Advertisement
ಆಶ್ಲೇಷಾ ಬಲಿ ಪ್ರಸಾದ ಸ್ವೀಕರಿಸಿದ ಅವರಿಗೆ ಅರ್ಚಕ ಸತ್ಯನಾರಾಯಣ ನೂರಿತ್ತಾಯ ಅವರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದ ಅವರು ಪೂಜೆ ಸಲ್ಲಿಸಿದರು. ಶಾ ಕುಟುಂಬಸ್ಥರು ಪ್ರಸಾದ ಭೋಜನ ಸ್ವೀಕರಿಸಿದರು. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಹೆಸರಿನಲ್ಲಿ ನಿತ್ಯ ಅನ್ನ ದಾಸೋಹಕ್ಕೆ ದೇಣಿಗೆ ನೀಡಿದರು.
ದೇಗುಲದ ಆಡಳಿತ ಕಚೇರಿಗೆ ಭೇಟಿ ನೀಡಿದ ಜಯ್ ಶಾ ಅವರಿಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರು ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪ ಲತಾ ರಾವ್, ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶೋಭಾ ಗಿರಿಧರ್, ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್., ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ದರುಶನದಿಂದ ಅತೀವ ಸಂತಸ
ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆಗೆ ಬಂದು ಶ್ರೀ ದೇವರ ದರುಶನ ಪಡೆದುದು ಅತೀವ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಆಗಮಿಸುವ ಕನಸಿದೆ. ಅದನ್ನು ದೇವರು ನೆರವೇರಿಸುವ ನಂಬಿಕೆಯಿದೆ ಎಂದವರು ಹೇಳಿದರು.