Advertisement

ಆಟಗಾರರ ಬಾಕಿ ಪಾವತಿಸಿದ ಬಿಸಿಸಿಐ

09:14 AM Apr 12, 2020 | Sriram |

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಜತೆ ವಾರ್ಷಿಕ ಒಪ್ಪಂದ ಮಾಡಿ ಕೊಂಡಿರುವ ಆಟಗಾರರ ತ್ತೈಮಾಸಿಕ ಪಾವತಿಯನ್ನು ಮಾಡಿದೆ. ಕೋವಿಡ್‌ 19 ಸೃಷ್ಟಿಸಿದ ಅನಿಶ್ಚಿತತೆಯ ನಡುವೆ ಆಟಗಾರರು ಆರ್ಥಿಕ ಸಂಕಷ್ಟ ಅನುಭವಿಸ ಬಾರದು ಎನ್ನುವುದು ತನ್ನ ಉದ್ದೇಶ ಎಂದು ತಿಳಿಸಿದೆ.

Advertisement

ಜಗತ್ತಿನಾದ್ಯಂತ 90 ಸಾವಿರಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದ ಕೋವಿಡ್ 19 ಮಹಾಮಾರಿ, ವಿಶ್ವದ ಆರ್ಥಿಕತೆಗೂ ಬಹುದೊಡ್ಡ ಹೊಡೆತ ನೀಡಿದೆ.

ಮಾರ್ಚ್‌ 24ರಿಂದ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದೆ. ಬಿಸಿಸಿಐ ಎಲ್ಲ ಬಗೆಯ ಸನ್ನಿವೇಶಗಳಿಗೂ ಸನ್ನದ್ಧವಾಗಿದೆ. ಇದರ ಭಾಗವಾಗಿ ವಾರ್ಷಿಕ ಗುತ್ತಿಗೆ ಒಪ್ಪಂದಕ್ಕೆ ಸಹಿ ಮಾಡಿರುವ ಆಟಗಾರರಿಗೆ ತ್ತೈಮಾಸಿಕ ಮೊತ್ತವನ್ನು ಪಾವತಿಸಿದೆ. ಭಾರತ ಹಾಗೂ “ಎ’ ತಂಡಗಳ ಪರವಾಗಿ ಆಡಿದ ಎಲ್ಲ ಆಟಗಾರರಿಗೂ ಪಂದ್ಯ ಶುಲ್ಕ ಹಾಗೂ ಇತರ ಭತ್ಯೆಗಳನ್ನು ಪಾವತಿಸಲಾಗಿದೆ. ಆರ್ಥಿಕ ವರ್ಷದ ಅಂತ್ಯವಾದ ಮಾರ್ಚ್‌ 31ಕ್ಕೆ ಅನುಸಾರವಾಗಿ ಆಟಗಾರರಿಗೆ ಸಲ್ಲಬೇಕಾಗಿದ್ದ ಹಣವನ್ನು ನೀಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯದಂತಹ ಪ್ರಮುಖ ಕ್ರಿಕೆಟ್‌ ಮಂಡಳಿಗಳು ಆಟಗಾರರು ವೇತನ ಕಡಿತಕ್ಕೆ ಸಿದ್ಧರಾಗ ಬೇಕಾದೀತು ಎನ್ನುವ ಮುನ್ಸೂಚನೆ ನೀಡಿವೆ. ಇದನ್ನು ತಾವೂ ನಿರೀಕ್ಷಿಸಿದ್ದಾಗಿ ಆಟಗಾರರೂ ತಿಳಿಸಿದ್ದಾರೆ. ಬ್ರಿಟನ್‌ ಸರಕಾರವು ಶೇ. 20ರಷ್ಟು ವೇತನ ಕಡಿತಕ್ಕೆ ಸಿದ್ಧವಾಗಿದೆ. ಅಂದರೆ, ಗರಿಷ್ಠ 2,500 ಪೌಂಡ್‌ ವೇತನ ಕಡಿತವನ್ನು ಅಲ್ಲಿನ ಆಟಗಾರರು ಅಂದಾಜಿಸಬಹುದಾಗಿದೆ.

ಐಪಿಎಲ್‌ ಅನಿವಾರ್ಯ
ಐಪಿಎಲ್‌ ನಡೆಯದಿದ್ದರೆ ಹಲವು ಪಾಲುದಾರರು ಸಾಕಷ್ಟು ನಷ್ಟ ಅನುಭವಿ ಸಲಿದ್ದಾರೆ. ಈ ನಿಟ್ಟಿನಲ್ಲಿ ಈ ವರ್ಷದ ದ್ವಿತೀಯಾರ್ಧದಲ್ಲಾದರೂ ಐಪಿಎಲ್‌ ನಡೆಸುವುದು ಅನಿವಾರ್ಯವಾಗಲಿದೆ ಎಂದೂ ಈ ಅಧಿಕಾರಿ ಒಪ್ಪಿಕೊಂಡಿದ್ದಾರೆ.
ಕೋವಿಡ್ 19 ಆತಂಕದಲ್ಲಿ ಯಾವುದೇ ಪಂದ್ಯಾವಳಿ ನಡೆಸುವ ಸ್ಥಿತಿ ಇಲ್ಲ. ಸಪ್ಟೆಂಬರ್‌ನಲ್ಲಿ ಏಷ್ಯ ಕಪ್‌ ಹಾಗೂ ಅಕ್ಟೋಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ತವರು ನೆಲದಲ್ಲಿ ಸರಣಿ ನಡೆಯಲಿದ್ದು, ವಿಶ್ವ ಟಿ20 ಪಂದ್ಯಾ ವಳಿಯೂ ಇದೇ ಅವಧಿಯಲ್ಲಿ ನಡೆಯುವ ನಿರೀಕ್ಷೆಯಿದೆ. ಎಲ್ಲವೂ ಯಾವಾಗ ಸಹಜ ಸ್ಥಿತಿಗೆ ಮರಳುತ್ತದೆ ಎನ್ನುವುದು ಗೊತ್ತಿಲ್ಲದಿರುವಾಗ ಐಪಿಎಲ್‌ನಂತಹ ಮಹತ್ವದ ಕೂಟ ಯಾವಾಗ ನಡೆಯುತ್ತದೆ ಎಂದು ಹೇಳುವುದು ಕಷ್ಟ ಎಂದು ಅವರು ತಿಳಿಸಿದ್ದಾರೆ.

Advertisement

ಇದರ ಜತೆಗೆ, ದೇಶೀಯ ಪಂದ್ಯಾವಳಿಗಳಿಗೂ ವೇಳಾಪಟ್ಟಿ ಸಿದ್ಧ ಪಡಿಸುವ ಸಮಸ್ಯೆಯನ್ನೂ ಬಿಸಿಸಿಐ ನಿಭಾಯಿಸಬೇಕಿದೆ. ಐಪಿಎಲ್‌ ನಡೆಯುವ ಅವಧಿಯಲ್ಲಿ ಯಾವುದೇ ದೇಶೀಯ ಕ್ರಿಕೆಟ್‌ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲು ನಿಯಮಗಳಲ್ಲಿ ಅವಕಾಶವಿಲ್ಲ. ಅಕ್ಟೋಬರ್‌ ಅಥವಾ ನವೆಂಬರ್‌ ತಿಂಗಳಲ್ಲಿ ಐಪಿಎಲ್‌ ನಡೆಯುವ ಸಾಧ್ಯತೆ ಇದ್ದರೆ ದೇಶೀಯ ಪಂದ್ಯಾವಳಿಗಳನ್ನು ಮುಂದಕ್ಕೆ ಹಾಕಲೇಬೇಕಾಗುತ್ತದೆ. ಸಾಮಾನ್ಯವಾಗಿ ಆಗಸ್ಟ್‌ ತಿಂಗಳಲ್ಲಿ ದೇಶೀಯ ಪಂದ್ಯಾ ವಳಿಗಳ ವೇಳಾಪಟ್ಟಿಯನ್ನು ಬಿಸಿಸಿಐ ಅಂತಿಮಗೊಳಿಸುತ್ತದೆ. ಈ ಬಾರಿ ಐಪಿಎಲ್‌ ಯಾವಾಗ ನಡೆಯಲಿದೆ ಎನ್ನುವುದನ್ನು ಆಧರಿಸಿ, ಮುಂದಿನ ಪಂದ್ಯಾವಳಿಗಳ ದಿನಾಂಕಗಳು ನಿಗದಿಯಾಗಲಿವೆ ಎಂಬ ಸುಳಿವನ್ನು ಬಿಸಿಸಿಐ ಅಧಿಕಾರಿ ನೀಡಿದ್ದಾರೆ.

ಸಮಸ್ಯೆಯಾಗಲು ಬಿಡುವುದಿಲ್ಲ
ಒಂದು ದೇಶದ ಕ್ರಿಕೆಟ್‌ ಮಂಡಳಿಯು ಆಟಗಾರರ ವೇತನ ಪಾವತಿಗಾಗಿ ಸರಕಾರ ದ ಸಹಾಯವನ್ನು ಎದುರು ನೋಡುತ್ತಿದೆ. ಎಲ್ಲ ಕಡೆಯಲ್ಲೂ ವೇತನ ಕಡಿತದ ಮಾತು ಗಳೇ ಕೇಳಿಬರುತ್ತಿವೆ. ಆದರೂ ಬಿಸಿಸಿಐ ತನ್ನ ಆಟಗಾರರ ಹಿತರಕ್ಷಣೆಗೆ ಮುಂದಾಗಿದೆ. ದೇಶದ ಯಾವುದೇ ಅಂತಾರಾಷ್ಟ್ರೀಯ ಹಾಗೂ ದೇಶೀಯ ಕ್ರಿಕೆಟಿಗನಿಗೂ ಸಮಸ್ಯೆಯಾಗಲು ಬಿಡುವುದಿಲ್ಲ ಎಂದು ಮಂಡಳಿ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next