Advertisement
ಈ ಹಿಂದೆಯೇ ತಾತ್ಕಾಲಿಕ ಪಟ್ಟಿ ಬಿಡುಗಡೆ ಯಾಗಬೇಕಿದ್ದರೂ ಚುನಾ ವಣಾ ನೀತಿ ಸಂಹಿತೆ ಅಡ್ಡಿ ಬಂದ ಹಿನ್ನೆಲೆಯಲ್ಲಿ ವಿಳಂಬವಾಗಿದೆ. ಇದೀಗ ವಿವಿಧ ಅಳತೆ ಯ ಸುಮಾರು 5 ಸಾವಿರ ನಿವೇಶನಗಳ ತಾತ್ಕಾಲಿಕ ಪಟ್ಟಿ ಯನ್ನು ಸಿದ್ಧಪ ಡಿಸಿರುವ ಬಿಡಿಎ, ತನ್ನ ವೆಬ್‌ಸೈಟ್ www.bdabangalore.org ನಲ್ಲಿ ಪ್ರಕಟಿಸಿದೆ. ಸಾರ್ವಜನಿಕರು ವೆಬ್‌ಸೈಟ್ ಮೂಲಕ ಮಾಹಿತಿ ಪಡೆಯಬಹುದು. ಪ್ರಾಧಿಕಾರದ ಕೇಂದ್ರ ಕಚೇರಿಯ ಸೂಚನಾ ಫಲಕದಲ್ಲೂ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿದೆ.
ಪರಿಶೀಲಿಸಿದ ಬಳಿಕ, ಕೆಂಪೇಗೌಡ ಬಡಾವಣೆಯ 2ನೇ ಹಂತದ ನಿವೇಶನ ಹಂಚಿಕೆಯ ಅಂತಿಮ ಪಟ್ಟಿ ಗಣಕೀಕೃತ ಹಂಚಿಕೆ ಮೂಲಕ ನಿಗದಿ ಪಡಿಸಲಾಗುವುದು ಎಂದಿದ್ದಾರೆ. ಅರ್ಜಿ ಸಲ್ಲಿಸಿ ನಿವೇಶನ ಹಂಚಿಕೆ ಯಾಗದ ಅರ್ಜಿ ದಾರರಿಗೆ, ಪಾವತಿಸಿರುವ ಆರಂಭಿಕ ಠೇವಣಿ ಮೊತ್ತವನ್ನು ಅವರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡುವ ಪ್ರಕ್ರಿಯೆ ಅಂತಿಮ ಪಟ್ಟಿ ಪ್ರಕಟಿಸಿದ ನಂತರ ನಡೆಯಲಿದೆ.