ಬೆಂಗಳೂರು: ಆಧಾರ್ ಕಾರ್ಡಿನಿಂದ ಹಿಡಿದು ಭೂ ಹಿಡುವಳಿ ಪ್ರಮಾಣ ಪತ್ರದವರೆಗೆ 79 ಅಗತ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ “ಜನಸೇವಕ’ ಯೋಜನೆ ವ್ಯಾಪ್ತಿಗೆ ಶೀಘ್ರದಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸೇವೆಗಳನ್ನೂ ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಸುಬ್ರಮಣ್ಯ ನಗರ ವಾರ್ಡ್ ವ್ಯಾಪ್ತಿಯ ಸಂಗೊಳ್ಳಿ ರಾಯಣ್ಣ ಉದ್ಯಾನದಲ್ಲಿ ಆಯೋಜಿಸಲಾಗಿದ್ದ ಜನಸೇವಕ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಜನರು ಯಾವ ಸೇವೆ ತಮಗೆ ಅಗತ್ಯವಿದೆ. ನುರಿತ ಜನಸೇವಕ ಸ್ವಯಂಸೇವಕರು ಮನೆ ಬಾಗಿಲಿಗೆ ಬಂದು, ಆಯಾ ಸೇವೆಗೆ ಅಗತ್ಯವಿರುವ ದಾಖಲೆಗಳನ್ನು ಪಡೆದುಕೊಂಡು ನಿಗದಿತ ದಿನಗಳಲ್ಲಿ ನಿಗದಿತ ಶುಲ್ಕದೊಂದಿಗೆ ಆ ಸೇವೆಗಳನ್ನು ತಲುಪಿಸಲಿದ್ದಾರೆ ಎಂದರು.
ಇದರಿಂದ ಜನರು ಅನಗತ್ಯವಾಗಿ ಕಚೇರಿಗೆ ಅಲೆಯುವುದು, ಮಧ್ಯವರ್ತಿಗಳಿಂದ ವಂಚನೆಗೆ ಒಳಗಾಗುವುದು ಮತ್ತು ಲಂಚ ಕೊಡುವುದು ತಪ್ಪುತ್ತದೆ ಎಂದು ಹೇಳಿದರು.
21 ದಿನಗಳಲ್ಲಿ ಜನರ ಮನೆ ಬಾಗಿಲಿಗೆ: ಸೇವೆಗಳಲ್ಲಿ ಆಧಾರ್ ಕಾರ್ಡ್ ಸಂಬಂಧಿತ ಸೇವೆ ಗಳು, ಆರೋಗ್ಯ ಹೆಲ್ತ್ ಕಾರ್ಡ್, ಬಯೋಮೆಟ್ರಿಕ್ ಪರಿಷ್ಕರಣೆ, ಆದಾಯ ಮತ್ತು ಜಾತಿ ಪ್ರಮಾಣಪತ್ರ, ಭೂ ಹಿಡುವಳಿ ಪ್ರಮಾಣಪತ್ರ ಮತ್ತು ಬೋನಾ ಫೈಡ್ ಪ್ರಮಾಣಪತ್ರ ಮುಂತಾದವು ಸೇರಿವೆ.
ಈ ಸೇವೆಗಳ ನ್ನೆಲ್ಲ ಕನಿಷ್ಠ ಒಂದು ದಿನದಿಂದ ಹಿಡಿದು ಗರಿಷ್ಠ 21 ದಿನಗಳಲ್ಲಿ ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಇ-ಆಡಳಿತ ಯೋಜನಾಧಿಕಾರಿ ಬಿ.ಎನ್. ವರಪ್ರಸಾದ್ ರೆಡ್ಡಿ ಇತರರು ಇದ್ದರು.