Advertisement

ಬೂಸ್ಟರ್‌ ಡೋಸ್‌ ಅರಿವು ಮೂಡಿಸಿ

04:58 PM Jul 19, 2022 | Team Udayavani |

ತುಮಕೂರು: ಕೋವಿಡ್‌-19 ತಡೆಗಟ್ಟಲು ಲಸಿಕಾಕರಣ ಅಗತ್ಯವಾಗಿದ್ದು, ಗ್ರಾಮ ಪಂಚಾಯತ್‌ ಹಂತದಲ್ಲಿ ಪಿಡಿಒ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ವೃದ್ಧಾಪ್ಯ ವೇತನಪಡೆಯುತ್ತಿರುವವರ ಮಾಹಿತಿ ತರಿಸಿ ಕೊಂಡು ಅವರಿಗೆ ಬೂಸ್ಟರ್‌ ಡೋಸ್‌ ಲಸಿಕೆ

Advertisement

ಹಾಕಿಸಿ ಕೊಳ್ಳಲು ತಿಳಿಸಬೇಕು. ಈ ಕುರಿತು ತಹಶೀ ಲ್ದಾರರು ಮತ್ತು ತಾಲೂಕುಪಂಚಾಯತ್‌ ಕಾರ್ಯನಿರ್ವಹಕಾಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆಸೂಕ್ತ ನಿರ್ದೇಶನ ನೀಡಬೇಕೆಂದುಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಸೂಚಿಸಿದರು.

ತಮ್ಮ ಕಚೇರಿಯ ಕೆಸ್ವಾನ್‌ ಸಭಾಂಗಣದಲ್ಲಿ ಸೋಮವಾರ ನಡೆದ ತಾಲೂಕು ಮಟ್ಟದಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ಸಭೆ ನಡೆಸಿ ಚರ್ಚಿಸಿ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 18ವರ್ಷ ಮೇಲ್ಪಟ್ಟ ಮೊದಲೆರಡು ಡೋಸ್‌ ಲಸಿಕಾಕರಣ ಪೂರೈಸಿದವರಿಗೆ ಹತ್ತಿರದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಜು.15 ರಿಂದ75 ದಿನಗಳ ಕಾಲ ಬೂಸ್ಟರ್‌ ಡೋಸ್‌ ಹಾಕಲಾಗುವುದು. ನಿಗದಿತ ವಯಸ್ಸಿನಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚಿಸಿದರು.

ಮಾಹಿತಿ ತರಿಸಿಕೊಳ್ಳಿ: ಶಿಕ್ಷಣಾಧಿಕಾರಿಗಳು ತಮ್ಮ ತಾಲೂಕು ವ್ಯಾಪ್ತಿಯ ಪಿಯುಸಿ,ಐಟಿಐ, ಡಿಪ್ಲೊಮಾ, ನರ್ಸಿಂಗ್‌ ಸೇರಿದಂತೆಎಲ್ಲಾ ಶಿಕ್ಷಣ ಸಂಸ್ಥೆಗಳಿಂದ ಲಸಿಕಾಕರಣವಾಗಿರುವ ಬಗ್ಗೆ ಪ್ರಮಾಣಪತ್ರ ಪಡೆಯ ಬೇಕಲ್ಲದೇ, ಲಸಿಕೆ ಪಡೆಯದಿರುವ ಮಕ್ಕಳಿಗೆಕೂಡಲೇ ಲಸಿಕೆ ಹಾಕಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿದರು. 10ನೇತರಗತಿ ನಂತರ ಕಾಲೇಜು ದಾಖಲಾಗದಮಕ್ಕಳ ಮಾಹಿತಿ ತರಿಸಿಕೊಂಡು ಅವರಿಗೂಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರವು ಹರ್‌ ಘರ್‌ತಿರಂಗಾ’ ಕಾರ್ಯಕ್ರಮವನ್ನು ಅನುಷ್ಠಾನಕ್ಕೆತಂದಿದೆ. ಅದರ ನಿರ್ದೇಶನದನ್ವಯ ರಾಜ್ಯದಎಲ್ಲಾ ಸರ್ಕಾರಿ ಕಚೇರಿಗಳು ಹಾಗೂ ಮನೆಗಳಮೇಲೆ ಬರುವ ಆ.11 ರಿಂದ 17ರವರೆಗೆತಿರಂಗಾ ಧ್ವಜವನ್ನು ಹಾರಿಸುವಂತೆ ಸೂಚಿಸ ಲಾಗಿದೆ ಎಂದರು.

Advertisement

ಭೂಮಿ ಯೋಜನೆ ಪ್ರಗತಿ, ಪಹಣಿ ಕಾಲಂ 3/9 ಮಿಸ್‌ ಮ್ಯಾಚ್‌, ಪೈಕಿ ಪಹಣಿಒಟ್ಟುಗೂಡಿಸುವಿಕೆ, 11ಇಗೆ ಸಂಬಂಧಿಸಿದಆರ್‌ಟಿಸಿ ತಿದ್ದುಪಡಿ ಪ್ರಕರಣಗಳ ಪ್ರಗತಿ ಪರಿಶೀಲಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್‌, ತಹಶೀಲ್ದಾರ್‌ ಮೋಹನ್‌ಕುಮಾರ್‌, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಜಿಲ್ಲಾ ಪಂಚಾಯತ್‌ಅಭಿವೃದ್ಧಿ ಉಪಕಾರ್ಯದರ್ಶಿ ಅಥಿಕ್‌ ಪಾಷಾ, ಜಿಲ್ಲಾ ಆರ್‌.ಸಿ.ಎಚ್‌. ಅಧಿಕಾರಿಡಾ.ಕೇಶವರಾಜ್‌ ಸೇರಿದಂತೆ ಇನ್ನಿತರ ಅಧಿಕಾರಿ ವರ್ಗದವರು ಹಾಜರಿದ್ದರು.

ಸಾಮಾಜಿಕ ಕುಂದು ಕೊರತೆಯಡಿ ದಾಖಲಾಗಿರುವ ಪ್ರಕರಣಗಳ ಇತ್ಯರ್ಥ ಮತ್ತು ಸಾಮಾಜಿಕ ಭದ್ರತಾಯೋಜನೆಗಳಡಿ ಬಾಕಿ ಇರುವ ಆಧಾರ್‌ ಸೀಡಿಂಗ್‌ ಪ್ರಕರಣಗಳನ್ನು ಶೀಘ್ರ ವಿಲೇವಾರಿಗೊಳಿಸಿ.-ವೈ.ಎಸ್‌.ಪಾಟೀಲ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next