Advertisement
ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ನಿರ್ದೇಶಕ ರಾಜೀವ್ ಶುಕ್ಲ ಅವರ ಕಾರ್ಯದರ್ಶಿ ಮೊಹಮ್ಮದ್ ಅಕ್ರಮ್ ಸೈಫಿ ಅವರು ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲು ಹಲವು ಬೇಡಿಕೆಯಿಟ್ಟಿದ್ದಾರೆ. ಹಣ ಮತ್ತು ಸ್ತ್ರೀಯರನ್ನು ಪೂರೈಸಿದರೆ ಆಯ್ಕೆ ಖಚಿತವೆಂದಿದ್ದಾರೆಂದು ಹಿಂದಿ ಟೀವಿ ವಾಹಿನಿಯೊಂದು ತನ್ನ ರಹಸ್ಯ ಕಾರ್ಯಾಚರಣೆಯಲ್ಲಿ ಬಹಿರಂಗಪಡಿಸಿದೆ. ಇದು ಸಂಚಲನ ಸೃಷ್ಟಿಸಿದ್ದು, ಅಕ್ರಮ್ ಸೈಫಿಯನ್ನು ಅಮಾನತು ಮಾಡಿ ಬಿಸಿಸಿಐ ತನಿಖೆಗೆ ಆದೇಶಿಸಿದೆ.
ದ್ದಾರೆನ್ನಲಾದ ದೂರವಾಣಿ ಸಂಭಾಷಣೆಯನ್ನು ಬಹಿರಂಗಪಡಿ ಸಿತ್ತು. ಈ ಸಂಭಾಷಣೆ ಬುಧವಾರ ಪ್ರಸಾರವಾಗಿತ್ತು. ಸಂಭಾಷಣೆಯಲ್ಲಿ ಹಲವು ಸ್ಫೋಟಕ ಸಂಗತಿಗಳಿವೆ. ಒಂದು ವೇಳೆ ಇವು ಸಾಬೀತಾದರೆ ಭಾರತೀಯ ಕ್ರಿಕೆಟ್‌ನಲ್ಲಿ ಇನ್ನಷ್ಟು ದೊಡ್ಡ ತಲೆಗಳು ಉರುಳುವುದು ಖಚಿತವೆನ್ನಲಾಗಿದೆ. ಸಂಭಾಷಣೆಯಲ್ಲೇನಿದೆ?
ಸಂಭಾಷಣೆಯಲ್ಲಿ ರಾಹುಲ್ ಶರ್ಮರನ್ನು ಸದ್ಯ ದಲ್ಲೇ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ಸೈಫಿ ನೀಡಿದ್ದಾರೆ. ಆದರೆ ಅದಕ್ಕಾಗಿ ಹೊಸದಿಲ್ಲಿ ಹೊಟೇಲ್‌ಗೆ ಸ್ತ್ರೀಯೊಬ್ಬಳ್ಳನ್ನು ಕಳುಹಿಸಬೇಕು ಎಂಬ ಬೇಡಿಕೆಯಿಟ್ಟಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಲು ಧ್ವನಿಮುದ್ರಣವನ್ನು ನೀಡುವಂತೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹದಳದ ಮುಖ್ಯಸ್ಥ ಅಜಿತ್ ಸಿಂಗ್ ಹಿಂದಿ ವಾಹಿನಿಗೆ ಮನವಿ ಮಾಡಿದ್ದಾರೆ.
Related Articles
Advertisement
ಸೈಫಿಗೂ ನಮಗೂ ಸಂಬಂಧವಿಲ್ಲಇದೇ ವೇಳೆ ತನಗೂ ಸೈಫಿಗೂ ಸಂಬಂಧವಿಲ್ಲ ಎಂದು ಬಿಸಿಸಿಐ ತಿಳಿಸಿದೆ. ತಮಗೆ ಬೇಕಾಗಿರುವ ಕಾರ್ಯದರ್ಶಿಯನ್ನು ಆಯ್ಕೆ ಮಾಡಿಕೊಳ್ಳುವುದು ನಿರ್ದಿಷ್ಟ ವ್ಯಕ್ತಿಗಳಿಗೆ ಸಂಬಂಧಪಟ್ಟಿದ್ದು. ಆದರೆ ಆ ಕಾರ್ಯದರ್ಶಿಗಳ ಸಂಬಳವನ್ನು ಬಿಸಿಸಿಐ ಪಾವತಿಸುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಘಟನೆಗೆ ಸಂಬಂಧಪಟ್ಟಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ಉತ್ತರಪ್ರದೇಶ ಮಾಜಿ ನಾಯಕ ಮೊಹಮ್ಮದ್ ಕೈಫ್ ಆಘಾತ ವ್ಯಕ್ತಪಡಿಸಿದ್ದಾರೆ. ಯುವ ಆಟಗಾರರನ್ನು ಭ್ರಷ್ಟಾಚಾರಿಗಳು ತುಳಿಯುತ್ತಿದ್ದಾರೆ. ರಾಜೀವ್ ಶುಕ್ಲ ಅವರು ಈ ಪ್ರಕರಣದಲ್ಲಿ ಮುಕ್ತ ತನಿಖೆ ನಡೆಸುತ್ತಾರೆ. ಯುವ ಪ್ರತಿಭೆಗಳಿಗೆ ನ್ಯಾಯ ಒದಗಿಸುತ್ತಾರೆಂಬ ಭರವಸೆಯಿದೆ ಎಂದಿದ್ದಾರೆ. ಯಾರು ಈ ರಾಹುಲ್ ಶರ್ಮ?
ರಾಹುಲ್ ಶರ್ಮ ಉತ್ತರಪ್ರದೇಶದ ಕ್ರಿಕೆಟಿಗ. ಅವರಿನ್ನೂ ಉತ್ತರಪ್ರದೇಶವನ್ನೇ ರಣಜಿಯಲ್ಲಿ ಪ್ರತಿನಿಧಿಸಿಲ್ಲ. ಆದ್ದರಿಂದ ಅವರ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಅವರು ಸೈಫಿ ವಿರುದ್ಧ ಹಲವು ಆರೋಪ ಮಾಡಿದ್ದಾರೆ. ಸೈಫಿ ಲಂಚ ಕೇಳಿದ್ದಾರೆ, ತಂಡದಲ್ಲಿ ಆಯ್ಕೆ ಮಾಡಿಕೊಳ್ಳಲು ಇನ್ನಿತರ ಆಮಿಷಗಳನ್ನೂ ಒಡ್ಡಿದ್ದಾರೆ. ಅವರು ನಕಲಿ ವಯೋಮಿತಿ ಪ್ರಮಾಣಪತ್ರ ನೀಡುತ್ತಾರೆಂದು ರಾಹುಲ್ ಆರೋಪಿಸಿದ್ದಾರೆ. ವಿಚಾರಣಾಧಿಕಾರಿ ನೇಮಕ
ಇನ್ನೆರಡು ದಿನದೊಳಗೆ ವಿಚಾರಣಾಧಿಕಾರಿ ನೇಮಕ ಮಾಡಲಾಗುತ್ತದೆ. ಅವರು 15 ದಿನದೊಳಗೆ ಈ ಬಗ್ಗೆ ವರದಿ ಸಲ್ಲಿಸಬೇಕು. ಇದರ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಅಲ್ಲಿಯವರೆಗೆ ಸೈಫಿ ಅಮಾನತಿನಲ್ಲಿರುತ್ತಾರೆಂದು ಬಿಸಿಸಿಐ ತಿಳಿಸಿದೆ.