Advertisement

ಬಿ.ಡಿ. ಪಾಟೀಲ ಭವಿಷ್ಯದ ಶಾಸಕ

09:29 AM Feb 08, 2019 | |

ಇಂಡಿ: ಫೆ.10ರಂದು ನಡೆಯಲ್ಲಿರುವ ಎಸ್‌ಸಿ, ಎಸ್‌ಟಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಭಾಗವಹಿಸಿ ಬಿ.ಡಿ. ಪಾಟೀಲರ ಅಭಿಮಾನಿಗಳು ಎಂದು ರಾಜ್ಯಾದ್ಯಂತ ಪಸರಿಸಿ ಮುಂದಿನ ದಿನಗಳಲ್ಲಿ ಅವರು ಈ ಕ್ಷೇತ್ರದ ಶಾಸಕರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ತೋಟಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ ಮನಗೂಳಿ ಭವಿಷ್ಯ ನುಡಿದರು.

Advertisement

ಪಟ್ಟಣದ ಸ್ಟೇಶನ್‌ ರಸ್ತೆಯ ಖಾಸಗಿ ಹೋಟೆಲ್‌ ಸಭಾಂಗಣದಲ್ಲಿ ಹಮ್ಮಿಕೊಂಡ ವಿಜಯಪುರದ ಡಾ| ಬಿ.ಆರ್‌ ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ ಫೆ.10ರಂದು ನಡೆಯಲಿರುವ ರಾಜ್ಯಮಟ್ಟದ ಎಸ್‌.ಸಿ, ಎಸ್‌.ಟಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಈ ಸಮಾವೇಳಕ್ಕೆ ಜನರು ಆಗಮಿಸಲಿದ್ದು, ಜಿಲ್ಲೆಯ ಪಕ್ಷದ ಕಾರ್ಯಕರ್ತರು ಹೆಚ್ಚಿನ ಕಾಳಜಿ ಮತ್ತು ಮುತುವರ್ಜಿ ವಹಿಸಬೇಕು. ಗ್ರಾಮೀಣ, ಹೋಬಳಿ ಮತ್ತು ತಾಲೂಕು ಕೇಂದ್ರದಿಂದ ಪಕ್ಷದ ಅಭಿಮಾನಿಗಳನ್ನು ಸಮಾವೇಶಕ್ಕೆ ಕರೆ ತರಬೇಕು ಎಂದು ಹೇಳಿದರುಲ ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ ಮಾತನಾಡಿ, ಕೇಂದ್ರ ಸರಕಾರ ನುಡಿದಂತೆ ನಡಯದೆ ಸುಳ್ಳು ಹೇಳಿಕೆಗಳನ್ನು ನೀಡಿ ಮೋಸ ಮಾಡಿದೆ. ರೈತರಿಗೆ ಇಂದು ಸಾಲ ಮನ್ನಾ ಮಾಡದೆ ಕೇವಲ 6 ಸಾವಿರ ರೂ. ನೀಡಿ ರೈತರಿಗೆ ಅಪಮಾನ ಮಾಡಿದಂತಾಗಿದೆ. 

ವಿಜಯಪುರ ಜಿಲ್ಲೆಗೆ ಇಬ್ಬರು ಶಾಸಕರನ್ನು ಆಯ್ಕೆಗೊಳಿಸಿ ಇಬ್ಬರು ಅಭ್ಯರ್ಥಿಗಳನ್ನು ಅಲ್ಪಮತಗಳ ಅಂತರದಿಂದ ಪರಾರ್ಜಿತರಾಗಿದ್ದಾರೆ. ವಿಜಯಪುರ ಜಿಲ್ಲೆ ಜೆಡಿಎಸ್‌ ಭದ್ರ ಬುನಾದಿಯಾಗಿದೆ. ಇಂತಹ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಗೆ ಟಿಕೆಟ್‌ ಕೊಡುವಂತೆ ಕಾಂಗ್ರೆಸ್‌ ವರಿಷ್ಠರಿಗೂ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮುಖಂಡ ಬಿ.ಡಿ.ಪಾಟೀಲ, ಜೆ.ಡಿ.ಎಸ್‌ ಮುಖಂಡ ಎಂ.ಆರ್‌.
ಪಾಟೀಲ, ಮಾಜಿ ವಿಧಾನ ಪರಿಷತ್‌ ಸದಸ್ಯ ಬಿ.ಜಿ ಪಾಟೀಲ, ಡಾ| ರೀಯಾಜ ಫಾರೂಕಿ ಮಾತನಾಡಿದರು.

Advertisement

ಜಿಲ್ಲಾ ಪಂಚಾಯತ್‌ ಸ್ಥಾಯಿ ಸಮಿತಿ ಅಧ್ಯಕ್ಷ ರಾಮು ರಾಠೊಡ, ನಿವೃತ್ತ ಡಿವೈಎಸ್‌ಪಿ ಬಿ.ವೈ. ಬೆಳುಬ್ಬಿ, ಬಿಲಾವರ ಖಾಜಿ, ಅಣ್ಣಪ್ಪ ಪೂಜಾರಿ, ಮಂಜುನಾಥ ಕಾಮಗೊಂಡ, ರೇಣುಕಾ ಅಗಸರ, ಮಲ್ಲಯ್ನಾ ಮಠಪತಿ, ಬಸವರಾಜ ಕುಮಸಗಿ, ಶ್ರೀಶೈಲಗೌಡ ಪಾಟೀಲ, ಜಗನ್ನಾಥ ಇಂಡಿ, ಸಿದ್ದು ಡಂಗಾ, ಎಂ.ಬಿ. ಮಾಣಿಕ, ಬಾಳು ರಾಠೊಡ, ಮಹಿಬೂಬ ಬೇವನೂರ ಸೇರಿದಂತೆ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು. ಮಲ್ಲಿಕಾರ್ಜುನ ಯಂಡಿಗೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು
ಸ್ವಾಗತಾರ್ಹ. ಪಕ್ಷದಲ್ಲಿ ಹಿರಿಯನಾದ ನನ್ನನ್ನು ಕಡೆಗಣಿಸಿರುವುದು ಮನಸ್ಸಿಗೆ ನೋವನ್ನುಂಟು ಮಾಡಿದೆ ಎಂದು ಮಾಜಿ ವಿಧಾನ ಪರಿಷತ್‌ ಸದಸ್ಯ ಬಿ.ಜಿ ಪಾಟೀಲ ಹಲಸಂಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಜಿಲ್ಲಾ ಜೆಡಿಎಸ್‌ ನಾಯಕರು ಸರ್ವಾಧಿಕಾರಿ ಧೋರಣೆ ತೋರಿದ್ದಾರೆ. ತಾಲೂಕಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಚುನಾವಣೆ ಬಂದಿರುವುದರಿಂದ ಅದು ರೈತರ ಆಸ್ತಿಯಾಗಬೇಕು ಎಂಬ ಕಾರಣ ನಾನು ಕೂಡಾ ಅಭ್ಯರ್ಥಿಯಾಗಿದ್ದೇನೆ ಎಂದು ಇದೇ ಸಂರ್ದದಲ್ಲಿ ತಿಳಿಸಿದರು.

ನಾಡಿದ್ದು ಜಿಲ್ಲಾ ಎಸ್‌ಸಿ, ಎಸ್‌ಟಿ ಸಮಾವೇಶ
ಸಿಂದಗಿ: ವಿಜಯಪುರ ನಗರದ ದರಬಾರ ಶಾಲೆ ಮೈದಾನದಲ್ಲಿ ಫೆ.10ರಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾ ಎಸ್‌ಸಿ, ಎಸ್‌ಟಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಎಂ.ಸಿ. ಮನಗೂಳಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಾವೇಶಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಮಿಸುವರು. ಆದ್ದರಿಂದ ಜಿಲ್ಲೆಯ ಪಕ್ಷದ ಕಾರ್ಯಕರ್ತರು, ಮುಖಂಡರು, ಹಾಲಿ ಮತ್ತು ಮಾಜಿ ಜನಪ್ರತಿನಿಧಿಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ಜೆಡಿಎಸ್‌ ಯುವ ಮುಖಂಡ ಅಶೋಕ ಮನಗೂಳಿ ಮಾತನಾಡಿದರು. ಮಾಜಿ ಶಾಸಕ ಕೊನರೆಡ್ಡಿ, ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಸೋಮನಗೌಡ ಬಿರಾದಾರ, ಸಲೀಮ ಜುಮನಾಳ, ಜೆಡಿಎಸ್‌ ತಾಲೂಕು ವಕ್ತಾರ ಸಿದ್ದಣ್ಣ ಚೌಧರಿ ಕನ್ನೊಳ್ಳಿ, ಎಸ್‌ಸಿಎಸ್‌ಟಿ ಘಟಕದ ತಾಲೂಕಾಧ್ಯಕ್ಷ ಪರಶುರಾಮ ಕಾಂಬಳೆ, ಶಿವು ಕೋಟಾರಗಸ್ತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next