Advertisement

ಬಿಸಿಸಿಐ ಪ್ರಧಾನ ಕಚೇರಿ ಮುಂಬೈನಿಂದ ಬೆಂಗ್ಳೂರಿಗೆ ಶಿಫ್ಟ್ ?

06:35 AM Feb 06, 2018 | |

ನವದೆಹಲಿ: ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯನ್ನು ದೇವನಹಳ್ಳಿಗೆ ವರ್ಗಾಯಿಸುವ ವಿಚಾರದ ಬೆನ್ನಲ್ಲೇ ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಪ್ರಧಾನ ಕಚೇರಿಯನ್ನು ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಿಸುವ ಕುರಿತು ಚಿಂತನೆ ನಡೆದಿದೆ.

Advertisement

ಎಲ್ಲ ಅಂದುಕೊಂಡಂತೆ ನಡೆದರೆ ಮುಂದಿನ ಕೆಲ ವರ್ಷಗಳಲ್ಲಿ ಬಿಸಿಸಿಐ ತನ್ನ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ವರ್ಗಾಯಿಸಲಿದೆ. ಈ ಕುರಿತಂತೆ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ.ಖನ್ನಾ ಮಂಡಳಿಯ ಎಲ್ಲ ಸದಸ್ಯರಿಗೆ ಪತ್ರ ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪತ್ರದಲ್ಲಿ ಸದಸ್ಯರಿಂದ ಸಲಹೆ ಸೂಚನೆ ಕೇಳಲಾಗಿದೆ. ಇದಕ್ಕೆ ಮುಂದಿನ ಮಂಡಳಿ ಸಭೆಯಲ್ಲಿ ಸದಸ್ಯರಿಂದ ಪ್ರತಿಕ್ರಿಯೆ ಕೇಳಲಾಗಿದೆ.

ಸಿ.ಕೆ.ಖನ್ನಾ ಪತ್ರದಲ್ಲೇನಿದೆ?: ಸದ್ಯ ಮುಂಬೈನ ವಾಂಖೇಡೆಯಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿ ಸಣ್ಣದು. ಮೂಲಸೌಕರ್ಯದ ಹೆಚ್ಚಿಸಲು ಅಲ್ಲಿ ಅವಕಾಶವಿಲ್ಲ. ಬೆಂಗಳೂರಿನಲ್ಲಿ ನಮ್ಮದೇ 40 ಎಕರೆ ಜಾಗವಿದೆ. ವಿಮಾನ ನಿಲ್ದಾಣಕ್ಕೂ ಹತ್ತಿರವಿದೆ. ಮಹತ್ವದ ಎನ್‌ಸಿಎ ರೂಪಿಸುವ ಗುರಿ ಹೊಂದಲಾಗಿದ್ದು ಅಲ್ಲಿಗೆ ಬಿಸಿಸಿಐ ಪ್ರಧಾನ ಕಚೇರಿಯನ್ನು ವರ್ಗಾಯಿಸಬಹುದು. ಎನ್‌ಸಿಎ ಜತೆಗೆ ಬಿಸಿಸಿಐ ಇರುವುದರಿಂದ ಹೆಚ್ಚಿನ ಖರ್ಚು ವೆಚ್ಚಗಳಿಗೂ ಬ್ರೇಕ್‌ ಹಾಕಬಹುದಾಗಿದೆ. ಸದ್ಯ ಬಿಸಿಸಿಐ 5 ಸ್ಟಾರ್‌ ಹೋಟೆಲ್‌ಗ‌ಳಲ್ಲಿ ಸಭೆ ಆಯೋಜಿಸುತ್ತಿರುವುದರಿಂದ ಅತಿಯಾದ ಖರ್ಚು ವೆಚ್ಚಗಳಾಗುತ್ತಿದೆ. ಇದರ ಹೊರ ಬಿಸಿಸಿಐ ಮೇಲೆ ಬೀಳುತ್ತಿದೆ. ಇದನ್ನೆಲ್ಲ ತಡೆಯುವ ಪ್ರಯತ್ನ ಆಗಬೇಕಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next