Advertisement
ವಿಚಿತ್ರವೆಂದರೆ, ಈ ಹಿಂದಿನ ಪ್ರಕರಣದಂತೆಯೇ ಇದರಲ್ಲೂ ಬಿಡಿಎ ಕಾರ್ಯದರ್ಶಿ-3 ಹಂತದ ಅಧಿಕಾರಿ ನೇತೃತ್ವದಲ್ಲಿ ಪ್ರಾಧಿಕಾರದಹಲವುಸಿಬ್ಬಂದಿಶಾಮೀಲಾಗಿರುವುದು ತನಿಖೆಯಿಂದ ಬಯಲಾಗಿದೆ.
Related Articles
Advertisement
ಪ್ರಕರಣದ ವಿವರ: ಹೊಸಕೆರೆಹಳ್ಳಿಯಲ್ಲಿ ಉದ್ದೇಶಿತ ಸರ್ವೆ ನಂಬರ್‌ಗಳಲ್ಲಿದ್ದ ಗುಡಿಸಲು ನಿವಾಸಿಗಳನ್ನು ಈ ಹಿಂದೆ ಒಕ್ಕಲೆಬ್ಬಿಸಲಾಗಿತ್ತು. ಇದರಲ್ಲಿ 541 ಫಲಾನು ಭವಿಗಳಿಗೆ ಬೇರೆ ಕಡೆಗೆ ಸಗಟು ನಿವೇಶನ ಹಂಚಿಕೆ ಮಾಡಬೇಕಿತ್ತು. ಅದರಲ್ಲಿ ಮೊದಲ ಹಂತದಲ್ಲಿ 238 ಫಲಾನುಭವಿಗಳಿಗೆ ಮಾತ್ರ 20×30 ಚದರಡಿಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಉಳಿದಿದ್ದರಲ್ಲಿ180 ಫಲಾನುಭವಿಗಳಿಗೆ 2ನೇ ಹಂತದಲ್ಲಿ ಹಂಚಿಕೆ ಮಾಡುವ ವೇಳೆ ಈ ಅವ್ಯವಹಾರ ನಡೆದಿದೆ.
ಈ ಬಗ್ಗೆ ಖಾಸಗಿ ವ್ಯಕ್ತಿಯೊಬ್ಬರು ದಾಖಲೆ ಸಹಿತಬಿಡಿಎಗೆ ದೂರು ನೀಡಿದ್ದರು. ಅದನ್ನು ಆಧರಿಸಿ ಬಿಡಿಎ ವಿಶೇಷ ಕಾರ್ಯಪಡೆ ತನಿಖೆ ನಡೆಸಿತು. ಪ್ರಕರಣದ ದಾಖಲೆಗಳು ಹಾಗೂ ಮೂಲ ಕಡತಗಳಿಂದ ಬಿಡಿಎಗೆ ವಂಚಿಸಿರುವುದು ಮತ್ತು ಆಮೂಲಕ ಕೋಟ್ಯಂತರ ರೂಪಾಯಿ ನಷ್ಟ ಉಂಟು ಮಾಡಿರುವುದು ಕಂಡು ಬಂದಿದೆ.
ಈಚೆಗೆ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಬಿಡಿಎಗೆ ಪರ್ಯಾಯವಾಗಿ ಅಥವಾ ಬಿಡಿಎ ಉಪ ಶಾಖೆ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಖಾಸಗಿ ಕಚೇರಿ ಮೇಲೆ ದಾಳಿ ನಡೆಸಿ, ಅಕ್ರಮವಾಗಿ ತಯಾರಿಸುತ್ತಿದ್ದ ಹತ್ತಾರು ದಾಖಲೆ ವಶಪಡಿಸಿಕೊಳ್ಳಲಾಗಿತ್ತು.ನೂರಾರು ಕೋಟಿ ರೂ.ಅವ್ಯವಹಾರ ಪ್ರಕರಣದ ತನಿಖೆಯನ್ನು ವಿಶೇಶ ತನಿಖಾ ತಂಡ (ಎಸ್‌ಐಟಿ)ಕ್ಕೆ ವಹಿಸುವುದಾ ಗಿಯೂ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಪ್ರಕಟಿಸಿದ್ದರು. ಈ ಬೆನ್ನಲ್ಲೇ ಪ್ರಕರಣ ಬಹಿರಂಗಗೊಂಡಿದೆ.
ಪ್ರಕರಣದ ಅವ್ಯವಹಾರದ ಮೊತ್ತ ಎಷ್ಟು ಹಾಗೂ ಅನರ್ಹರಿಗೆ ಹಂಚಿಕೆಮಾಡಲಾದ ಭೂಮಿಯ ಪ್ರಮಾಣ ಎಷ್ಟು ಎಂಬುದನ್ನು ಇನ್ನಷ್ಟೇ ಲೆಕ್ಕ ಹಾಕಬೇಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆಕೆಲವು ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. –ಡಾ. ಮಹದೇವ್, ಆಯುಕ್ತರು, ಬಿಡಿಎ
-ವಿಜಯಕುಮಾರ್ ಚಂದರಗಿ