Advertisement

2 ಹೆಚ್ಚುವರಿ ಟಿ20 ಅಥವಾ 1 ಟೆಸ್ಟ್‌: ಇಂಗ್ಲೆಂಡಿಗೆ ಬಿಸಿಸಿಐ ಆಫ‌ರ್‌

09:27 PM Sep 14, 2021 | Team Udayavani |

ನವದೆಹಲಿ: ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದಿಂದ ಭಾರತ ಹಿಂದೆ ಸರಿದ ಕಾರಣ ಇಸಿಬಿಗೆ ಸಂಭವಿಸಿದ ಭಾರೀ ನಷ್ಟವನ್ನು ತುಂಬಿಕೊಡಲು ಬಿಸಿಸಿಐ ಎರಡು ಆಫ‌ರ್‌ಗಳನ್ನು ಮುಂದಿಟ್ಟಿದೆ ಎಂಬುದಾಗಿ ಕಾರ್ಯದರ್ಶಿ ಜಯ್‌ ಶಾ ಅಧಿಕೃತವಾಗಿ ಪ್ರಕಟಿಸಿದ್ದಾರೆ.

Advertisement

ಮುಂದಿನ ವರ್ಷದ ಜುಲೈಯಲ್ಲಿ ಸೀಮಿತ ಓವರ್‌ಗಳ ಸರಣಿಗಾಗಿ ಇಂಗ್ಲೆಂಡಿಗೆ ತೆರಳುವ ಭಾರತ ತಂಡ 3ರ ಬದಲು 5 ಟಿ20 ಪಂದ್ಯಗಳನ್ನು ಆಡಲು ಬಯಸಿದೆ. ಅಥವಾ ಪ್ರತ್ಯೇಕವಾಗಿ ಒಂದು ಟೆಸ್ಟ್‌ ಪಂದ್ಯವನ್ನೂ ಆಡಲು ಸಿದ್ಧವಿದೆ ಎಂಬುದಾಗಿ ಶಾ ತಿಳಿಸಿದರು. ಮುಂದಿನ ನಿರ್ಧಾರವೇನಿದ್ದರೂ ಇಸಿಬಿಗೆ ಸೇರಿದ್ದು ಎಂಬುದಾಗಿ ಅವರು ಹೇಳಿದರು.

ಆದರೆ ಬಿಸಿಸಿಐ ಇಲ್ಲೊಂದು ಷರತ್ತು ಒಡ್ಡಿದೆ. ಪಂದ್ಯ ಕೊರೊನಾ ಕಾರಣಕ್ಕೆ ರದ್ದಾಗಿದೆ ಎಂದು ಇಸಿಬಿ ಅಂಗೀಕರಿಸಬೇಕು. ಇಸಿಬಿ ವಾದಿಸುತ್ತಿರುವಂತೆ, ಪಂದ್ಯದಿಂದ ಭಾರತವೇ ಹಿಂದೆ ಸರಿದಿದೆ ಎಂದು ಬಿಸಿಸಿಐ ಸಿದ್ಧವಿಲ್ಲ. ಕೊರೊನಾ ಕಾರಣಕ್ಕೆ ರದ್ದಾಗಿದೆ ಎಂದಾದರೆ ಇಂಗ್ಲೆಂಡ್‌ ಮಂಡಳಿಗೆ ವಿಮಾ ಮೊತ್ತ ಸಿಗುವುದಿಲ್ಲ. ಹಾಗಂತ ಬಿಸಿಸಿಐ ತಾನೇ ಹಿಂದೆ ಸರಿದಿದೆ ಎಂದಾದರೆ ಇಂಗ್ಲೆಂಡ್‌ ಮಂಡಳಿಗೆ ವಿಮೆ ಸಿಗುತ್ತದೆ. ಆದರೆ ಇಲ್ಲಿ ಭಾರತಕ್ಕೆ ನಷ್ಟವಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಐಸಿಸಿಯೇ ತೀರ್ಪು ನೀಡುವುದು ಖಚಿತವಾದರೆ, ಭಾರತ ಪಂದ್ಯ ಬಿಟ್ಟುಕೊಟ್ಟಿರುವುದರಿಂದ ಇಂಗ್ಲೆಂಡ್‌ ಗೆದ್ದಿದೆ ಎಂದು ನಿರ್ಧರಿಸಲಾಗುತ್ತದೆ. ಹಾಗಾಗಿ ಹಗ್ಗಜಗ್ಗಾಟ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next