ಮುಂಬೈ: ಭಾರತದ ಟಿ20 ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಘೋಷಿಸಿರುವುದು ಗೊತ್ತೆ ಇದೆ. ಈ ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ಅವರು ಟಿ20 ತಂಡದಲ್ಲಿ ವಿರಾಟ್ ಕೇವಲ ಆಟಗಾರನಾಗಿ ಇರಲಿದ್ದಾರೆ. ಇನ್ನೆರಡು ದಿನಗಳಲ್ಲಿ ನೂತನ ನಾಯಕನ ಹೆಸರನ್ನು ಘೋಷಿಸಿಲಿದೆ ಎಂದು ವರದಿಯಾಗಿದೆ.
ಸದ್ಯದ ಉಪನಾಯಕ ರೋಹಿತ್ ಶರ್ಮಾ ಅವರು ಮುಂದಿನ ನಾಯಕನಾಗುವುದು ಬಹುತೇಕ ಖಚಿತವಾಗಿದೆ. ಆದರೆ ಟಿ20 ವಿಶ್ವಕಪ್ ಬಳಿಕ ನಡೆಯಲಿರುವ ನ್ಯೂಜಿಲ್ಯಾಂಡ್ ವಿರುದ್ಧ ನಡೆಯುವ ಟಿ20 ಸರಣಿಗೆ ರೋಹಿತ್ ಶರ್ಮಾ ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಹೀಗಾಗಿ ತಾತ್ಕಾಲಿಕ ನಾಯಕನನ್ನೂ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಆದರೆ ಬಿಸಿಸಿಐ ಮೂಲಗಳ ಪ್ರಕಾರ ಟಿ20 ತಂಡ ಮಾತ್ರವಲ್ಲದೆ ಏಕದಿನ ತಂಡದ ನಾಯಕತ್ವವೂ ಬದಲಾಗುವ ಸಾಧ್ಯತೆಯಿದೆ. ಭವಿಷ್ಯದ ದೃಷ್ಠಿಯಿಂದ ಬಿಸಿಸಿಐ ಈ ನಡೆಗೆ ಮುಂದಾಗಿದ್ದು, ಏಕದಿನ ಮತ್ತು ಟಿ20 ಎರಡೂ ತಂಡಕ್ಕೂ ರೋಹಿತ್ ರನ್ನೇ ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದೆ. ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರಿಯಲಿದ್ದಾರೆ ಎನ್ನುತ್ತದೆ ವರದಿ.
ಇದನ್ನೂ ಓದಿ:ಟಿ20 ನಾಯಕನಾಗಿ ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿದ ಮಾರ್ಗನ್
ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಕೋಚ್ ಆಗುವುದು ಬಹುತೇಕ ಅಂತಿಮವಾಗಿದ್ದು, ಹೊಸ ತಂಡವನ್ನು ಕಟ್ಟಲು ಬಿಸಿಸಿಐ ಮುಂದಾಗಿದೆ.