Advertisement

ಲೈಂಗಿಕ ಕಿರುಕುಳ ಆರೋಪ: ಬಿಸಿಸಿಐ ಸಿಇಓ ಜೊಹಿರಿಗೆ ಕ್ಲೀನ್‌ ಚಿಟ್‌

05:21 PM Nov 21, 2018 | Team Udayavani |

ಹೊಸದಿಲ್ಲಿ : ಬಿಸಿಸಿಐ ಸಿಇಓ ರಾಹುಲ್‌ ಜೊಹಿರಿ ಅವರನ್ನು ಮೂವರು ಸದಸ್ಯರ ಆಡಳಿತಗಾರರ ಸಮಿತಿಯ ತನಿಖಾ ಮಂಡಳಿಯು ಲೈಂಗಿಕ ಕಿರುಕುಳದ ಆರೋಪಗಳಿಂದ ಮುಕ್ತಗೊಳಿಸಿ ಕ್ಲೀನ್‌ ಚಿಟ್‌ ನೀಡಿದೆ. ಮಾತ್ರವಲ್ಲದೆ ಅವರು ತತ್‌ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ ಎಂದು ಹೇಳಿದೆ. 

Advertisement

ಇಬ್ಬರು ಮಹಿಳೆಯರು ಮಾಡಿದ್ದ  ದುರ್ನಡತೆಯ ಲೈಂಗಿಕ ಆರೋಪಗಳು ಕೇವಲ ಸೃಷ್ಟಿಸಲ್ಪಟ್ಟದೆಂದು ತನಿಖಾ ಮಂಡಳಿ ಹೇಳಿದ್ದು ಅರೋಪಗಳನ್ನು ಸಾರಾಸಗಟು ತಳ್ಳಿಹಾಕಿದೆ.

ಲೈಂಗಿಕ ಕಿರುಕುಳ ಮತ್ತು ದುರ್ನಡತೆಯ ಆರೋಪ ಕೇಳಿ ಬಂದಾಕ್ಷಣ ಜೊಹಿರಿ ಅವರಿಗೆ ಬಲವಂತದ ಮೂರು ವಾರಗಳ ರಜೆಯಲ್ಲಿ ಕಳುಹಿಸಲಾಗಿತ್ತು. ತನಿಖಾ ಮಂಡಳಿಯ ಓರ್ವ ಸದಸ್ಯರು ಜೊಹಿರಿ ಗೆ ಲಿಂಗ ಸೂಕ್ಷ್ಮತೆಯ ಆಪ್ತ ಸಮಾಲೋಚನೆಯನ್ನು ಶಿಫಾರಸು ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next