ಮುಂಬೈ: ಭಾರತದ ಹೀನಾಯ ಟೆಸ್ಟ್ ಸರಣಿ ಸೋಲಿನಿಂದ ಕೋಚ್ ಗೌತಮ್ ಗಂಭೀರ್ (Gautam Gambhir) ಸಾಮರ್ಥ್ಯದ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಅವರ ಮೇಲೆ ಬಿಸಿಸಿಐ (BCCI) ನಿಗಾ ಇಟ್ಟಿದೆ ಎಂದು ಮೂಲಗಳು ಹೇಳಿವೆ.
ಬಾಂಗ್ಲಾ ವಿರುದ್ಧ ಭಾರತ ಅದ್ಭುತ ಗೆಲುವು ಸಾಧಿಸಿದ್ದರೂ, ಶ್ರೀಲಂಕಾದಲ್ಲಿ 27 ವರ್ಷಗಳ ಬಳಿಕ ಭಾರತ ಏಕದಿನ ಸರಣಿ ಸೋಲನುಭವಿಸಿದ್ದು, ನ್ಯೂಜಿಲ್ಯಾಂಡ್ ಈಗಿನ ಸೋಲಿನ ಬಗ್ಗೆ ತೆರೆಮರೆಯ ಚರ್ಚೆಗಳು ಶುರುವಾಗಿವೆ. ಅವರು ಹಿಂದೆ ಇದ್ದಂತಹ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಮೂರು ತಿಂಗಳ ಹಿಂದೆ ಭಾರೀ ಹೈಪ್ ನೊಂದಿಗೆ ಟೀಂ ಇಂಡಿಯಾ ಪ್ರಮುಖ ಕೋಚ್ ಹುದ್ದೇಗಿರಿದ್ದ ಗೌತಮ್ ಗಂಭೀರ್ ತಮ್ಮ ಸಹಾಯಕರ ಸ್ಥಾನಕ್ಕೆ ತಮಗೆ ಬೇಕಾದವರನ್ನೇ ಆಯ್ಕೆ ಮಾಡಿದ್ದರು. ಆಟಗಾರರ ಆಯ್ಕೆ ವಿಷಯಗಳಲ್ಲಿ ಮುಕ್ತ ಅವಕಾಶ ಪಡೆದಿದ್ದ ಗಂಭೀರ್, ಮುಂಬರುವ ದಿನಗಳಲ್ಲಿ ತಂಡಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಹೆಚ್ಚು ಮಾತನಾಡಲು ಅವಕಾಶ ಸಿಗದು ಎನ್ನಲಾಗಿದೆ.
“ಗೌತಮ್ ಗಂಭೀರ್ ಅವರಿಗೆ ಅವರ ಹಿಂದಿನ ರವಿಶಾಸ್ತ್ರಿ ಮತ್ತು ರಾಹುಲ್ ದ್ರಾವಿಡ್ ಇಲ್ಲದ ಮುಕ್ತತೆಯನ್ನು ನೀಡಲಾಯಿತು. ಬಿಸಿಸಿಐ ನಿಯಮದಲ್ಲಿ ತರಬೇತುದಾರರನ್ನು ಆಯ್ಕೆ ಸಮಿತಿ ಸಭೆಗಳಲ್ಲಿ ಭಾಗವಹಿಸಲು ಅನುಮತಿಸುವುದಿಲ್ಲ, ಆದರೆ ಆಸ್ಟ್ರೇಲಿಯಾ ಪ್ರವಾಸದ ಆಯ್ಕೆ ಸಭೆಗೆ ವಿನಾಯಿತಿ ನೀಡಲಾಗಿದೆ. ಟೂರ್ ನ ಪ್ರಾಮುಖ್ಯತೆಯನ್ನು ಅರಿತು ಗಂಭೀರ್ ಗೆ ಅವಕಾಶ ನೀಡಲಾಗಿತ್ತು” ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಬಾರ್ಡರ್ ಗಾವಸ್ಕರ್ ಟ್ರೋಫಿಗೆ ಆಯ್ಕೆಯಾದ ಕೆಕೆಆರ್ ಆಟಗಾರ ಹರ್ಷಿತ್ ರಾಣಾ ಮತ್ತು ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರು ಗಂಭೀರ್ ಆಯ್ಕೆಯಾಗಿತ್ತು.
ಆಸ್ಟ್ರೇಲಿಯಾ ಸರಣಿಯು ಗಂಭೀರ್ ಗೆ ಅಗ್ನಿಪರೀಕ್ಷೆಯಾಗಲಿದೆ. ಈ ಸರಣಿ ಕೆಲವು ಹಿರಿಯ ಆಟಗಾರರಿಗೆ ವಿದಾಯದ ಮುನ್ನುಡಿಯಾಗಬಹುದು. ಕಿವೀಸ್ ವಿರುದ್ದದ ವೈಟ್ ವಾಶ್ ಗಂಭೀರ್ ಅವರ ಬುಡ ಅಲ್ಲಾಡುವಂತೆ ಮಾಡಿದೆ.