Advertisement

ಬಿಸಿಸಿಐನಿಂದ ಅರ್ಜುನಕ್ಕೆಬುಮ್ರಾ ಹೆಸರು ಶಿಫಾರಸು?

07:56 AM May 15, 2020 | mahesh |

ನವದೆಹಲಿ: ಕೇಂದ್ರಸರ್ಕಾರದಿಂದ ನೀಡಲ್ಪಡುವ ಪ್ರತಿಷ್ಠಿತ ಕ್ರೀಡಾ ಪ್ರಶಸ್ತಿಗಳಿಗೆ ಅರ್ಜಿ ಕರೆಯಲಾಗಿದ್ದು, ಅರ್ಜುನ ಪ್ರಶಸ್ತಿಗೆ ಕ್ರಿಕೆಟ್‌ ವಲಯದಿಂದ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಜಸ್ಪ್ರೀತ್ ಬುಮ್ರಾ ಹೆಸರು ಶಿಫಾರಸು ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಬುಮ್ರಾ ಹೊರತಾಗಿ ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಹೆಸರು ಕೂಡ ಕೇಳಿ ಬಂದಿದೆ. ಆದರೆ ಬಿಸಿಸಿಐ ಯಾರ ಹೆಸರನ್ನು ಅಂತಿಮಗೊಳಿಸುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಬುಮ್ರಾ ಸದ್ಯ ಐಸಿಸಿ ಬೌಲಿಂಗ್‌ ವಿಭಾಗದಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಆಟಗಾರರು ನೀಡಿದ ಪ್ರದರ್ಶನ ಆಧಾರದಲ್ಲಿ ಅರ್ಜುನ ಪ್ರಶಸ್ತಿಗೆ ಕ್ರಿಕೆಟಿಗರ ಹೆಸರು ಶಿಫಾರಸು ಮಾಡಲಾಗುತ್ತದೆ ಎಂದು
ಬಿಸಿಸಿಐ ಮೂಲಗಳು ತಿಳಿಸಿವೆ. 26 ವರ್ಷದ ಬುಮ್ರಾ ಭಾರತದ ಪರ ಇದುವರೆಗೆ ಒಟ್ಟು 14 ಟೆಸ್ಟ್‌ ಆಡಿ 68 ವಿಕೆಟ್‌ ಕಬಳಿಸಿದ್ದಾರೆ. 64 ಏಕದಿನ ಕ್ರಿಕೆಟ್‌ ಪಂದ್ಯಗಳನ್ನು ಆಡಿ 104 ವಿಕೆಟ್‌ ಉರುಳಿಸಿದ್ದಾರೆ. ಹಾಗೂ 50 ಟಿ20 ಪಂದ್ಯಗಳಿಂದ 59 ವಿಕೆಟ್‌ ಪಡೆದಿದ್ದಾರೆ.

Advertisement

ಖೇಲ್‌ ರತ್ನಕ್ಕೆ ಮೌದ್ಗಿಲ್‌ ಹೆಸರು: ಭಾರತೀಯ ರೈಫ‌ಲ್‌ ಸಂಸ್ಥೆ (ಎನ್‌ಆರ್‌ಎಐ) ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ಖೇಲ್‌ ರತ್ನಕ್ಕೆ ಅಂಜುಮ್‌ ಮೌದ್ಗಿಲ್‌ ಹೆಸರನ್ನು ಶಿಫಾರಸು ಮಾಡಿದೆ. ಕೋಚ್‌ ಜಸ್ಪಾಲ್‌ ರಾಣಾ ಹೆಸರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ, ಪಿಸ್ತೂಲ್‌ ಶೂಟರ್‌ ಗಳಾದ ಸೌರಭ್‌ ಚೌಧರಿ, ಅಭಿಷೇಕ್‌ ವರ್ಮ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next