Advertisement

BCCI ಸೆಂಟರ್‌ ಆಫ್ ಎಕ್ಸಲೆನ್ಸ್‌ ಕ್ರಿಕೆಟ್‌ ಅಕಾಡೆಮಿ ದಿಢೀರ್‌ ಉದ್ಘಾಟನೆ

11:58 PM Sep 29, 2024 | Team Udayavani |

ಬೆಂಗಳೂರು: ಪ್ರತಿಭಾನ್ವಿತ ಯುವ ಕ್ರಿಕೆಟಿಗರಿಗೆ ಉನ್ನತ ಮಟ್ಟದ ತರಬೇತಿ, ಗಾಯಾಳು ಕ್ರಿಕೆಟಿಗರ ಪುನಶ್ಚೇತನಕ್ಕಾಗಿ 24 ವರ್ಷ ಹಿಂದೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಆವರಣ ದಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯ (NCA) ಸ್ವಂತ ಸಮುಚ್ಚಯ ರವಿವಾರ ದಿಢೀರನೆ ಉದ್ಘಾಟನೆ ಗೊಂಡಿದೆ ಇದಕ್ಕೆ ಸಂಬಂಧಿಸಿ ದಂತೆ ಯಾವುದೇ ಪ್ರಕಟನೆ ಇರಲಿಲ್ಲ, ಮಾಧ್ಯಮಗಳಿಗೂ ಆಹ್ವಾನ ಇರಲಿಲ್ಲ. ಇದು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸುಮಾರು 35 ಕಿ.ಮೀ. ದೂರದ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಿಂಗಹಳ್ಳಿಯಲ್ಲಿ ನಿರ್ಮಾಣಗೊಂಡಿದೆ.

Advertisement

ಉದ್ಘಾಟನಾ ಸಮಾರಂಭ ಸರಳವಾಗಿ ನಡೆಯಿತು. ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಕಾರ್ಯದರ್ಶಿ ಜಯ್‌ ಶಾ, ಐಪಿಎಲ್‌ ಅಧ್ಯಕ್ಷ ರಾಜೀವ್‌ ಶುಕ್ಲಾ ಮೊದಲಾದವರು ಉಪಸ್ಥಿತರಿದ್ದರು.

ದೇವನಹಳ್ಳಿಯ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ದಲ್ಲೇ ತಲೆಯೆತ್ತಿರುವ ನೂತನ ಎನ್‌ಸಿಎ ಕೇಂದ್ರದ ಹೆಸರನ್ನು ಬದಲಾಯಿಸಲಾಗಿದ್ದು, “ಬಿಸಿಸಿಐ ಸೆಂಟರ್‌ ಆಫ್ ಎಕ್ಸಲೆನ್ಸ್‌’ ಎಂದು ಇಡಲಾಗಿದೆ. ಇಲ್ಲಿ ಕ್ರಿಕೆಟಿಗರಿಗಷ್ಟೇ ಅಲ್ಲ, ಇತರ ಕ್ರೀಡಾಪಟುಗಳ ತರಬೇತಿ, ಪುನಶ್ಚೇತನಕ್ಕೂ ಸೌಲಭ್ಯವಿದೆ.

ವಿಶ್ವದರ್ಜೆಯ ಕೇಂದ್ರ
ನೂತನ ಕೇಂದ್ರದಲ್ಲಿ ವಿಶ್ವದರ್ಜೆಯ ಮೂಲಸೌಕರ್ಯಗಳಿವೆ. ಇವು ಕ್ರಿಕೆಟರ್‌ಗಳ ಕೌಶಲ ಅಭಿವೃದ್ಧಿಗೆ ಅಗತ್ಯ ವಾತಾವರಣ ಕಲ್ಪಿಸುವುದನ್ನು ನಿರೀಕ್ಷಿಸಲಾಗಿದೆ. ಇಲ್ಲಿ ಅಂತಾ ರಾಷ್ಟ್ರೀಯ ದರ್ಜೆಯ 3 ಕ್ರಿಕೆಟ್‌ ಮೈದಾನ ಗಳು, 45 ಅಭ್ಯಾಸದ ಅಂಕಣ ಗಳಿವೆ. ಇದರಲ್ಲಿ ಪ್ರಮುಖ ಮೈದಾನ 85 ಯಾರ್ಡ್‌ ಬೌಂಡರಿಯನ್ನು ಒಳಗೊಂಡಿದೆ. ಇದರ ಜತೆಗೆ ಒಳಾಂಗಣ ಕ್ರಿಕೆಟ್‌ ಪಿಚ್‌ಗಳು, ಒಲಿಂಪಿಕ್‌ ಗಾತ್ರದ ಈಜುಕೊಳ, ಅತ್ಯಾಧುನಿಕ ಜಿಮ್‌, 16,000 ಚದರ ಅಡಿಯ ಪುನಶ್ಚೇತನ ಕೇಂದ್ರ, ಕ್ರಿಕೆಟರ್‌ಗಳ ಅಭ್ಯಾಸ ಮತ್ತು ಕ್ರೀಡಾ ವಿಜ್ಞಾನಕ್ಕೆ ಸಂಬಂಧಿಸಿದ ಸೌಕರ್ಯಗಳನ್ನು ನೂತನ ಸೆಂಟರ್‌ ಆಫ್ ಎಕ್ಸಲೆನ್ಸ್‌ ಒಳಗೊಂಡಿದೆ ಎಂಬುದಾಗಿ ಬಿಸಿಸಿಐ ತಿಳಿಸಿದೆ.

2000ದಲ್ಲಿ ಆರಂಭ
ಕ್ರಿಕೆಟ್‌ ತರಬೇತಿ, ಮಾರ್ಗದರ್ಶನ ಮತ್ತು ಗಾಯ ಕ್ಕೀಡಾದ ಕ್ರಿಕೆಟರ್‌ಗಳ ಪುನ ಶ್ಚೇತನ ಉದ್ದೇಶದಿಂದ 24 ವರ್ಷ ಗಳ ಹಿಂದೆ, ಅಂದರೆ 2000ನೇ ಇಸವಿ ಯಲ್ಲಿ ಮಾಜಿ ಕ್ರಿಕೆಟರ್‌, ಬಿಸಿಸಿಐ ಮಾಜಿ ಅಧ್ಯಕ್ಷ ರಾಜ್‌ಸಿಂಗ್‌ ಡುಂಗರ್‌ ಪುರ್‌, ಬೆಂಗಳೂರಿನಲ್ಲಿ ಎನ್‌ಸಿಎ ಸ್ಥಾಪನೆ ಯಾಗಲು ಕಾರಣರಾದರು. ಬಿಸಿಸಿಐನ ಅಂಗಸಂಸ್ಥೆಯಾಗಿರುವ ಎನ್‌ಸಿಎಗೆ ಈಗ ಮಾಜಿ ಕ್ರಿಕೆಟರ್‌, ವಿವಿಎಸ್‌ ಲಕ್ಷ್ಮಣ್‌ ನಿರ್ದೇಶಕರಾಗಿದ್ದಾರೆ.

Advertisement

2008ಕ್ಕೆ ಭೂಮಿ, 2022ಕ್ಕೆ ಅಡಿಗಲ್ಲು
ನೂತನ ರಾಷ್ಟ್ರೀಯ ಅಕಾಡೆಮಿಗೆ 2008ರಲ್ಲೇ ಭೂಮಿ ನೀಡಲಾಗಿತ್ತು. ಆದರೆ ಬಹಳ ವರ್ಷಗಳ ಕಾಲ ಅದರ ಯಾವುದೇ ಕೆಲಸಗಳು ನಡೆದಿರಲಿಲ್ಲ. 2022 ರಲ್ಲಿ ಕಾಮಗಾರಿ ಆರಂಭಕ್ಕೆ ಅಡಿಗಲ್ಲು ಹಾಕ ಲಾಯಿತು.
ಈ ಕಾರ್ಯಕ್ರಮದಲ್ಲಿ ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಕಾರ್ಯದರ್ಶಿ ಜಯ್‌ ಶಾ, ಉಪಾಧ್ಯಕ್ಷ ರಾಜೀವ್‌ ಶುಕ್ಲಾ, ಖಜಾಂಚಿ ಅರುಣ್‌ ಧುಮಾಲ್‌ ಪಾಲ್ಗೊಂಡಿದ್ದರು.

ಕ್ರಿಕೆಟ್‌ ಮಾತ್ರವಲ್ಲ, ಇತರ ಕ್ರೀಡಾಪಟುಗಳಿಗೂ ನೆರವು
ಬೆಂಗಳೂರಿನ ಈ ನೂತನ ಕ್ರಿಕೆಟ್‌ ಅಕಾಡೆಮಿ, ದೇಶದಲ್ಲಿ ಕ್ರಿಕೆಟ್‌ ಮತ್ತು ಕ್ರೀಡಾ ಕ್ರಾಂತಿಗೆ ನಾಂದಿ ಹಾಡುವ ಆಶಯವಿದೆ. ಏಕೆಂದರೆ ಇದು ಕ್ರೀಡಾ ಕೌಶಲಗಳ ಕೇಂದ್ರವಾಗಿರಲಿದ್ದು, ಇದರ ಜತೆಗೆ ದೇಶದಲ್ಲಿ ಇತರ ಕ್ರೀಡೆಗಳ ಬೆಳವಣಿಗೆಗೂ ಸಹಕಾರಿಯಾಗುವ ನಿರೀಕ್ಷೆಯಿದೆ. ಈಗ ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯ್‌ ಶಾ ಹೇಳಿರುವಂತೆ, ಬಿಸಿಸಿಐ ಸದಾ ಭಾರತೀಯ ಕ್ರೀಡಾಪಟುಗಳು ಮತ್ತು ಭಾರತೀಯ ಒಲಿಂಪಿಕ್‌ ಸಂಸ್ಥೆಯ (ಐಒಎ) ನೆರವಿಗೆ ನಿಲ್ಲಲಿದೆ. ಹೀಗಾಗಿ ಹೊಸ ಎನ್‌ಸಿಎ, ನೀರಜ್‌ ಚೋಪ್ರಾ ಅವರಂತಹ ಒಲಿಂಪಿಕ್‌ ಆ್ಯತ್ಲೀಟ್‌ಗಳಿಗೂ ಅಗತ್ಯ ಸಂದರ್ಭದಲ್ಲಿ ಸೌಲಭ್ಯಗಳನ್ನು ಒದಗಿಸುವ ನೆಲೆಯಲ್ಲಿ ಸಿದ್ಧಗೊಂಡಿದೆ.

86 ಕ್ರಿಕೆಟ್‌ ಪಿಚ್‌!
ಈ ಕೇಂದ್ರ ಒಟ್ಟು 86 ಕ್ರಿಕೆಟ್‌ ಪಿಚ್‌ಗಳನ್ನು ಒಳಗೊಂಡಿದೆ. ಇದರಲ್ಲಿ 45 ಔಟ್‌ಡೋರ್‌ ಪಿಚ್‌ಗಳಾಗಿವೆ. ಮಂಡ್ಯ, ಮುಂಬಯಿ ಮತ್ತು ಕಾಲಾಹಾಂಡಿಯ ಮಣ್ಣನ್ನು ಬಳಸಲಾಗಿದೆ. ಪ್ರತೀ ಪಿಚ್‌ ನಡುವೆ ಲಂಡನ್‌ನಿಂದ ತರಿಸಲಾದ ನೆಟ್‌ಗಳನ್ನು ಅಳವಡಿಸಲಾಗಿದೆ. ನೆಟ್ಸ್‌ ಪಕ್ಕದಲ್ಲೇ ಫೀಲ್ಡಿಂಗ್‌ ಅಭ್ಯಾಸ ನಡೆಸುವ ವ್ಯವಸ್ಥೆ ಇದೆ. ಮೋಂಡೊ ಸಿಂಥೆಟಿಕ್‌ ಸಿಸ್ಟಮ್‌ ಮತ್ತು ಪ್ರಾಕೃತಿಕ ಹುಲ್ಲಿನಿಂದ ರೂಪಿಸಲಾದ 6 ಸಿಂಥೆಟಿಕ್‌ ಟ್ರ್ಯಾಕ್‌ಗಳಿವೆ.
ಒಳಾಂಗಣ ಪ್ರ್ಯಾಕ್ಟೀಸ್‌ ವಿಭಾಗ ಕೂಡ ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡಿದೆ. ಇಲ್ಲಿ ಯುಕೆ ಮತ್ತು ಆಸ್ಟ್ರೇಲಿಯದ ಟಫ್ìಗಳನ್ನು ಹಾಕಲಾಗಿದೆ. 80 ಮೀಟರ್‌ಗಳಷ್ಟು ಮಾಮೂಲು ರನ್‌ಅಪ್‌ ಅವಕಾಶವೂ ಇದೆ. ಸಹಜ ಬೆಳಕು ಮತ್ತು ಆಹ್ಲಾದಕರ ವಾತಾವರಣ ಇಲ್ಲಿನ ವೈಶಿಷ್ಟ್ಯ

Advertisement

Udayavani is now on Telegram. Click here to join our channel and stay updated with the latest news.

Next