Advertisement

ಸಚಿನ್‌ 10ನೇ ಸಂಖ್ಯೆ ಜೆರ್ಸಿಗೆ ವಿದಾಯ!

06:45 AM Nov 30, 2017 | Team Udayavani |

ಮುಂಬೈ: ಭಾರತ ಕ್ರಿಕೆಟ್‌ನ ದೇವರೆಂದು ಕರೆಸಿಕೊಂಡಿರುವ ಸಚಿನ್‌ ತೆಂಡುಲ್ಕರ್‌ 10ನೇ ಸಂಖ್ಯೆಯ ಜೆರ್ಸಿ ಧರಿಸಿ ಆಡುತ್ತಿದ್ದರೆನ್ನುವುದು ಕ್ರಿಕೆಟ್‌ ಅಭಿಮಾನಿಗಳಿಗೆ ಚಿರಪರಿಚಿತ ಸಂಗತಿ. 2013ರಲ್ಲಿ ತೆಂಡುಲ್ಕರ್‌ ನಿವೃತ್ತಿಯಾದಾಗ ಆ ಸಂಖ್ಯೆಯ ಜೆರ್ಸಿಯನ್ನು ಭಾರತೀಯ ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಗೌರವ ಸೂಚಕವಾಗಿ ಇಡಲಾಗಿತ್ತು. ಇದೀಗ 10ನೇ ಸಂಖ್ಯೆಯ ಜೆರ್ಸಿಗೆ ಅಧಿಕೃತವಾಗಿ ವಿದಾಯ ಹೇಳಿದ ಪರಿಸ್ಥಿತಿ ಏರ್ಪಟ್ಟಿದೆ. ಕಾರಣ ಸಚಿನ್‌ ಗೌರವಾರ್ಥ ಯಾವುದೇ ಕ್ರಿಕೆಟಿಗ ಅದನ್ನು ಬಳಸಲು ಒಪ್ಪುತ್ತಿಲ್ಲ.

Advertisement

ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ನಿಯಮಗಳ ಪ್ರಕಾರ ಯಾವುದೇ ಸಂಖ್ಯೆಯ ಜೆರ್ಸಿಗೆ ಅಧಿಕೃತವಾಗಿ ವಿದಾಯ ಹೇಳುವುದು ಅಸಾಧ್ಯ. ಆದರೆ ಭಾರತೀಯ ಆಟಗಾರರು ಅದನ್ನು ಬಳಸಲು ಮುಂದಾಗದಿರುವುದು ಅನಧಿಕೃತ ನಿವೃತ್ತಿಯ ವಾತಾವರಣ ಸೃಷ್ಟಿಸಿದೆ. ಅದೂ ಅಲ್ಲದೇ ಸಚಿನ್‌ ತೆಂಡುಲ್ಕರ್‌ ಅವರ 10ನೇ ಸಂಖ್ಯೆಯ ಜೆರ್ಸಿಯನ್ನು ಬೇರಾವುದೇ ಆಟಗಾರ ಧರಿಸುವುದನ್ನು ಅಭಿಮಾನಿಗಳು ಕೂಡ ಸಹಿಸುವುದಿಲ್ಲ.

ಇತ್ತೀಚೆಗೆ ಭಾರತ ಕ್ರಿಕೆಟ್‌ ತಂಡದ ಶ್ರೀಲಂಕಾ ಪ್ರವಾಸದ ವೇಳೆ ಮುಂಬೈ ಮೂಲದ ವೇಗದ ಬೌಲರ್‌ ಶಾದೂìಲ್‌ ಠಾಕೂರ್‌ ಈ ಸಂಖ್ಯೆಯ ಜೆರ್ಸಿಯನ್ನು ಧರಿಸಿದ್ದರು. ಅದನ್ನು ಖಡಕ್ಕಾಗಿ ವಿರೋಧಿಸಿದ್ದರಿಂದ ಶಾದೂìಲ್‌ ಅದರ ಸಹವಾಸವೇ ಬೇಡವೆಂದು ಬಿಟ್ಟುಬಿಟ್ಟರು. 10ನೇ ಸಂಖ್ಯೆ ಬಳಸುವುದಕ್ಕೆ ಅವಕಾಶ ನೀಡಿದ್ದರೂ ಆಟಗಾರರೇ ಹಿಂಜರಿಯುತ್ತಿರುವುದು ಬಿಸಿಸಿಐಗೂ ಇಕ್ಕಟ್ಟು ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next