Advertisement

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

12:25 PM Jun 30, 2024 | Team Udayavani |

ಬಾರ್ಬಡೋಸ್: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಕೆನ್ನಿಂಗ್ಸ್ಟನ್ ಓವಲ್ ನಲ್ಲಿ ಟಿ20 ವಿಶ್ವಕಪ್ ಗೆದ್ದು ಬೀಗಿದೆ. ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಿದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರು ತಂಡಕ್ಕೆ ಅಭಿನಂದನೆ ಸಲ್ಲಿಸಿದರು. ಇದೇ ವೇಳೆ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಭಾರತದ ಕೋಚ್ ಪಾತ್ರವನ್ನು ವಹಿಸಿದರೆ ಅದು ಭಾರತೀಯ ಕ್ರಿಕೆಟ್ ತಂಡಕ್ಕೆ ಒಳ್ಳೆಯದು ಎಂದು ಹೇಳಿದರು.

Advertisement

ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಈಗ ಮಾಜಿ ಆಗಿದ್ದಾರೆ. 2021ರಲ್ಲಿ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ಸ್ವೀಕರಿಸಿದ್ದ ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ 2023ರ ಏಕದಿನ ವಿಶ್ವಕಪ್ ವರೆಗೆ ಇತ್ತು. ಆದರೆ ಟಿ20 ವಿಶ್ವಕಪ್ ವರೆಗೆ ಅವರ ಅಧಿಕಾರವಧಿಯನ್ನು ಮುಂದುವರಿಸಲಾಗಿತ್ತು. ಇದೀಗ ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ದ್ರಾವಿಡ್ ಅವರ ಉತ್ತರಾಧಿಕಾರಿಯನ್ನು ನೇಮಿಸಬೇಕಿದೆ.

ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಟೀಂ ಇಂಡಿಯಾದ ಮುಂದಿನ ಕೋಚ್ ಆಗಲಿದ್ದಾರೆ ಎನ್ನಲಾಗಿದೆ. ಐಪಿಎಲ್ 2024ರಲ್ಲಿ ಚಾಂಪಿಯನ್ ಆಗಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದ ಗಂಭೀರ್ ಇತ್ತೀಚೆಗೆ ಬಿಸಿಸಿಐ ಸಂದರ್ಶನಕ್ಕೂ ಹಾಜರಾಗಿದ್ದರು.

ಭಾರತಕ್ಕೆ ಎಲ್ಲಾ ಮಾದರಿಯ ಕ್ರಿಕೆಟ್‌ ನಲ್ಲಿ ಆಡಿದ ಅನುಭವ ಇರುವವರು ಮುಖ್ಯ ಕೋಚ್ ಆಗಿ ಅಗತ್ಯವಿದೆ ಎಂದು ಬಿನ್ನಿ ಹೇಳಿದ್ದಾರೆ.

“ಗೌತಮ್ ಗಂಭೀರ್ ಅವರು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಅವರು ಈ ಕೆಲಸವನ್ನು ತೆಗೆದುಕೊಂಡರೆ ಅದು ಖಂಡಿತವಾಗಿಯೂ ಭಾರತೀಯ ಕ್ರಿಕೆಟ್‌ ಗೆ ಒಳ್ಳೆಯದು. ಅವರು ಅನುಭವ ಭಾರತಕ್ಕೆ ಬೇಕಾಗಿದೆ. ಭಾರತಕ್ಕೆ ಆಟದ ಮೂರು ಸ್ವರೂಪಗಳನ್ನು ಆಟವನ್ನು ಆಡಿದ ತರಬೇತುದಾರರ ಅಗತ್ಯವಿದೆ ಮತ್ತು ಅವರು ಎಲ್ಲದರಲ್ಲೂ ಆಡಿದ್ದಾರೆ” ಎಂದು ಬಿನ್ನಿ ಎಎನ್‌ಐಗೆ ತಿಳಿಸಿದರು.

Advertisement

ವಿಶ್ವಕಪ್ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಚುಟುಕು ಮಾದರಿ ಕ್ರಿಕೆಟ್ ಗೆ ವಿದಾಯ ಹೇಳಿದರು. ಈ ಬಗ್ಗೆ ಮಾತನಾಡಿದ ರೋಜರ್ ಬಿನ್ನಿ, ಇಂತಹ ಆಟಗಾರನ್ನು ಬದಲಾಯಿಸುವುದು ಕಷ್ಟ. ಆದರೆ ಯುವ ಆಟಗಾರರು ಜಾಗ ತುಂಬುವ ವಿಶ್ವಾಸವಿದೆ ಎಂದರು.

“ಅವರು ಅದ್ಭುತ ಆಟಗಾರರು, ಕೂಡಲೇ ಅವರನ್ನು ರಿಪ್ಲೇಸ್ ಮಾಡುವುದು ಕಷ್ಟ. ಈ ಕ್ಷಣದಲ್ಲಿ ಅವರನ್ನು ಕಳೆದುಕೊಂಡಿದ್ದು ದೊಡ್ಡ ನಷ್ಟ. ಆದರೆ ನಮಗೆ ಯುವ ಆಟಗಾರರು ಸಿಗುವ ವಿಶ್ವಾಸವಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next