ಮಗುವಿನ ಬೆಳವಣಿಗೆಯ ಹಂತದಲ್ಲಿ ಕ್ರೀಡೆ ಅತ್ಯಂತ ಪ್ರಮುಖ ಅಂಶವಾಗಿದೆ. ಪ್ರತಿಯೊಬ್ಬ ಪೋಷಕರು ಆಟದ ಮೂಲಕ ಕಲಿ ಕೆಯ ಪ್ರಕ್ರಿಯೆಯಲ್ಲಿ ನಂಬಿಕೆ ಇಟ್ಟುಕೊಳ್ಳಬೇಕು. ಪ್ರಸ್ತುತ ಕೋವಿಡ್ ಸಾಂಕ್ರಾಮಿಕದ ಕಾರಣ ಶಾಲೆಗಳು ಮುಚ್ಚಲ್ಪಟ್ಟಿವೆ. ಮಕ್ಕಳು ಆನ್ ಲೈನ್ ನಲ್ಲಿ ಕಲಿಯುತ್ತಿದ್ದಾರೆ. ಆದರೆ ಅವರ ಸರ್ವತೋಮುಖ ಬೆಳವಣಿಗೆಗೆ ಸಮಗ್ರ ಕಲಿಕೆಯ ವಾತಾವ ರಣವನ್ನು ಮನೆಯಲ್ಲೇ ನಿರ್ಮಿಸುವುದು ಬಹುಮುಖ್ಯವಾಗಿರುತ್ತದೆ.
ಇದನ್ನೂ ಓದಿ:ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಕ್ರಿಕೆಟ್ ನಿಂದ ಅನಿರ್ದಿಷ್ಟಾವಧಿ ಬಿಡುವು ಪಡೆದ ಸ್ಟೋಕ್ಸ್!
ಕ್ರೀಡೆ ಆಧಾರಿತ ಕಲಿಕೆಯು ಮಕ್ಕಳನ್ನು ವಿವಿಧ ರೀತಿಯ ಪ್ರಾಯೋಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಅವರ ಕಲ್ಪನೆ, ಅನ್ವೇಷಣೆ, ಅನುಭವ, ರಚನೆಗೆ ಪ್ರೋತ್ಸಾಹ ನೀಡಿ ತಪ್ಪುಗಳನ್ನು ಮಾಡಿ ಕಲಿಯಲು ಅವಕಾಶವನ್ನು ಒದಗಿಸುತ್ತದೆ. ಇದರಿಂದ ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲಗಳು ಅಭಿವೃದ್ಧಿ ಪಡಿಸಲು ಸಹಾಯವಾಗುವುದು. ಮಕ್ಕಳು ಪಂಚೇಂದ್ರಿಯಗಳನ್ನು ಕ್ರೀಡೆಯಲ್ಲಿ ತೊಡಗಿಸುವುದರಿಂದ ಸಹಜವಾಗಿ ಅವರಲ್ಲಿ ಕುತೂಹಲ, ಪರಿಶೋಧನೆ ಸಾಮರ್ಥ್ಯಗಳನ್ನು ಬೆಳೆಸುತ್ತದೆ.
ಮಗುವಿಗೆ ಸಂತೋಷ ಕರವಾದ ಚಟುವಟಿಕೆಯಲ್ಲಿ ತೊಡಗಿಸಿದಾಗ ಅವರ ದೇಹದಲ್ಲಿ ಹ್ಯಾಪಿ ಹಾರ್ಮೋನ್‌ಗಳ ಉತ್ಪಾದನೆಯಾಗುತ್ತದೆ. ಇದು ಕಲಿಕೆ, ಸ್ಮರಣೆ, ಚಟುವಟಿಕೆಗಳನ್ನು ವೃದ್ಧಿಗೆ ಪ್ರೇರಣೆ ನೀಡುವುದು. ವಿವಿಧ ವಯಸ್ಸಿನ ಮಕ್ಕಳು ವಿಭಿನ್ನ ಬೆಳವಣಿಗೆಯ ಮೈಲುಗಲ್ಲುಗಳನ್ನು ಹೊಂದಿರುತ್ತಾರೆ. ಸರಳ ವಿಷಯಗಳನ್ನು ಭಾಷಾಂತರಿಸಲು ಅಥವಾ ಅರ್ಥ ಮಾಡಿಕೊಳ್ಳಲು ಅನೇಕ ಬಾರಿ ಮಕ್ಕಳು ಕಷ್ಟ ಪಡುತ್ತಾರೆ. ಆದರೆ ಅಂತಹ ವಿಷಯಗಳನ್ನು ಆಟದ ಮೂಲಕ ಅಥವಾ ಆಸಕ್ತಿದಾಯಕ ರೀತಿಯಲ್ಲಿ ವಿವರಿಸಿದರೆ ಅದನ್ನು ಅವರು ಸುಲಭವಾಗಿ ಗ್ರಹಿಸುತ್ತಾರೆ. ಉದಾಹರಣೆಗೆ ಮಗುವಿಗೆ ಬಣ್ಣಗಳನ್ನು ಹೆಸರಿಸಲು ಕಷ್ಟವಾದರೆ
ಬಣ್ಣ ಬಣ್ಣ ಎಂಬ ಆಟ ಆಡುವಾಗ ಸುತ್ತ ಮುತ್ತಲಿನ ವಿವಿಧ ಬಣ್ಣಗಳನ್ನು ತೋರಿಸಿ ಕಲಿಸು ವುದು ಪರಿಣಾಮಕಾರಿಯಾಗಿರುತ್ತದೆ. ಅಲ್ಲದೇ ಮಗುವನ್ನು ವಯಸ್ಸಿಗೆ ತಕ್ಕ ಚಟುವಟಿಕೆಗಳಿಗೆ ಒಡ್ಡಿಕೊಳ್ಳುವುದು ನಿರ್ಣಾಯಕವಾಗಿರುತ್ತದೆ.
ಮಕ್ಕಳನ್ನು ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವುದರಿಂದ ಅವರು ಪರಿ ಸ್ಥಿತಿಯನ್ನು ನಿಯಂತ್ರಿಸಲು ಕಲಿಯುತ್ತಾರೆ. ಅಗತ್ಯವಿದ್ದರೆ ಮಾತ್ರ ಪೋಷಕರನ್ನು ಕರೆಯು ತ್ತಾರೆ. ಆಗ ಪೋಷಕರು ಹಸ್ತಕ್ಷೇಪ ಮಾಡಿದರೆ ಅವರು ಹೆಚ್ಚು ಜಾಗರೂಕರಾಗಿರುತ್ತಾರೆ. ಇದ ರಿಂದ ಅವರು ಜವಾಬ್ದಾರಿಯುತ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯವಾಗುವುದು. ಮಕ್ಕಳನ್ನು ಪ್ರಪಂಚದೊಂದಿಗೆ ಹೊಂದಿಸಲು, ಪರಿಕಲ್ಪನೆಗಳ ನಡುವೆ ಸಂಪರ್ಕ ಬೆಳೆಸಲು, ಅವರ
ಜ್ಞಾನವನ್ನು ವಿಸ್ತರಿಸಲು ಸಹಾಯ ಮಾಡುವ ಚಟುವಟಿಕೆಗಳನ್ನು ಸೇರಿಸಬೇಕು. ಉದಾ- ಮನೆಯ ತೋಟದಲ್ಲಿ ತರಕಾರಿಗಳ ಸಂಗ್ರಹ ಜವಾಬ್ದಾರಿ ಅವರಿಗೆ ವಹಿಸುವುದು ಈ ಮೂಲಕ ವಿವಿಧ ಬಗೆಯ ತರಕಾರಿ, ಹಣ್ಣುಗಳನ್ನು ಪರಿಚಯಿಸುವುದು ಮಾಡಬಹುದು.
ಮಕ್ಕಳು ಪೋಷಕರೊಂದಿಗೆ ಸಂಪರ್ಕ ಸಾಧಿಸಲು ಅನುವು ಮಾಡಿಕೊಡುವ ಧ್ಯಾನ, ಇತರೆ ಗುಂಪು ಚಟುವಟಿಕೆಗಳಿಂದ ಭಾವಪೂರ್ಣ ಚಟುವಟಿಕೆಗಳನ್ನು ಪರಿಚಯಿಸಬೇಕು. ಇದರಿಂದ ಭಾವನಾತ್ಮಕ ಮತ್ತು ಸಾಮಾಜಿಕ ಸಂಬಂಧಗಳ ಬೆಳವಣಿಗೆ ವೃದ್ಧಿಯಾಗುವುದು. ಇದು ಉತ್ತಮ ಸಂಬಂಧವನ್ನು ಬೆಳೆಸುತ್ತದೆ. ಹೊಸ ಕೌಶಲಗಳನ್ನು ಪಡೆಯಲು ಪುನರಾವರ್ತನೆ ಸಹಾಯ ಮಾಡುವುದು. ಪುನರಾವರ್ತನೆಯು ಹೊಸ ಆಲೋಚನೆಗಳನ್ನು ಪ್ರಯೋಗಿಸಲು, ಅನ್ವೇಷಿ ಸಲು, ರಚಿಸಲು, ಪರೀಕ್ಷಿಸಲು ಅವಕಾಶಗಳನ್ನು ಒದಗಿಸುತ್ತದೆ.