Advertisement
ಮೈಸೂರು ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಜಿಲ್ಲಾ 317ಎ ವತಿಯಿಂದ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ 43ನೇ ವಾರ್ಷಿಕ ಜಿಲ್ಲಾ ಸಮಾವೇಶದಲ್ಲಿ ಅವರು ಮಾತನಾಡಿದರು.
Related Articles
Advertisement
ಹಗರಣಗಳ ಸರಮಾಲೆ: 50ರ ದಶಕದಿಂದ ಇಲ್ಲಿಯವರೆಗೆ ದೇಶದಲ್ಲಿ ಅನೇಕ ಹಗರಣಗಳು ಬಯಲಿಗೆ ಬಂದಿವೆ. ಮೊದಲ ಬಾರಿಗೆ ಜೀಪ್ ಖರೀದಿ ಹಗರಣದಿಂದ ಪ್ರಾರಂಭವಾಗಿ ಕಲ್ಲಿದ್ದಲು ಹಗರಣದವರೆಗೆ ಬೃಹತ್ ಮಟ್ಟದಲ್ಲಿ ಆವರಿಸಿದೆ.
ಬೋಪೋರ್ಸ್, ಕಾಮನ್‌ವೆಲ್ತ್, 2ಜೀ ಹಗರಣ ಸೇರಿದಂತೆ ಹಗರಣಗಳ ಸರಮಾಲೆಯೇ ನಡೆದಿರುವುದು ನಮ್ಮ ಕಣ್ಣ ಮುಂದಿದೆ. ಈ ರೀತಿಯಲ್ಲಿ ಭಾರಿ ಪ್ರಮಾಣದಲ್ಲಿ ಹಣ ಸೋರಿಕೆಯಾಗುತ್ತಿದ್ದರೆ ದೇಶದ ಅಭಿವೃದ್ಧಿ ಎಲ್ಲಿಂದ ಸಾಧ್ಯ ಎಂದು ಪ್ರಶ್ನಿಸಿದ ಅವರು, ಈ ರೀತಿ ಹಣ ಪೋಲಾಗುವುದನ್ನು ನಾನು ಧಿಕ್ಕರಿಸುತ್ತೇನೆ ಎಂದರು.
ಚರ್ಚೆ ಇಲ್ಲ: ಸ್ವಾತಂತ್ರ್ಯ ಬಂದ ದಿನಗಳಲ್ಲಿ 1947ರಿಂದ 49ರವರೆಗೆ ಇದ್ದ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ವ್ಯವಸ್ಥೆ ಇಂದು ಇಲ್ಲ. ಅಂದು ಶಾಸನಸಭೆಗಳಲ್ಲಿ ನಡೆಯುತ್ತಿದ್ದ ಚರ್ಚೆಗಳು ಇಂದು ನಡೆಯುತ್ತಿಲ್ಲ. ಕೇವಲ ಸಭಾತ್ಯಾಗ ಮಾಡುವುದೇ ಶಾಸಕಾಂಗವಾಗಿಬಿಟ್ಟಿದೆ. ಇದು ಸಂವಿಧಾನದ ಮಹತ್ವವನ್ನು ಹಾಳುಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನ್ಯಾಯಾಂಗದಲ್ಲೂ ಭ್ರಷ್ಟಾಚಾರ: ಇಂದು ಸಂವಿಧಾನದ ಎಲ್ಲಾ ಅಂಗಗಳು ಭ್ರಷ್ಟಾrಚಾರದ ಮಸಿ ಬಳಿದುಕೊಂಡಿವೆ. ಕಾರ್ಯಾಂಗ ಹಾಗೂ ಶಾಸಕಾಂಗ ತಮ್ಮ ಪಾವಿತ್ರ್ಯತೆ ಕಳೆದುಕೊಂಡಿವೆ. ಇಂದು ನ್ಯಾಯಾಂಗದಲ್ಲೂ ಭ್ರಷ್ಟಾಚಾರ ಇರುವುದನ್ನು ನಾ ಹೇಳಬೇಕಿಲ್ಲ.
ಅದು ಎಲ್ಲರಿಗೂ ತಿಳಿದ ವಿಚಾರ. ಕಾರ್ಯಾಂಗದ ಮಧ್ಯಸ್ಥಿಕೆ ಇಲ್ಲದೇ ದೇಶದಲ್ಲಿ ಯಾವುದೇ ಹಗರಣ ಮತ್ತು ಭ್ರಷ್ಟಾಚಾರ ನಡೆಯಲು ಸಾಧ್ಯವಿಲ್ಲ. ಈ ಎಲ್ಲದಕ್ಕೂ ಮೂಲ ಕಾರಣ ಕಾರ್ಯಾಂಗದ ಅಧಿಕಾರಿಗಳು ಮತ್ತು ಶಾಸಕಾಂಗ. ಈ ರೀತಿ ಹಣ ಪೋಲಾದರೆ ಸಮಾಜ ಮತ್ತು ದೇಶದ ಪ್ರಗತಿ ಬಯಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಸರ್ಕಾರಿ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಆದರೆ, ಎಲ್ಲಾ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಕಡು ಬಡವರಿಗಾಗಿಯೇ ಸರ್ಕಾರಿ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಆದರೆ, ಆ ವೈದ್ಯರುಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ಆಸ್ಪತ್ರೆಗೆ ನೇರವಾಗಿ ಬರುವ ರೋಗಿ, ಘೋರವಾಗಿ ಹೊರಗೆ ಹೋಗುವಂತಹ ಪರಿಸ್ಥಿತಿ ಇದೆ ಎಂದು ಹೇಳಿದರು.
ವೃತ್ತಿ ಧರ್ಮ ಮರೆತ ಮಾಧ್ಯಮ: ಮಾಧ್ಯಮವನ್ನು ಸಂವಿಧಾನದ ನಾಲ್ಕನೇ ಅಂಗವನ್ನಾಗಿ ಸಾರ್ವಜನಿಕರು ಮಾಡಿದ್ದಾರೆ. ಆದರೆ ಮಾಧ್ಯಮದವರು ಮಾಡುತ್ತಿರುವುದಾರು ಏನು? ಪೇಯ್ಡ ನ್ಯೂಸ್ ಭರದಲ್ಲಿ ಮಾಧ್ಯಮ ತನ್ನ ವೃತ್ತಿ ಧರ್ಮ ಮರೆತಿದೆ. ಜೊತೆಗೆ ತನ್ನ ಪಾವಿತ್ರ್ಯತೆಯನ್ನು ಕಳೆದುಕೊಳ್ಳುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕ ವಿ.ವಿ. ಕೃಷ್ಣ ರೆಡ್ಡಿ, ಕೆ.ವಂಶಿಧರ್ ಬಾಬು, ಜಿಲ್ಲಾ ಗವರ್ನರ್ ವಿ. ರೇಣುಕುಮಾರ್, ಸಂಸ್ಥೆಯ ಕಾರ್ಯದರ್ಶಿ ಎಚ್.ಅಶ್ವಥ್ ನಾರಾಯಣ, ಖಜಾಂಚಿ ಎಲ್.ವಿ.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.