Advertisement

ಕೋವಿಡ್ ತಡೆಗೆ ಜಾಗೃತರಾಗಿ

12:29 PM May 19, 2020 | Suhan S |

ಬೀಳಗಿ: ಬಾಗಲಕೋಟೆ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಶ್ರೀ ಶರಣಬಸವ ಅಪ್ಪಂಗಳ ಆಶ್ರಮದ ವತಿಯಿಂದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಗಳು ಕೆಲಸವಿಲ್ಲದೆ ತೀವ್ರ ಸಂಕಷ್ಟ ಸ್ಥಿತಿ ಎದುರಿಸುತ್ತಿರುವ ತಾಲೂಕಿನ ಬಡ ಕೂಲಿಕಾರ್ಮಿಕರಿಗೆ, ಕಲ್ಲುಕುಟುಕರ ಸಮಾಜದವರಿಗೆ ಆಹಾರ ಧಾನ್ಯ ಹಾಗೂ ಕಾಯಿಪಲ್ಲೆ ಕಿಟ್‌ಗಳನ್ನು ಸೋಮವಾರ ವಿತರಿಸಿದರು.

Advertisement

ತಾಲೂಕಿನ ಅನಗವಾಡಿ, ತುಮ್ಮರಮಟ್ಟಿ, ಮನ್ನಿಕೇರಿ, ಗಿರಿಸಾಗರ, ಹೆರಕಲ್‌ ಮತ್ತು ಬೀಳಗಿ ಪಟ್ಟಣ ಸೇರಿದಂತೆ ಶ್ರೀಗಳು 500 ಕಿಟ್‌ ನೀಡಿದರು. ಎಲ್ಲರೂ ಸ್ವಚ್ಛತೆ, ಸಾಮಾಜಿಕ ಅಂತರ ಹಾಗೂ ಪರಸ್ಪರ ಸಹಾಯ-ಸಹಕಾರ ನೀಡುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಯಶಾಲಿಯಾಗುವ ಮೂಲಕ ಪ್ರತಿಯೊಬ್ಬರೂ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವುದು ಅಗತ್ಯವಿದೆ ಎಂದರು. ಭೋವಿ ಸಮಾಜದ ಮುಖಂಡ ಚಿನ್ನಪ್ಪ ಬಂಡಿವಡ್ಡರ, ಭೀಮಸಿ ಬಂಡಿವಡ್ಡರ, ನಾರಾಯಣ ಸುರೇಬಾನ, ರಾಮಣ್ಣ ಬಂಡಿವಡ್ಡರ, ಯಲ್ಲಪ್ಪ ಗಣಿ, ಹನುಮಂತ ಲೋಕಾಪುರ, ಶಿವಾನಂದ ಬಂಡಿವಡ್ಡರ, ಬಸು ಬಂಡಿವಡ್ಡರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.