Advertisement

ಐಸಿಸಿಗೆ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಸಡ್ಡು?

10:11 AM Dec 25, 2019 | Team Udayavani |

ಲಂಡನ್‌: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ)ಗೆ ಸಡ್ಡು ಹೊಡೆಯುವ ಕ್ರಮವೆಂದು ಹೇಳಲಾಗಿರುವ ನಡೆಯೊಂದನ್ನು ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಇಟ್ಟಿದ್ದಾರೆ. ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯ ಹಾಗೂ ಇನ್ನೊಂದು ದೇಶವಿರುವ ಚತುಷೊRàಣ ಸರಣಿಯನ್ನು ಪ್ರತಿ ವರ್ಷ ನಡೆಸಲು ಅವರು ಮಾತುಕತೆ ನಡೆಸಿದ್ದಾರೆ. ಇದಕ್ಕೆ ಇಂಗ್ಲೆಂಡ್‌ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಆಸ್ಟ್ರೇಲಿಯ ಇನ್ನೂ ಯಾವುದೇ ಬಹಿರಂಗ ಅಭಿಪ್ರಾಯ ನೀಡಿಲ್ಲ.

Advertisement

ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್‌ ಮಂಡಳಿಯೊಂದಿಗೆ ಗಂಗೂಲಿ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ಐಸಿಸಿಯ ಇತರ ಸದಸ್ಯ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಇಂಗ್ಲೆಂಡ್‌ ಹೇಳಿದೆ.

ಯಾಕೆ ಈ ಕೂಟ?
ಪ್ರತಿ ಬಾರಿ ಐಸಿಸಿ 8 ವರ್ಷಗಳ ಕ್ರಿಕೆಟ್‌ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಈ ಪ್ರಕಾರ ಮುಂದಿನ 8 ವರ್ಷಗಳ ಸರಣಿಯಲ್ಲಿ, ಪ್ರತೀ ವರ್ಷಕ್ಕೊಂದು ವಿಶ್ವಕೂಟ ನಡೆಸಲು ಅದು ತೀರ್ಮಾನಿಸಿದೆ. ಇದಕ್ಕೆ ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌ಗಳು ವಿರೋಧ ವ್ಯಕ್ತಪಡಿಸಿವೆ. ಹೀಗಾದರೆ ವಿಶ್ವಕಪ್‌ನಂತಹ ಕೂಟಗಳು ಮಹತ್ವ ಕಳೆದುಕೊಳ್ಳುತ್ತವೆ ಎನ್ನುವುದು ಅವುಗಳ ಆತಂಕ. ಅಷ್ಟಲ್ಲದೇ ಕ್ರಿಕೆಟ್‌ ಕೂಡ ಅತಿಯಾಗುತ್ತದೆ ಎಂಬ ಚಿಂತೆ ವ್ಯಕ್ತಪಡಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next