Advertisement

ದೇಶೀಯ ಕ್ರಿಕೆಟ್‌ ನಡೆಸುವುದೋ? ಹಣ ನೀಡಿ ಸುಮ್ಮನಾಗುವುದೋ?

07:39 AM Dec 03, 2020 | keerthan |

ಮುಂಬೈ: ಹಣದ ಹೊಳೆಯನ್ನೇ ಹರಿಸುವ ಐಪಿಎಲ್‌ ಅನ್ನು ಯಶಸ್ವಿಯಾಗಿ ಮುಗಿಸಿರುವ ಸಂಭ್ರಮದಲ್ಲಿ ಬಿಸಿಸಿಐಯಿದೆ. ಇದರ ಮಧ್ಯೆ ದೇಶೀಯ ಕ್ರಿಕೆಟ್‌ ನಡೆಸುತ್ತೀರೋ ಇಲ್ಲವೋ ಎಂಬ ಪ್ರಶ್ನೆಗಳ ಸುರಿಮಳೆ ಶುರುವಾಗಿದೆ.

Advertisement

ಸದ್ಯ ಬಿಸಿಸಿಐ, ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಿದೆ. ರಾಜ್ಯಗಳ ಅಭಿಪ್ರಾಯ ನೋಡಿ ಅಂತಿಮ ತೀರ್ಮಾನ ಮಾಡಲಾಗುತ್ತದೆ. ಇನ್ನೊಂದು ಕಡೆ ಬಿಸಿಸಿಐ ಒಂದು ಇಬ್ಬಂದಿಯಲ್ಲಿ ಸಿಕ್ಕಿಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ದೇಶೀಯ ಕ್ರಿಕೆಟನ್ನು ನಡೆಸುವುದೋ ಅಥವಾ ಆಟಗಾರರಿಗೆ ನೀಡಬೇಕಾದ ಹಣ ನೀಡಿ ಸುಮ್ಮನಾಗುವುದೋ ಎನ್ನುವುದು ಇಲ್ಲಿನ ಪ್ರಶ್ನೆ.

ಒಂದು ವೇಳೆ ರಣಜಿ ಕೂಟ ನಡೆಯದಿದ್ದರೂ ಆಟಗಾರರಿಗೆ ಹಣವನ್ನಂತೂ ನೀಡಲೇಬೇಕು. ಆದರೆ ಕೂಟ ನಡೆಸಿಯೇ ಹಣ ನೀಡುವುದು ಹೇಳಿದಷ್ಟು ಸುಲಭವಿಲ್ಲ. ಕಾರಣ 38 ದೇಶೀಯ ತಂಡಗಳಿರುವುದು. ಐಪಿಎಲ್‌ ನಲ್ಲಿರುವ 8 ತಂಡಗಳಿಗೆ ಜೈವಿಕ ಸುರಕ್ಷಾ ವಲಯ ಸೃಷ್ಟಿಸಬಹುದು. 38 ತಂಡಗಳಿಗೆ ಆ ವ್ಯವಸ್ಥೆ ಮಾಡುವುದು ದುಸ್ವಪ್ನವೇ ಸರಿಯೆಂದು ಮೂಲಗಳು ಹೇಳಿವೆ. ಒಂದು ವೇಳೆ ಸವಾಲು ತೆಗೆದುಕೊಂಡು ಕೂಟ ನಡೆಸಿದರೂ, ಯಾರಿಗಾದರೂ ಅಪಾಯವಾದರೆ ಏನು ಗತಿ?

ಬಿಸಿಸಿಐ ರಣಜಿ ನಡೆಸದಿದ್ದರೆ, ಅದು ಹಣದ ಹಿಂದೆ ಬಿದ್ದಿದೆ ಎಂಬ ಆರೋಪ ಬರುತ್ತದೆ. ಹಾಗಂತ ಆಟಗಾರರನ್ನು ಅಪಾಯಕ್ಕೆ ತಳ್ಳುವುದು ಸರಿಯಲ್ಲ ಎನ್ನುವುದು ಇಲ್ಲಿನ ವಾದ.

Advertisement

Udayavani is now on Telegram. Click here to join our channel and stay updated with the latest news.

Next