ಮಂಡ್ಯ: ಶಾಲಾ-ಕಾಲೇಜು ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಿಂದಲೇ ರಸ್ತೆ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಎಸ್‌ಬಿಇಟಿ ಕಾರ್ಯದರ್ಶಿ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾಶಿವಲಿಂಗಯ್ಯ ಹೇಳಿದರು.
ನಗರದ ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಮೇಲುಕೋಟೆ ಅಂಗಮಣಿ ಉತ್ಸವ ಸಂಗ್ರಹ ಚಿತ್ರ. ಸಂಸ್ಥೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಒಂದು ನಿಗದಿತ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದರು.
ವಿದ್ಯಾರ್ಥಿಗಳು ಕಾನೂನಿನ ಹಕ್ಕು ತಿಳಿದುಕೊಂಡು ಪಾಲನೆ ಮಾಡಬೇಕು. ವಾಹನ ಚಲಾಯಿಸುವಾಗ ರೂಲ್ಸ್ ಫಾಲೋ ಮಾಡಬೇಕು. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರೂ ಕಾನೂನುಗಳನ್ನು ತಿಳಿದುಕೊಳ್ಳಬೇಕು. ಕಳೆದ 2-3 ವರ್ಷಗಳಿಂದ ಕೋವಿಡ್ ನಿಂದಾಗಿ ಶಾಲಾ ಕಾಲೇಜುಗಳಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ನಡೆದಿರಲಿಲ್ಲ. ರಸ್ತೆ ಸುರಕ್ಷತೆ ಉಪಯುಕ್ತತೆಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾ ನಂದ ಮಾತನಾಡಿ, ಜ.11 ರಿಂದ 17 ರವರೆಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಿಮಿತ್ತ ನಾವು ರಸ್ತೆ ಸುರಕ್ಷತೆ ಜಾಗೃತಿ ಅಭಿಯಾನ ಪ್ರಾರಂಭಿ ಸಿದ್ದೇವೆಂದರು. ಶಾಲಾ ವಿದ್ಯಾರ್ಥಿಗಳು 18 ವರ್ಷ ತುಂಬುವವರೆಗೂ ವಾಹನ ಚಾಲನೆ ಮಾಡಬಾರದು. ವಾಹನ ಚಾಲಕರು ಪ್ರತಿಯೊಬ್ಬರು ಡ್ರೆçವಿಂಗ್ ಲೈಸೆನ್ಸ್, ಇನ್ಸುರೆನ್ಸ್, ಹೆಲ್ಮೆಟ್ ಸೇರಿದಂತೆ ಸರ್ಕಾರದ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸ ಬೇಕು. ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಸಪ್ತಾಹದ ಬಗ್ಗೆ ತಮ್ಮ ನೆರೆಹೊರೆ ಯವರಿಗೆ, ಪೋಷಕರಿಗೆ ಜಾಗೃತಿ ಮೂಡಿಸಬೇಕೆಂದರು.
ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕರಾದ ಎಂ.ಸಿ. ಎನ್. ಪ್ರಸಾದ್, ಸಂತೋಷ್, ಮಾಂಡವ್ಯ ಎಕ್ಸಲೆನ್ಸ್ ಪಿಯು ಕಾಲೇಜು ಪ್ರಾಂಶು ಪಾಲ ಎಚ್.ಎಂ.ಶ್ರೀನಿವಾಸ್, ಎಸ್ ಬಿಇಟಿ ಸಂಸ್ಥೆ ಸಾರ್ವಜನಿಕ ಸಂಪ ರ್ಕಾ ಧಿಕಾರಿ ರಂಗಸ್ವಾಮಿ ಮತ್ತಿತರರಿದ್ದರು.