Advertisement

ಬಹು ಸಂಸ್ಕೃತಿಯ ಪ್ರತಿನಿಧಿಸುವ “ನಾಗಾ’ಬುಡಕಟ್ಟುಗಳು

07:28 PM Jun 20, 2020 | Sriram |

ಭಾರತ ಬಹುವೈವಿಧ್ಯವಾದ ದೇಶ. ದೇಶದ ಪ್ರತಿ ಮೂಲೆಗೂ ಹೋದರು ವಿವಿಧ ರೀತಿಯ ಆಹಾರ, ಜೀವನ ಪದ್ಧತಿ ಕಾಣಬಹುದು. ಇದು ದೇಶದ ಬಹುತ್ವವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಇಂದು ಜಾಗತಿಕವಾಗಿ ಪ್ರಮುಖ ಸಾಂಸ್ಕೃತಿಕ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ.

Advertisement

ದೇಶದ ಉತ್ತರ ಭಾರತ, ದಕ್ಷಿಣ ಮತ್ತು ಈಶಾನ್ಯ, ವಾಯುವ್ಯ ಭಾಗಗಳ ರಾಜ್ಯಗಳು ತಮ್ಮದೇ ಆದ ಸಾಂಸ್ಕೃತಿಕ ಜೀವನ ಪದ್ಧತಿಯಿಂದ ಗುರುತಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ದೇಶದ ಈಶಾನ್ಯ ರಾಜ್ಯಗಳಲ್ಲಿ ವಿಭಿನ್ನವಾದ ಸಂಸ್ಕೃತಿಯಿದ್ದು ಇದು ದೇಶದ ಗಮನಸೆಳೆಯುತ್ತಿದೆ.

ದೇಶದ ಏಳು ಈಶಾನ್ಯ ರಾಜ್ಯಗಳಲ್ಲಿ ಪ್ರಮುಖವಾದುದು ನಾಗಾಲ್ಯಾಂಡ್‌. ಈ ರಾಜ್ಯದಲ್ಲಿ ಅತಿಹೆಚ್ಚು ಬುಡಕಟ್ಟು ಜನಾಂಗದವರೇ ವಾಸಿಸುತ್ತಿದ್ದಾರೆ. ಇವರ ಭಾಷೆ, ಆಹಾರ, ಆಚಾರ-ವಿಚಾರ ಮತ್ತು ಉಡುಗೆ-ತೊಡುಗೆಗಳು ವೈವಿಧ್ಯಮಯವಾಗಿದೆ.

ನಾಗಾಲ್ಯಾಂಡ್‌ನಲ್ಲಿ ಸುಮಾರು 16 ಬಹುಮುಖ್ಯ ಬುಡಕಟ್ಟು ಜನಾಂಗಗಳನ್ನು ಕಾಣಬಹುದಾಗಿದೆ. ಇವರಲ್ಲಿ ಬಹುತೇಕರು ಪರಿಸರ ಆರಾಧಕರು. ಇಲ್ಲಿನ ಕೆಲವು ಬುಡಕಟ್ಟು ಜನಾಂಗಗಳ ಮಾಹಿತಿ ಇಲ್ಲಿದೆ.

1. ಅಂಗಾಮಿ ಟ್ರೈಬ್‌:
ನಾಗಾಲ್ಯಾಂಡ್‌ನ‌ ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಅಂಗಾಮಿ ಎಂಬ ಬುಡಕಟ್ಟು ಜನಾಂಗವು ಇದು ಗುಡ್ಡಗಾಡುಗಳಲ್ಲಿ ಹೆಚ್ಚು ನೆಲೆಸಿರುತ್ತಾರೆ. ಪಶುಸಂಗೋಪನೆ, ಕೃಷಿಯೇ ಇವರಿಗೆ ಜೀವನಾಧಾರ. ಈ ಜನಾಂಗದಲ್ಲಿ ದಕ್ಷಿಣ, ಉತ್ತರ, ಪಶ್ಚಿಮ ಮತ್ತು ಚಕ್ರೋ ಅಂಗಾಮಿ ಎಂಬ ನಾಲ್ಕು ವಿಭಾಗಗಳಿವೆ.

Advertisement

2. ಅಯೋ ಟ್ರೈಬ್‌:
ಈ ಬುಡಕಟ್ಟು ಜನಾಂಗದವರು ಬಹುವೈಶಿಷ್ಟವಾದ ಉಡುಗೆ ಸಂಸ್ಕೃತಿಯಿಂದ ಗಮನಸೆಳೆಯುತ್ತಾರೆ. ಈ ಜನಾಂಗದ ನಾಗಾ ಯೋಧನನ್ನು ಮ್ಯಾಗ್ಕೊಟೆಪ್ಸ್‌ ಎಂದು ಕರೆಯಲಾಗುತ್ತದೆ. ಇನ್ನು ವಿಶೇಷ ಏನೆಂದರೆ ಈ ಜನಾಂಗ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿದೆ.

3. ಚೆಕ್ಸಾಂಗ್‌ ಟ್ರೈಬ್‌
ಈ ಬುಡಕಟ್ಟು ಜನಾಂಗವನ್ನು ಫೆಕ್‌ ಜಿಲ್ಲೆಯ ವ್ಯಾಪ್ತಿಯಲ್ಲಿ ಹೆಚ್ಚು ಕಾಣಬಹುದು. ಈ ಬುಡಕಟ್ಟು ಜನಾಂಗದಲ್ಲಿ ಚೋಕ್ರಿ ಮತ್ತು ಖೆಝಾ ಎಂಬ ಎರಡು ವಿಧ ಕಾಣಬಹುದಾಗಿದೆ. ಅಲ್ಲದೇ ಸಂಗ್ಟಂ ವಿಧದ ಬುಡಕಟ್ಟು ಜನಾಂಗವೂ ಇದಕ್ಕೆ ಸೇರುತ್ತದೆ ಎನ್ನಲಾಗಿದೆ. ಈ ಮೂರು ಬುಡಕಟ್ಟು ಜನಾಂಗಗಳ ಮೊದಲ ಅಕ್ಷರವನ್ನು ಸೇರಿಸಿ ಚೆಕ್ಸಾಂಗ್‌ ಎಂದು ಈ ಬುಡಕಟ್ಟನ್ನು ಕರೆಯಲಾಗಿದೆ.


4. ಚಾಂಗ್‌ ಟ್ರೈಬ್‌
ಕೃಷಿಯನ್ನೇ ಮುಖ್ಯ ಜೀವನಧಾರವಾಗಿಸಿಕೊಂಡಿರುವ ಚಾಂಗ್‌ ಟ್ರೈಬ್‌, ವ್ಯಾಪಾರವನ್ನು ಉಪಕಸಬುವನ್ನಾಗಿಸಿಕೊಂಡಿದೆ. ಮಾಂಸಾಹಾರಿಗಳಾಗಿರುವ ಇವರಿಗೆ ಮೀನು ಮತ್ತು ಮಾಂಸ ನೆಚ್ಚಿನ ಆಹಾರ.

5. ಕಾಚಾರಿ ಟ್ರೈಬ್‌
ಐತಿಹಾಸಿಕ ಹಿನ್ನೆಲೆ ಹೊಂದಿರುವ ದಿಮಾಸಾ ಕಾಚಾರಿ ಬುಡಕಟ್ಟು ಜನಾಂಗ ಅಸ್ಸಾಂ ಮತ್ತು ನಾಗಾಲ್ಯಾಂಡ್‌ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇವರು ಶ್ರೀಮಂತ ಸಂಸ್ಕೃತಿ, ಅಚಾರ ವಿಚಾರವನ್ನು ಹೊಂದಿದ್ದಾರೆ.

6. ಖಿಯಾಮ್ನಿಯುಂಗನ್‌ ಟ್ರೈಬ್‌
ನಾಗಾಲ್ಯಾಂಡ್‌ನ‌ ಖಿಯಾಮ್ನಂಗನ್‌ ಎಂಬಲ್ಲಿ ವಾಸಿಸಿರುವ ಬುಡಕಟ್ಟು ಜನಾಂಗವನ್ನು ಖಿಯಾಮ್ನಿಯುಂಗನ್‌ ಟ್ರೈಬ್‌ ಎನ್ನಲಾಗುತ್ತದೆ. ಈ ಹಿಂದೆ ನಾಗಾಲ್ಯಾಂಡ್‌ನಲ್ಲಿ ದೊಡ್ಡ ಪ್ರವಾಹ ಉಂಟಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಹೀಗಾಗಿ ಜನರು ಖೀಯಾಮ್ನಂಗನ್‌ ಎಂಬ ಪ್ರದೇಶದಲ್ಲಿ ಬಂದು ವಾಸವಾದರು, ಹೀಗಾಗಿ ಇವರಿಗೆ ಖಿಯಾಮ್ನಿಯುಂಗನ್‌ ಟ್ರೈಬ್‌ ಎಂದು ಕರೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next