ಮುಂಬೈ: ಆ.6 ರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ; ಕಾಶ್ಮೀರ ಪ್ರೀಮಿಯರ್ ಲೀಗ್ ಕ್ರಿಕೆಟ್ ನಡೆಯಲಿದೆ. ಈ ಕೂಟದಲ್ಲಿ ಜಗತ್ತಿನ ಬೇರೆ ಯಾವುದೇ ದೇಶಗಳ ಕ್ರಿಕೆಟಿಗರು ಪಾಲ್ಗೊಳ್ಳಬಾರದೆಂದು ಬಿಸಿಸಿಐ ಅನೌಪಚಾರಿಕವಾಗಿ ಎಚ್ಚರಿಕೆ ನೀಡಿದೆಯೆಂದು ವರದಿಗಳು ಹೇಳಿವೆ.
ಒಂದು ವೇಳೆ ಪಾಲ್ಗೊಂಡರೆ ಅಂತಹ ಆಟಗಾರರು, ಕ್ರಿಕೆಟ್ ಮಂಡಳಿಗಳು ಭಾರತದಲ್ಲಿ ನಡೆಯುವ ಯಾವುದೇಕ್ರಿಕೆಟ್ ಸಂಬಂಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದಿಲ್ಲ. ಅಲ್ಲದೇ ಮಂಡಳಿಗಳೊಂದಿಗಿನ ವಾಣಿಜ್ಯಾತ್ಮಕ ಪಾಲುದಾರಿಕೆಯನ್ನು ಕಡಿದುಕೊಳ್ಳಲಾಗುವುದು ಬಿಸಿಸಿಐ ಹೇಳಿದೆ.
ಇದನ್ನೂ ಓದಿ:ಕ್ವಾರ್ಟರ್: ಇಂದು ವನಿತೆಯರಿಗೆ ಆಸೀಸ್ ಸವಾಲು
ಆದರೆ ಖಚಿತವಾಗಿ ಏನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಸಿಸಿಐ ಹೇಳಿಲ್ಲ. ಒಂದು ವೇಳೆ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯುವಾಗಲೂ, ಬಿಸಿಸಿಐ ತನ್ನ ನಿರ್ಬಂಧ ಮುಂದುವರಿಸಲಿದೆಯಾ? ಇದು ಐಪಿಎಲ್ ಮತ್ತು ಇತರೆ ವಾಣಿಜ್ಯ ಸಂಬಂಧಿ ಚಟುವಟಿಕೆಗಳಿಗೆ ಮಾತ್ರ ಸೀಮಿತವೇ ಎನ್ನುವುದೂ ಗೊತ್ತಾಗಿಲ್ಲ.
“ಅದು ಪಾಕ್ ಆಕ್ರಮಿತಕಾಶ್ಮೀರ. ಅಲ್ಲಿ ಕ್ರಿಕೆಟ್ ಕೂಟ ನಡೆಸುವುದು ಭಾರತದ ಹಿತಾಸಕ್ತಿಗೆ ವಿರುದ್ಧ. ಅಲ್ಲಿ ಇತರೆ ದೇಶಗಳ ಆಟಗಾರರು ಪಾಲ್ಗೊಳ್ಳಬಾರದು. ಆದರೆ ಪಾಕ್ ಸೂಪರ್ ಲೀಗ್‌ನಲ್ಲಿ ಆಡುವುದಕ್ಕೆ ತಮ್ಮ ಆಕ್ಷೇಪವಿಲ್ಲವೆಂದೂ’ ಬಿಸಿಸಿಐ ಸ್ಪಷ್ಟಪಡಿಸಿದೆ ಎನ್ನಲಾಗಿದೆ.