Advertisement
“ಅಲ್ ಜಜೀರಾ’ ಅರೆಬಿಕ್ ಚಾನೆಲ್‌ನಲ್ಲಿ 2018ರಂದು “ಕ್ರಿಕೆಟ್ಸ್ ಮ್ಯಾಚ್ ಫಿಕ್ಸರ್’ ಎಂಬ ಸಾಕ್ಷ್ಯಚಿತ್ರವೊಂದು ಪ್ರಸಾರವಾಗಿತ್ತು. ಇದರಲ್ಲಿ ಭಾರತ ಪಾಲ್ಗೊಂಡ ಎರಡು ಪಂದ್ಯಗಳ ಉಲ್ಲೇಖವಿತ್ತು. ಇವುಗಳೆಂದರೆ, ಇಂಗ್ಲೆಂಡ್ ಎದುರಿನ 2016ರ ಚೆನ್ನೈ ಟೆಸ್ಟ್ ಹಾಗೂ ಆಸ್ಟ್ರೇಲಿಯ ವಿರುದ್ಧ ಆಡಲಾದ 2017ರ ರಾಂಚಿ ಟೆಸ್ಟ್ ಪಂದ್ಯ. ಇವೆರಡೂ ಫಿಕ್ಸ್ ಆಗಿದ್ದವು ಎಂದು ಇದರಲ್ಲಿ ಆರೋಪಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಕೂಡಲೇ ತನಿಖೆ ಆರಂಭಿಸಿತ್ತು. ಇದಕ್ಕಾಗಿ ನಾಲ್ವರು ಸ್ವತಂತ್ರ ಸದಸ್ಯರನ್ನೊಳಗೊಂಡ “ಬೆಟ್ಟಿಂಗ್ ಮತ್ತು ಕ್ರಿಕೆಟಿಂಗ್ ಸ್ಪೆಷಲಿಸ್ಟ್’ಗಳ ತನಿಖಾ ದಳವನ್ನು ನೇಮಿಸಿತು. ಆ ಇಡೀ ಕಾರ್ಯಕ್ರಮ ಕೇವಲ ಕಪೋಲಕಲ್ಪಿತ ರೀತಿಯಲ್ಲಿದೆಯೇ ಹೊರತು ಫಿಕ್ಸಿಂಗ್‌ಗೆ ಸಂಬಂಧಿಸಿದಂತೆ ಯಾವುದೇ ನಿಖರ ಸಾಕ್ಷ್ಯಾಧಾರಗಳನ್ನು ಹೊಂದಿಲ್ಲ ಎಂದು ತನಿಖಾ ತಂಡ ವರದಿ ಸಲ್ಲಿಸಿದೆ. ಹೀಗಾಗಿ ಈ ಪಂದ್ಯಗಳು ಫಿಕ್ಸ್ ಆಗಿವೆ ಎಂಬ ತೀರ್ಮಾನಕ್ಕೆ ಬರಲಾಗದು ಎಂಬುದಾಗಿ ಐಸಿಸಿ ತಿಳಿಸಿದೆ. ಜತೆಗೆ ಈ ಸಾಕ್ಷ್ಯಚಿತ್ರ ನಿರ್ಮಿಸಿದವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರಲು ನಿರ್ಧರಿಸಿದೆ.