭಾಗವನ್ನೇ ಕಳೆದುಕೊಂಡರೂ ಅವರು ಚಿಂತಿಸುವುದಿಲ್ಲ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಖಾಸಗಿ ಹಣಕಾಸು ಸಂಸ್ಥೆಗಳು ನಾನಾ ಅವಧಿಯ, ಆಕರ್ಷಕ ಬಡ್ಡಿಯ ನಿರಖು ಠೇವಣಿ ಯೋಜನೆಗಳನ್ನು ಪ್ರಚುರ ಪಡಿಸುತ್ತಲೇ ಇರುತ್ತವೆ. ಅಂಚೆ ಇಲಾಖೆಯ ನಿರಖು ಠೇವಣಿಗಳ ಮೇಲಿನ ಬಡ್ಡಿ ಒಂದು ವರ್ಷದಿಂದ ಮೂರು ವರ್ಷದ ತನಕ ಡಿಪಾಸಿಟ್‌ಗೆ ಶೇ. 7ರಷ್ಟು ಬಡ್ಡಿ. ನಾಲ್ಕು, ಐದು ವರ್ಷಕ್ಕೆ 7.8ರಷ್ಟು ಬಡ್ಡಿ.ನಿರಖು ಠೇವಣಿ ಅಂದರೆ ಹೂಡಿಕೆಯಲ್ಲಿ ಸಹನೆ, ತಾಳ್ಮೆ, ಸಂಯಮ ತೋರುವ ಹೂಡಿಕೆದಾರರು ನಿಶ್ಚಿಂತೆ, ಸುಭದ್ರತೆಯನ್ನು ಬಯಸುವವರಾಗಿರುತ್ತಾರೆ. ಅವರು ನಿರ್ದಿಷ್ಟ ವರ್ಷಗಳ ಕಾಲಕ್ಕೆ ಹಣವನ್ನು ಹೂಡಿ, ಅದು ಮಾಗುವವರೆಗೆ ಕಾಯುತ್ತಾರೆ. ಈ ಬಗೆಯ ಪ್ರವೃತ್ತಿದಾರರಿಗೆ ಅತ್ಯಂತ ಪ್ರಶಸ್ತವಾಗಿರುವ ಹೂಡಿಕೆ ಮಾಧ್ಯಮ ಎಂದರೆ ನಿರಖು ಠೇವಣಿ. ಇದನ್ನೇ ನಾವು ಫಿಕ್ಸ್ ಡಿಪಾಸಿಟ್ ಎಂದು ಕರೆಯುವುದು.
ಹಾಗಿದ್ದರೂ ಲಾಭದಾಯಕತೆ ನಿಶ್ಚಿತವಾಗಿರುವುದರಿಂದ ಮಧ್ಯಮ ವರ್ಗದ ಮಂದಿಯ ಮೊದಲ ಹೂಡಿಕೆಯ ಆಯ್ಕೆಯೇ ನಿರಖು ಠೇವಣಿ.